ETV Bharat / bharat

ಕ್ವಾರಂಟೈನ್ ಅವಧಿ ಕಡಿತದ ಮನವಿ ಪರಿಗಣಿಸಿ: ಕೇಂದ್ರಕ್ಕೆ ನಿರ್ದೇಶನ ನೀಡಿದ ಹೈಕೋರ್ಟ್ - ಕ್ವಾರಂಟೈನ್​

ಕೇರಳ ಸರ್ಕಾರವು 14 ದಿನಗಳ ಕ್ವಾರಂಟೈನ್​ ಅನ್ನು 7 ದಿನಗಳಿಗೆ ಸೀಮಿತಗೊಳಿಸಲು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸುವಂತೆ ಕೇರಳ ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

COURT
COURT
author img

By

Published : May 13, 2020, 3:48 PM IST

ಕೊಚ್ಚಿ (ಕೇರಳ): ಕೇರಳಕ್ಕೆ ವಿದೇಶದಿಂದ ಮತ್ತು ಇತರ ರಾಜ್ಯಗಳಿಂದ ಬರುವ ಜನರಿಗೆ ನಿಗದಿಪಡಿಸಿದ ಸಾಂಸ್ಥಿಕ ಕ್ವಾರಂಟೈನ್​ ಅಧಿಯನ್ನು ಕಡಿಮೆ ಮಾಡುವಂತೆ ಕೇರಳ ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯನ್ನು ತಕ್ಷಣ ಪರಿಗಣಿಸುವಂತೆ ಕೇರಳ ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಎಂ ಆರ್ ಅನಿತಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಕೇರಳ ಸರ್ಕಾರವು 14 ದಿನಗಳ ಕ್ವಾರಂಟೈನ್​ ಅನ್ನು 7 ದಿನಗಳಿಗೆ ಸೀಮಿತಗೊಳಿಸುವ ಅರ್ಜಿಯನ್ನು ಪರಿಗಣಿಸಲು ನಿರ್ದೇಶನ ನೀಡಿದೆ.

ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚಿಸಿ ಕ್ವಾರಂಟೈನ್ ಕಡಿತಗೊಳಿಸುವ ವಿಷಯವನ್ನು ಪರಿಗಣಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಕೇರಳದ ಮನವಿಯನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.