ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಯ ಮೇಲ್ವಿಚಾರಣೆಯಲ್ಲಿ ಆಡಳಿತ ಮಂಡಳಿ ಒದಗಿಸಿದ ಮಾಹಿತಿಯ ಪ್ರಕಾರ, 2020 ರ ಜೂನ್ 30 ರ ವೇಳೆಗೆ ದೇಶದಲ್ಲಿ 12,55,786 ಅಲೋಪತಿ ವೈದ್ಯರು ನೋಂದಾಯಿಸಿಕೊಂಡಿದ್ದಾರೆ. ಅಂದರೆ, ಶೇ. 80 ರಷ್ಟು ವೈದ್ಯರ ಲಭ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು 10.05 ಲಕ್ಷ ವೈದ್ಯರು ಸಕ್ರಿಯ ಸೇವೆಗಾಗಿ ಲಭ್ಯವಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದು ವಿಶ್ವ ಸಂಸ್ಥೆಯ ವೈದ್ಯ-ಜನಸಂಖ್ಯಾ ಅನುಪಾತ 1:1000 ದ ವಿರುದ್ಧವಾಗಿ, ಪ್ರಸ್ತುತ ಇರುವ ದೇಶದ 135 ಕೋಟಿ ಅಂದಾಜು ಜನಸಂಖ್ಯೆಗೆ 1: 343 ಅನುಪಾತದಲ್ಲಿ ವೈದ್ಯರನ್ನು ಒದಗಿಸುತ್ತದೆ.
ಪ್ರಸ್ತುತ ದೇಶದಲ್ಲಿ ಸುಮಾರು 7.88 ಲಕ್ಷ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ( ಎಯುಹೆಚ್) ವೈದ್ಯರಿದ್ದಾರೆ. ಈ ಪೈಕಿ, ಸುಮಾರು 6.30 ಲಕ್ಷ ವೈದ್ಯರು ಸಕ್ರಿಯ ಸೇವೆಗೆ ಲಭ್ಯವಿದ್ದಾರೆ. ಅಲೋಪತಿ ವೈದ್ಯರು 1: 825 ಅನುಪಾತದಲ್ಲಿ ಇದ್ದಾರೆ.
ಕೋವಿಡ್-19 ಅಗತ್ಯ ವಸ್ತುಗಳ ಲಭ್ಯತೆ :
ವಿವಿಧ ಸರ್ಕಾರಿ (ಕೇಂದ್ರ ಮತ್ತು ರಾಜ್ಯ) ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ರಾಜ್ಯವಾರು ವಿವರಗಳು ಈ ರೀತಿಯಿದೆ (16 ಸೆ 2020 ರವರೆಗೆ)
ಕ್ರ.ಸಂ | ರಾಜ್ಯ/ ಕೇಂದ್ರಾಡಳಿತ ಪ್ರದೇಶ | ಐಸಿಯು ಬೆಡ್ | ವೆಂಟಿಲೇಟರ್ |
1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪ | 18 | 18 |
2 | ಆಂಧ್ರ ಪ್ರದೇಶ | 1,367 | 484 |
3 | ಅರುಣಾಚಲ ಪ್ರದೇಶ | 43 | 11 |
4 | ಅಸ್ಸೋಂ | 329 | 278 |
5 | ಬಿಹಾರ | 218 | 262 |
6 | ಚಂಡೀಗಢ | 60 | 30 |
7 | ಚತ್ತೀಸ್ ಗಢ | 338 | 270 |
8 | ದಾದ್ರ & ನಗರ ಹವೇಲಿ | 46 | 46 |
9 | ದಮನ್ & ದಿಯು | 21 | 11 |
10 | ದೆಹಲಿ | 1,075 | 956 |
11 | ಗೋವಾ | 35 | 117 |
12 | ಗುಜರಾತ್ | 1,454 | 1,840 |
