ETV Bharat / bharat

ಹೇಳಿಕೆ ಬದಲಿಸಲು ಹಥ್ರಾಸ್​ ಸಂತ್ರಸ್ತೆ ಕುಟುಂಬಕ್ಕೆ ಜಿಲ್ಲಾಧಿಕಾರಿ​​ ಬೆದರಿಕೆ?: ವಿಡಿಯೋ - ಹಥ್ರಾಸ್​ ಸಂತ್ರಸ್ತೆ ಕುಟುಂಬಕ್ಕೆ ಬೆದರಿಕೆ

ಹಥ್ರಾಸ್​ ಸಂತ್ರಸ್ತೆ ಕುಟುಂಬಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಪ್ರವೀಣ್​ ಕುಮಾರ್​​ ಹೇಳಿಕೆ ಬದಲಿಸುವಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Hathras Family threaten by District Magistrate

author img

By

Published : Oct 1, 2020, 8:10 PM IST

ಹಥ್ರಾಸ್​​: ಉತ್ತರ ಪ್ರದೇಶದ ಹಥ್ರಾಸ್​​ನಲ್ಲಿ ನಡೆದ ಅತ್ಯಾಚಾರ ಪ್ರಕರಣ ವಿಚಾರವಾಗಿ ಉತ್ತರಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ವೈರಲ್​​ ಆಗಿರುವ ವಿಡಿಯೋದಲ್ಲಿ ಜಿಲ್ಲಾಧಿಕಾರಿ ಸಂತ್ರಸ್ತೆ ಕುಟುಂಬಕ್ಕೆ ಹೇಳಿಕೆ ಬದಲಿಸುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಹಥ್ರಾಸ್​ ಸಂತ್ರಸ್ತೆ ಕುಟುಂಬಕ್ಕೆ ಜಿಲ್ಲಾಧಿಕಾರಿ​​ ಬೆದರಿಕೆ?

ಜಿಲ್ಲಾಧಿಕಾರಿ ಪ್ರವೀಣ್​ ಕುಮಾರ್​ ಮಾತನಾಡಿರುವ ವಿಡಿಯೋ ವೈರಲ್​​​ ಆಗಿದ್ದು, ಇದರಲ್ಲಿ ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳಬೇಡಿ. ಮಾಧ್ಯಮ ಇಂದು ಇರುತ್ತೆ, ನಾಳೆ ಹೋಗುತ್ತದೆ. ನೀವು ಹೇಳಿಕೆಯನ್ನ ಬದಲಾಯಿಸಬೇಕೇ ಅಥವಾ ಬೇಡವೇ ಎಂದು ಮತ್ತೊಮ್ಮೆ ನಿರ್ಧರಿಸಿ ಎಂದು ತಿಳಿಸಿದ್ದಾರೆ.

ಹಥ್ರಾಸ್​ ಸಂತ್ರಸ್ತೆ ಮೇಲೆ ಅತ್ಯಾಚಾರವೇ ನಡೆದಿಲ್ಲ: ಯುಪಿ ಎಡಿಜಿ ಪ್ರಶಾಂತ್​ ಕುಮಾರ್​!

ಸಂತ್ರಸ್ತೆ ಕುಟುಂಬದ ಮನೆಯಲ್ಲಿ ಅಧಿಕಾರಿಗಳು ಕುಳಿತಿದ್ದು, ಮಾಧ್ಯಮಗಳು ಇದೀಗ ಕುರುಡಾಗಿವೆ. ನಾಳೆ ಬೇರೆ ಸುದ್ದಿ ಪ್ರಸಾರ ಮಾಡುತ್ತವೆ. ಆಗ ಉಳಿಯುವುದು ಕೇವಲ 2- 4 ಜನರು ಮಾತ್ರ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಹೇಳಿಕೆ ಬದಲಾಯಿಸಬೇಕೇ? ಅಥವಾ ಬೇಡವೇ ಎಂದು ನಿರ್ಧರಿಸಿ ಎಂದಿದ್ದಾರೆ.

ಸೆಪ್ಟೆಂಬರ್​​ 14ರಂದು ತನ್ನ ತಾಯಿ ಜತೆ ಸಂತ್ರಸ್ತೆ ಹೊಲಕ್ಕೆ ತೆರಳಿದ್ದಳು. ಈ ವೇಳೆ, ಗ್ರಾಮದ ಕೆಲ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ತದನಂತರ ಕತ್ತು ಹಿಸುಕಲು ಯತ್ನಿಸಿದ್ದಾರೆ. ಜತೆಗೆ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನ ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.