ETV Bharat / bharat

ಜಗತ್ತು ವಿಚಿತ್ರ ಸ್ಥಿತಿಗೆ ತಲುಪಿದೆಯೇ? - ಕೊರೊನಾ ವೈರಸ್‌

ಈ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಎರಡು ಮಹತ್ವದ ಸಂಗತಿಗಳು ನಮ್ಮ ಮನಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತಿದೆ. ಸಾಮಾಜಿಕ ಅಂತರ ಮತ್ತು ಸ್ವಯಂ ಪ್ರತ್ಯೇಕಿಸುವಿಕೆ ಎಂಬ ಎರಡು ಶಬ್ದಗಳು ನಮ್ಮ ಮನಸಿನಲ್ಲಿ ಶಾಶ್ವತವಾಗಿ ನೆಲೆಯೂರುವ ಸಾಧ್ಯತೆಯಿದೆ. ಈ ಹೊಸ ಮತ್ತು ವಿಚಿತ್ರ ಸನ್ನಿವೇಶವು ಕೊರೊನಾ ವೈರಸ್‌ನಿಂದ ಬಾಧಿತರಾಗಿರಲಿ ಅಥವಾ ಬಚಾವಾಗಿದ್ದಿರಲಿ, ನಮ್ಮನ್ನು ಆವರಿಸಿಕೊಂಡಿದೆ.

Has the world reached a strange state?
ಜಗತ್ತು ವಿಚಿತ್ರ ಸ್ಥಿತಿಗೆ ತಲುಪಿದೆಯೇ?
author img

By

Published : Apr 2, 2020, 9:19 PM IST

ಹೈದರಾಬಾದ್: ರೊಮೇನಿಯಾದ ಯೆಹೂದಿ ವಲಸಿಗ ಜಾಕೋಬ್ ಬುರಿನೆಸ್ಕು ನ್ಯೂಯಾರ್ಕ್‌ ನಗರದ ಲೋವರ್ ಈಸ್ಟ್ ಸೈಡ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಸ್ವಚ್ಛಗೊಳಿಸುವ ವ್ಯಾಪಾರ ನಡೆಸುತ್ತಿದ್ದಾರೆ. ಇವರು ಯಿದ್ದಿಶ್‌ ರಂಗಭೂಮಿ ಸಮುದಾಯದಲ್ಲೂ ಸಕ್ರಿಯವಾಗಿದ್ದಾರೆ.

1918 ರಲ್ಲಿ ಸ್ಪಾನಿಶ್ ಫ್ಲು ಎಂದು ಹೇಳಲಾದ ಸಾಂಕ್ರಾಮಿಕ ರೋಗ ಹಬ್ಬಿದಾಗ, ನಾಟಕದಲ್ಲಿನ ತನ್ನ ಸ್ನೇಹಿತರ ಆರೈಕೆ ಮಾಡಿದ್ದ. ಕೊನೆಗೆ ಆತನಿಗೇ ಈ ಫ್ಲೂ ಅಂಟಿಕೊಂಡುಬಿಟ್ಟಿತ್ತು. ಈ ಸಾಂಕ್ರಾಮಿಕ ರೋಗದಲ್ಲಿ ಸಾವನ್ನಪ್ಪಿದ 50 ಮಿಲಿಯನ್‌ ಜನರಲ್ಲಿ ಈತನೂ ಒಬ್ಬನಾಗಿದ್ದ.

ಎರಡು ದಶಗಳ ಹಿಂದೆ ಟೈಪಿಂಗ್‌ಶಾನ್‌ ಎಂಬ ಹಾಂಕಾಂಗ್‌ನ ಚೀನಾದಲ್ಲಿನ ಅತಿ ದಟ್ಟ ಜನಸಂಖ್ಯೆಯ ನಗರದಲ್ಲಿ ಬಬೂನಿಕ್ ಪ್ಲೇಗ್‌ ಎಂಬ ಹೆಮ್ಮಾರಿ ಬಾಧಿಸಿತ್ತು. ಅನಾರೋಗ್ಯ ಹೊಂದಿದ್ದವರನ್ನು ಮನೆಗಳಿಂದ ಬಲವಂತವಾಗಿ ಎಳೆದು ತಂದು ಬ್ರಿಟಿಷ್ ವಸಾಹತು ಶಾಹಿ ಆಡಳಿತವು ರೋಗ ನಿಯಂತ್ರಣ ಮಾಡಲು ಪ್ರಯತ್ನಿಸಿತ್ತು. ಆಗ ಸಾಂಸ್ಕೃತಿಕ ಸಂಘರ್ಷ ಕೂಡ ನಡೆದು, ನಗರದ ಇತಿಹಾಸದಲ್ಲಿ ಕರಾಳ ಅಧ್ಯಾಯವನ್ನೇ ಬರೆಯಿತು. ಚೀನಾದ ಯುನ್ನಾನ್‌ನಲ್ಲಿ ಹುಟ್ಟಿದ ಈ ರೋಗ ಬ್ರಿಟಿಷ್‌ ಇಂಡಿಯಾಗೂ ಹರಡಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತ್ತು.