13 | ಹರಿಯಾಣ | 214 | 165 |
14 | ಹಿಮಾಚಲ ಪ್ರದೇಶ | 69 | 75 |
15 | ಜಮ್ಮು& ಕಾಶ್ಮೀರ | 284 | 236 |
16 | ಜಾರ್ಖಂಡ್ | 103 | 74 |
17 | ಕರ್ನಾಟಕ | 1,238 | 853 |
18 | ಕೇರಳ | 747 | 357 |
19 | ಲಡಾಖ್ | 31 | 25 |
20 | ಲಕ್ಷ ದ್ವೀಪ | 3 | 2 |
21 | ಮಧ್ಯಪ್ರದೇಶ | 721 | 308 |
22 | ಮಹಾರಾಷ್ಟ್ರ | 4,039 | 2,848 |
23 | ಮಣಿಪುರ | 20 | 24 |
24 | ಮೇಘಾಲಯ | 69 | 71 |
25 | ಮಿಝೋರಾಂ | 40 | 58 |
26 | ನಾಗಾಲ್ಯಾಂಡ್ | 50 | 25 |
27 | ಒಡಿಶ್ಶಾ | 222 | 140 |
28 | ಪುದುಚೇರಿ | 57 | 50 |
29 | ಪಂಜಾಬ್ | 348 | 111 |
30 | ರಾಜಸ್ಥಾನ | 939 | 602 |
31 | ಸಿಕ್ಕಿಂ | 20 | 57 |
32 | ತಮಿಳುನಾಡು | 3,595 | 2,134 |
33 | ತೆಲಂಗಾಣ | 815 | 303 |
34 | ತ್ರಿಪುರ | 73 | 19 |
35 | ಉತ್ತರ ಪ್ರದೇಶ | 2,110 | 1,512 |
36 | ಉತ್ತರಾಖಂಡ | 376 | 423 |
37 | ಪಶ್ಚಿಮ ಬಂಗಾಳ | 406 | 340 |
ಧನ ಸಹಾಯ:
ಕೋವಿಡ್-19 ರೋಗ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಎನ್ಹೆಚ್ಎಂ ಅಡಿಯಲ್ಲಿ 2019-20 ಅವಧಿಯಲ್ಲಿ 1,113.21 ಕೋಟಿ ರೂ. ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ. ಜನವರಿ 2020 ರಿಂದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಪೂರೈಸಲು ಸರ್ಕಾರ ಆದೇಶಿಸಿದೆ.
ಕ್ರ.ಸಂ | ವಸ್ತುಗಳು | ಪ್ರಮಾಣ | ಮೌಲ್ಯ ( ಕೋಟಿಗಳಲ್ಲಿ) |
1 | ಎನ್-95 ಮಾಸ್ಕ್ | 45909199 | 491.15 |
2 | ಪಿಪಿಇ ಕಿಟ್ | 13222688 | 1963.41 |
3 | ವೆಂಟಿಲೇಟರ್ | 600963 | 2568.40 |
ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ನೆರವಿನ ಪ್ಯಾಕೇಜ್ ಅಡಿಯಲ್ಲಿ ಕೇಂದ್ರ ಸರ್ಕಾರದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿದ ಧನ ಸಹಾಯದ ಅಂಕಿ ಅಂಶಗಳು ಹೀಗಿವೆ.
