ETV Bharat / bharat

ಕೋಳಿಗಳಿಗೆ ನೀಡುತ್ತಿದ್ದ ಕೊಲಿಸ್ಟಿನ್​ ಆ್ಯಂಟಿ ಬಯೋಟಿಕ್​​​ ಬ್ಯಾನ್​ ಮಾಡಿದ ಆರೋಗ್ಯ ಇಲಾಖೆ - ಕೊಲಿಸ್ಟಿನ್ ಆ್ಯಂಟಿಬಯೋಟಿಕ್​ ಬ್ಯಾನ್

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಆರೋಗ್ಯ ಇಲಾಖೆ, ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಕೊಲಿಸ್ಟಿನ್ ಆ್ಯಂಟಿ ಬಯೋಟಿಕ್​ ಬ್ಯಾನ್ ಮಾಡಿದೆ.

ಕೊಲಿಸ್ಟಿನ್ ಆ್ಯಂಟಿಬಯೋಟಿಕ್​ ಬ್ಯಾನ್
author img

By

Published : Jul 28, 2019, 8:40 PM IST

ನವದೆಹಲಿ: ಕೋಳಿ ಸೇರಿದಂತೆ ಇತರ ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಕೊಲಿಸ್ಟಿನ್​ ಎಂಬ ಆ್ಯಂಟಿ ಬಯೋಟಿಕ್​ನ (ಪ್ರತಿರೋಧಕ) ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ಆರೋಗ್ಯ ಇಲಾಖೆ ಬ್ಯಾನ್​ ಮಾಡಿದೆ.

ಕೋಳಿ ಸಾಕಣೆ ಕೇಂದ್ರ ಹಾಗೂ ಆಕ್ವಾ ಕೃಷಿಯಲ್ಲಿ ಕೋಳಿಗಳಿಗೆ ರೋಗ ಬರದಂತೆ ತಡೆಯಲು ಮತ್ತು ಅವುಗಳು ದಷ್ಟಪುಷ್ಟವಾಗಿ ಬೆಳವಣಿಗೆ ಹೊಂದಲು ಹಾಗೂ ಅವನ್ನು ತಿನ್ನುವ ಮನುಷ್ಯರ ದೇಹದಲ್ಲಿ ಪ್ರತಿರೋಧ ವೃದ್ಧಿಸಲು ಈ ಕೊಲಿಸ್ಟಿನ್​ ಎಂಬ ಆ್ಯಂಟಿ ಬಯೋಟಿಕ್ ನೀಡಲಾಗುತ್ತಿತ್ತು. 1940ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಅಡಿಯಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಮೇರೆಗೆ ಕೊಲಿಸ್ಟಿನ್​ ಮೇಲೆ ನಿಷೇಧ ಹೇರಲಾಗಿದೆ.

ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದ ಬಳಿಕ ಈ ಅಧಿಸೂಚನೆ ಹೊರಡಿಸಲಾಗಿದೆ. ದೇಶದಲ್ಲಿ ಔಷಧಿಗಳಿಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳ ಬಗ್ಗೆ ಸರ್ಕಾರಕ್ಕೆ ಉನ್ನತ ಸಲಹೆಗಳನ್ನು ನೀಡುವ ಸಂಸ್ಥೆಯಾದ ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ ನೀಡಿದ ಮಾಹಿತಿಗಳನ್ನಾಧರಿಸಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇದನ್ನು ಬ್ಯಾನ್​ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.