ಅದಕ್ಕೂ ಎರಡು ದಶಗಳಿಗೂ ಮುನ್ನ ಭೌತಶಾಸ್ತ್ರಜ್ಞ ಮತ್ತು ವಿಜ್ಞಾನಿ ರಾಬರ್ಟ್ ಕೋಚ್‌, ಅಂತ್ರಾಕ್ಸ್ ಎಂಬ ಬ್ಯಾಕ್ಟೀರಿಯಾವನ್ನು ಕಂಡುಕೊಂಡಿದ್ದಾಗಿ ಘೋಷಿಸಿದ್ದರು. ಇದು ಆಧುನಿಕ ಬ್ಯಾಕ್ಟೀರಿಯಾಲಜಿಯ ಹುಟ್ಟಿಗೆ ಕಾರಣವಾಯಿತು. ಇದು ಕ್ಷಯ ಮತ್ತು ಕಾಲರಾ ಎಂದು ಕರೆಯಲಾಗುವ ಮೈಕ್ರೋಬಯಲ್‌ ಏಜೆಂಟ್‌ಗಳನ್ನು ಕಂಡುಕೊಳ್ಳಲೂ ಅವರ ಈ ಪರಿಶ್ರಮ ನೆರವಾಯಿತು. ಇದರಿಂದಾಗಿ ಸಾಂಕ್ರಾಮಿಕ ರೋಗದ ಕಲ್ಪನೆಯನ್ನು ಒಟ್ಟಂದದಲ್ಲಿ ಹಿಡಿದಿಟ್ಟು, ನಂತರದ ದಿನಗಳಲ್ಲಿ ಸಾರ್ವಜನಿಕ ಆರೋಗ್ಯ ಕುರಿತು ಹಲವು ಸಂಶೋಧನೆಗಳು ನಡೆಯಲು ಅನುಕೂಲವಾಯಿತು. ವಿಶ್ವದಾದ್ಯಂತ ಸಾಂಕ್ರಾಮಿಕ ರೋಗಗಳು ಹರಡುವುದನ್ನು ನಿಧಾನಗೊಳಿಸಲು ಮತ್ತು ತಡೆಯಲು ಅವರ ಈ ಸಂಶೋಧನೆಗಳು ನೆರವಾದವು. ಅವರಿಗೆ 1905 ರಲ್ಲಿ ನೊಬೆಲ್ ಪುರಸ್ಕಾರವನ್ನೂ ಪ್ರದಾನ ಮಾಡಲಾಯಿತು.

ಮೂರು ಖಂಡಗಳು ಮತ್ತು ಅರ್ಧ ಶತಮಾನಗಳ ಈ ಅವಧಿಯಲ್ಲಿ ನಡೆದ ಈ ಘಟನೆಗಳು ಒಂದಕ್ಕೊಂದು ಸಂಬಂಧವಿಲ್ಲದ ಮತ್ತು ಪ್ರತ್ಯೇಕವಾದದ್ದಾಗಿವೆ. ಆದರೆ ನಾವು ನಗರಗಳಲ್ಲಿ ಹೇಗೆ ವಾಸಿಸುತ್ತಿದ್ದೇವೆಯೋ, ಹಾಗೆಯೇ ನಮ್ಮೊಳಗೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ವಾಸಿಸುತ್ತಿವೆ ಎಂಬ ವಾಸ್ತವವಾಂಶವನ್ನು ನಮಗೆ ಈ ಎಲ್ಲ ಘಟನೆಗಳೂ ಹೇಳುತ್ತಿವೆ.