ಕ್ರ.ಸಂ | ರಾಜ್ಯ/ ಕೇಂದ್ರಾಡಳಿತ ಪ್ರದೇಶ | 2020-21 |
1 | ಅಂಡಮಾನ್ & ನಿಕೋಬಾರ್ | 9.82 |
2 | ಆಂಧ್ರ ಪ್ರದೇಶ | 199.87 |
3 | ಅರುಣಾಚಲ ಪ್ರದೇಶ | 17.11 |
4 | ಅಸ್ಸೋಂ | 119.10 |
5 | ಬಿಹಾರ | 113.31 |
6 | ಚಂಡೀಗಢ | 9.39 |
7 | ಚತ್ತೀಸ್ ಗಢ | 41.89 |
8 | ದಾದ್ರ & ನಗರ ಹವೇಲಿ & ದಮನ್ & ದಿಯು | 1.77 |
9 | ದೆಹಲಿ | 255.12 |
10 | ಗೋವಾ | 5.93 |
11 | ಗುಜರಾತ್ | 170.79 |
12 | ಹರಿಯಾಣ | 106.79 |
13 | ಹಿಮಾಚಲ ಪ್ರದೇಶ | 43.97 |
14 | ಜಮ್ಮು & ಕಾಶ್ಮೀರ | 143.09 |
15 | ಜಾರ್ಖಂಡ್ | 37.95 |
16 | ಕರ್ನಾಟಕ | 182.15 |
17 | ಕೇರಳ | 309.97 |
18 | ಲಡಾಖ್ | 20.00 |
19 | ಲಕ್ಷದ್ವೀಪ | 0.22 |
20 | ಮಧ್ಯಪ್ರದೇಶ | 182.15 |
21 | ಮಹಾರಾಷ್ಟ್ರ | 393.82 |
22 | ಮಣಿಪುರ | 11.63 |
23 | ಮೇಘಾಲಯ | 10.85 |
24 | ಮಿಝೋರಾಂ | 7.61 |
25 | ನಾಗಾಲ್ಯಾಂಡ್ | 6.77 |
26 | ಒಡಿಶಾ | 65.49 |
27 | ಪುದುಚೇರಿ | 3.06 |
28 | ಪಂಜಾಬ್ | 131.22 |
29 | ರಾಜಸ್ಥಾನ | 285.01 |
30 | ಸಿಕ್ಕಿಂ | 5.44 |
31 | ತಮಿಳುನಾಡು | 511.64 |
32 | ತೆಲಂಗಾಣ | 256.89 |
33 | ತ್ರಿಪುರ | 13.55 |
34 | ಉತ್ತರ ಪ್ರದೇಶ | 334.01 |
35 | ಉತ್ತರಾಖಂಡ | 54.98 |
36 | ಪಶ್ಚಿಮ ಬಂಗಾಳ | 191.14 |
ಒಟ್ಟು | 4,256.79 |
ವಿಶೇಷ ಕೋವಿಡ್ ಆಸ್ಪತ್ರೆಗಳು ಮತ್ತು ಸೆಂಟರ್ಗಳು :
ದೆಹಲಿ, ಬಿಹಾರ (ಪಾಟ್ನಾ ಮತ್ತು ಮುಝಪ್ಪರ್ಪುರ್) ದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) 1 ಸಾವಿರದಿಂದ 10 ಸಾವಿರ ಪ್ರತ್ಯೇಕ ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಬೃಹತ್ ಕೋವಿಡ್-19 ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಿದೆ.
ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ನೆರವಿನ ಪ್ಯಾಕೇಜ್ ಅಡಿಯಲ್ಲಿ ಅಗತ್ಯ ಹಣಕಾಸಿನ ನೆರವು ನೀಡಲಾಗುತ್ತದೆ. 2020-21ರ ಹಣಕಾಸು ವರ್ಷದಲ್ಲಿ 4,256.81 ಕೋಟಿ ರೂ.ಗಳನ್ನು ಇದಕ್ಕಾಗಿ ಬಿಡುಗಡೆ ಮಾಡಲಾಗಿದೆ.
ಆರೋಗ್ಯ ಉಪಕರಣಗಳ ಖರೀದಿಗಾಗಿ ರಾಜ್ಯಗಳಿಗೆ ಸಹಕಾರ ನೀಡಲಾಗ್ತಿದೆ. ಇದುವರೆಗೆ,1.42 ಕೋಟಿ ಪಿಪಿಇ ಕಿಟ್‌ಗಳು, 3.45 ಕೋಟಿ ಎನ್ -95 ಮಾಸ್ಕ್, 10.84 ಕೋಟಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳು, 30,841 ವೆಂಟಿಲೇಟರ್ ಮತ್ತು 1,02,400 ಆಮ್ಲಜನಕ ಸಿಲಿಂಡರ್‌ಗಳನ್ನು ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರಬರಾಜು ಮಾಡಿದೆ. ( 20 ಸೆಪ್ಟೆಂಬರ್ 2020 ರವರೆಗೆ)