ಒಬ್ಬ ರಾಷ್ಟ್ರೀಯ ನಾಯಕರು ಇದನ್ನು ಚೈನೀಸ್ ರೋಗ ಎಂದು ಕರೆದಿರುವುದು ಸಾಂಕ್ರಾಮಿಕ ರೋಗವನ್ನು ಅದು ಹುಟ್ಟಿದ ಮೂಲದಿಂದ ಗುರುತಿಸುವ ನಮ್ಮ ಕೀಳು ಅಭಿರುಚಿಯನ್ನು ಪ್ರದರ್ಶಿಸುತ್ತದೆ. ಈಹಿಂದೆ ಸಿಫಿಲಿಸ್‌ ಅನ್ನು ನೆಪೋಲಿಯನ್ನರು ಫ್ರೆಂಚ್‌ ರೋಗ ಎಂದು ಕರೆದಿದ್ದರು. ಇದನ್ನೇ ಫ್ರೆಂಚರು ಇಟಾಲಿಯನ್‌ ರೋಗ ಎಂದು ಕರೆದಿದ್ದರು. ಡಚ್ಚರು ಇದನ್ನು ಸ್ಪಾನಿಶ್ ಎಂದು ಹಾಗೂ ರಷ್ಯನ್ನರು ಇದನ್ನು ಪೋಲೆಂಡ್‌ ರೊಗ ಎಂದು ಕರೆದಿದ್ದರು. ಇನ್ನೊಂದೆಡೆ ಟರ್ಕಿಯ ಜನರು ಇದನ್ನು ಕ್ರಿಶ್ಚಿಯನ್‌ ರೋಗ ಎಂದೂ ಹೆಸರಿಸಿದ್ದರು.

ಇದೇ ರೀತಿ, ಈ ರೋಗದ ವಿಚಾರದಲ್ಲೂ ಹಿಂದಿನ ಘಟನೆಗಳೇ ಮರುಕಳಿಸುತ್ತಿರುವಂತಿದೆ. ಮೊದಲು ಚೀನಾ, ನಂತರ ದಕ್ಷಿಣ ಕೊರಿಯಾ, ಇರಾನ್, ಇಟಲಿ... ಈಗ ಇಡೀ ವಿಶ್ವವೇ ಗುಪ್ತ ಶತ್ರು ವಿರುದ್ಧ ಹೋರಾಟ ನಡೆಸುತ್ತಿದೆ. ಈ ವೈರಸ್‌ ವಿರುದ್ಧ ನಾವು ರಣಾಂಗಣದಲ್ಲಿ ಹೋರಾಟ ನಡೆಸಬೇಕಿದೆ ಅಥವಾ ಬ್ರಿಟಿಷ್ ಪ್ರಧಾನಿ ವಿವರಿಸಿದಂತೆ ಪ್ಯಾಕ್ ಮಾಡಿ ಕಳುಹಿಸಬೇಕಿದೆ.

ಸಾಂಕ್ರಾಮಿಕ ರೋಗ ಹಬ್ಬಿದಾಗ ಅನಿಶ್ಚಿತತೆಯೂ ಇದರೊಂದಿಗೆ ಬರುತ್ತದೆ. 20ನೇ ಶತಮಾನದ ಆರಂಭದಲ್ಲಿ ನ್ಯೂಯಾರ್ಕ್‌ನಲ್ಲಿ ಜಾಕೋಬ್‌ ಬುರಿನೆಸ್ಕು ಆಗಲೀ ಅಥವಾ ಹುಬೈನಲ್ಲಿ ಕಳೆದ ವರ್ಷ ಮಧ್ಯವಯಸ್ಕ ರೋಗಿಯಾಗಲೀ ಈ ರೋಗ ತನ್ನನ್ನು ಹೇಗೆ ಆವರಿಸಿಕೊಂಡಿತು, ಎಲ್ಲಿಂದ ಇದು ಹಬ್ಬಿತು ಎಂದಾಗಲೀ ಅಥವಾ ಎಲ್ಲಿಗೆ ನಿಲ್ಲುತ್ತದೆ ಎಂಬುದನ್ನಾಗಲೀ ತಿಳಿದಿರಲಿಲ್ಲ. ಸದ್ಯ ಸಂಶೋಧನೆ ನಡೆಸಲಾಗುತ್ತಿರುವ ಯಾವ ಔಷಧಗಳು ಮತ್ತು ಲಸಿಕೆಗಳು ರೋಗಿಗಳನ್ನು ಗುಣಪಡಿಸುತ್ತದೆ ಮತ್ತು ಕೋವಿಡ್ 19 ಇನ್ನಷ್ಟು ಜನರಿಗೆ ಹರಡುವುದನ್ನು ನಿಲ್ಲಿಸುತ್ತದೆ ಎಂಬುದು ತಿಳಿದಿಲ್ಲ.

ಸಾಂಕ್ರಾಮಿಕ ರೋಗಗಳು ಕೇವಲ ಸಾವಿನ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುವುದಷ್ಟೇ ಅಲ್ಲ, ನಮ್ಮ ಭವಿಷ್ಯವನ್ನೇ ಇವು ಕಗ್ಗತ್ತಲಿಗೆ ದೂಡುತ್ತದೆ. ಯಾರಿಗೆ ಇದು ತಗುಲಬಹುದು ಹಾಗೂ ಎಷ್ಟು ತೀವ್ರವಾಗಿ ಇರಬಹುದು? ಎಷ್ಟು ದಿನಗಳವರೆಗೆ ಈ ಸಾಂಕ್ರಾಮಿಕ ರೋಗ ಹರಡಬಹುದು? ವಿಶ್ವದ ಆರ್ಥಿಕತೆ ಯಾವ ಹಂತಕ್ಕೆ ಕುಸಿಯಬಹುದು ಅಥವಾ ಸಾಮಾಜಿಕ ರಚನೆಯ ಕಥೆ ಏನಾಗಬಹುದು ಹಾಗೂ ಇದು ಯಾವಾಗ ಮುಗೊಯುತ್ತದೆ? ಕೊನೆಯಲ್ಲಿ ನಮ್ಮ ಪರಿಸ್ಥಿತಿ ಹೇಗಾಗಿರುತ್ತದೆ ಎಂಬ ಯಾವ ಪ್ರಶ್ನೆಗೂ ನಮ್ಮ ಬಳಿ ಉತ್ತರ ಇರುವುದಿಲ್ಲ.

ಆದರೆ, ಈ ಸನ್ನಿವೇಶದಲ್ಲಿ ಎರಡು ಸಂಗತಿಗಳು ಮಾತ್ರ ಸ್ಪಷ್ಟವಾಗಿವೆ. ಸಾಮಾಜಿಕ ಅಂತರ ಮತ್ತು ಸ್ವಯಂ ಪ್ರತ್ಯೇಕಿಸಿಕೊಳ್ಳುವಿಕೆ. ಈ ಎರಡು ಹೊಸ ಪದಗುಚ್ಛಗಳು ಕೋವಿಡ್‌ 19 ಎಂಬ ಸಾಂಕ್ರಾಮಿಕ ರೋಗ ನಮ್ಮನ್ನು ಆವರಿಸಿಕೊಳ್ಳುತ್ತಿರುವುದನ್ನು ತಡೆಯುವ ತಂತ್ರವಾಗಿ ಬಳಕೆಯಾಗುತ್ತಿವೆ.

ಜಪಾನ್‌ನ ಹಿಕಿಕೊಮೊರಿ ಎಂಬ ವಿದ್ಯಮಾನವನ್ನು ಅಧ್ಯಯನ ನಡೆಸಿದವರಿಗೆ ಅರಿವಿಗೆ ಬರುವುದೇನೆಂದರೆ, ಡಿಜಿಟಲ್‌ ವ್ಯವಸ್ಥೆಗೆ ನಾವು ಹೆಚ್ಚು ತೆರೆದುಕೊಂಡಷ್ಟೂ ನಾವು ಮನೆಯೊಳಗೇ ಕೂರುತ್ತೇವೆ. ಇದು ವ್ಯಕ್ತಿಯ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಮತ್ತು ಇದು ಸಾಮಾಜಿಕವಾಗಿ ಪ್ರತ್ಯೇಕವಾಗಿರುವುದರ ಪ್ರಮುಖ ಹಿನ್ನಡೆಯೂ ಆಗಿದೆ. ಈಗ ನಾವು ಆಚರಿಸುತ್ತಿರುವ ಸ್ವಯಂ ಪ್ರತ್ಯೇಕಿಸಿಕೊಳ್ಳುವಿಕೆಯು ಈ ಹಿಂದಿನ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಸ್ವಯಂ ಪ್ರತ್ಯೇಕಿಸುವಿಕೆಗಿಂತ ಹೆಚ್ಚು ಸ್ವಯಂಪ್ರೇರಿತ ಹಾಗೂ ಉದಾರವಾದ ವಿಧಾನವಾಗಿದೆ. ಇದು ಎಲ್ಲ ಅಂಶಗಳಲ್ಲೂ ಅತ್ಯಂತ ವಿಭಿನ್ನ ಅನುಭವವೂ ಆಗಿದೆ. ಆದರೆ, ಇದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಮಾಡುವ ಗಂಭೀರ ಪರಿಣಾಮಗಳು ರೋಗವು ನಮ್ಮ ಮೇಲೆ ದೈಹಿಕವಾಗಿ ಮಾಡುವ ಪರಿಣಾಮದಷ್ಟೇ ತೀವ್ರವಾಗಿರಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.