ರಾಜ್ಯ | ಸೌಲಭ್ಯಗಳು | ಒಟ್ಟು ಐಸೋಲೇಶನ್ ಬೆಡ್ (ಐಸಿಯು ಹೊರತುಪಡಿಸಿ) | ಒ2 ಹೊಂದಿರುವ ಹಾಸಿಗಳು | ಐಸಿಯು ಬೆಡ್ | ವೆಂಟಿಲೇಟರ್ಗಳು |
ಅಂಡಮಾನ್ ನಿಕೋಬಾರ್ | 23 | 1173 | 165 | 24 | 20 |
ಆಂಧ್ರ ಪ್ರದೇಶ | 620 | 111497 | 16991 | 4892 | 1511 |
ಅರುಣಾಚಲ ಪ್ರದೇಶ | 104 | 2854 | 171 | 62 | 16 |
ಅಸ್ಸೋಂ | 388 | 30516 | 1694 | 398 | 285 |
ಬಿಹಾರ | 357 | 36617 | 6814 | 650 | 836 |
ಚಂಡೀಗಢ | 21 | 3439 | 885 | 113 | 46 |
ಚತ್ತೀಸ್ಗಢ | 235 | 23359 | 1892 | 778 | 532 |
ದಾದ್ರ & ನಗರ ಹವೇಲಿ | 5 | 1190 | 200 | 46 | 46 |
ದಿಯು & ದಾಮನ್ | 7 | 559 | 139 | 21 | 11 |
ದೆಹಲಿ | 162 | 25682 | 10271 | 2700 | 1414 |
ಗೋವಾ | 45 | 1678 | 178 | 134 | 184 |
ಗುಜರಾತ್ | 713 | 49685 | 14755 | 4956 | 3219 |
ಹರಿಯಾಣ | 802 | 56486 | 5985 | 2227 | 1068 |
ಹಿಮಾಚಲ ಪ್ರದೇಶ | 66 | 3413 | 761 | 86 | 119 |
ಜಮ್ಮು & ಕಾಶ್ಮೀರ | 297 | 23122 | 3213 | 402 | 447 |
ಜಾರ್ಖಂಡ್ | 280 | 18241 | 3184 | 411 | 255 |
ಕರ್ನಾಟಕ | 1485 | 109936 | 16840 | 4847 | 2650 |
ಕೇರಳ | 287 | 37880 | 3741 | 2346 | 937 |
ಲಡಾಖ್ | 5 | 276 | 109 | 37 | 31 |
ಲಕ್ಷದ್ವೀಪ | 11 | 102 | 21 | 14 | 10 |
ಮಧ್ಯಪ್ರದೇಶ | 964 | 70960 | 14606 | 2673 | 882 |
ಮಹಾರಾಷ್ಟ್ರ | 3360 | 347890 | 55077 | 15208 | 7105 |
ಮಣಿಪುರ | 38 | 2471 | 358 | 47 | 39 |
ಮೇಘಾಲಯ | 61 | 2384 | 345 | 83 | 87 |
ಮಿಝೋರಾಂ | 58 | 2734 | 306 | 44 | 65 |
ನಾಗಾಲ್ಯಾಂಡ್ | 14 | 681 | 142 | 54 | 28 |
ಒಡಿಶಾ | 262 | 32296 | 7540 | 1410 | 661 |
ಪುದುಚೇರಿ | 17 | 1318 | 339 | 110 | 76 |
ಪಂಜಾಬ್ | 287 | 26829 | 4284 | 1661 | 719 |
ರಾಜಸ್ಥಾನ | 417 | 43206 | 8449 | 1797 | 955 |
ಸಿಕ್ಕಿಂ | 14 | 1065 | 229 | 20 | 59 |
ತಮಿಳುನಾಡು | 1281 | 195259 | 26628 | 8835 | 4238 |
ತೆಲಂಗಾಣ | 56 | 15604 | 2794 | 1782 | 518 |
ತ್ರಿಪುರ | 32 | 2424 | 250 | 74 | 22 |
ಉತ್ತರ ಪ್ರದೇಶ | 757 | 154428 | 23789 | 5906 | 2552 |
ಉತ್ತರಾಖಂಡ | 436 | 30596 | 2192 | 506 | 558 |
ಪಶ್ಚಿಮ ಬಂಗಾಳ | 1225 | 70691 | 12635 | 1284 | 823 |
ಒಟ್ಟು | 15192 | 1538541 | 247972 | 66638 | 33024 |