ETV Bharat / bharat

ಮಧ್ಯಪ್ರದೇಶ ರಾಜಕೀಯ.. ಚೌಹಾಣ್ ಭದ್ರಕೋಟೆಯಲ್ಲಿ 'ಕೈ' ಸ್ಥಿತಿ ಅಧೋಗತಿ..!

ಬಿಹಾರ ಚುನಾವಣೆ ಹಾಗೂ ವಿವಿಧ ರಾಜ್ಯಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್​ಗೆ ಮುಖಭಂಗವಾಗಿದೆ. ಅಧಿಕಾರ ಸಿಕ್ಕರೂ ಅನುಭವಿಸಲಾಗದೇ ಅಧಿಕಾರದಿಂದ ದೂರ ಉಳಿದ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ..

congress in madhya pradesh
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​
author img

By

Published : Nov 23, 2020, 3:44 PM IST

ಭೋಪಾಲ್ (ಮಧ್ಯಪ್ರದೇಶ): ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆಯಾ? ಎಂಬ ಅನುಮಾನಗಳು ಕಾಡುತ್ತಿವೆ. ಕೆಲವು ದಿನಗಳ ಹಿಂದೆ ನಡೆದ ಬಿಹಾರ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ ನಂತರ ಭಾರತದ ರಾಜಕೀಯದಲ್ಲಿ ಅದರ ವಿಶ್ವಾಸಾರ್ಹತೆ ಬಗ್ಗೆ ಚರ್ಚೆಗಳಾಗುತ್ತಿವೆ.

ಮಧ್ಯಪ್ರದೇಶ ಉಪಚುನಾವಣೆಯಲ್ಲಿಯೂ ಕೂಡ ಕಾಂಗ್ರೆಸ್ ಸೋಲು ಅನುಭವಿಸಿದೆ. ಕೇವಲ ಎರಡು ವರ್ಷಗಳ ಹಿಂದೆ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತಾದರೂ ತನ್ನ ಶಾಸಕರ ಮೋಸದಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದಾದ ನಂತರ ಅಲ್ಲಿನ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿಯ ಬಗ್ಗೆ ನಿರಾಶೆ ಹೊಂದಿದ್ದರು.

ಶಿವರಾಜ್​​ಸಿಂಗ್ ಚೌಹಾಣ್​ ಕೋಟೆ..!

2018ರವರೆಗೆ ಸತತ 13 ವರ್ಷಗಳಿಂದ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ಸಿಎಂ ಆಗಿದ್ರು, ಇದಾದ ನಂತರ 2018ರಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿತಾದರೂ ಕೇವಲ 15 ತಿಂಗಳಲ್ಲೇ ಸರ್ಕಾರ ಪತನವಾಗಿ ಶಿವರಾಜ್​ ಸಿಂಗ್ ಚೌಹಾಣ್ ಮತ್ತೆ ಸಿಎಂ ಆಗಿ ಆಯ್ಕೆಯಾದರು.

ಮೊದಲಿಗೆ 2008ರಲ್ಲಿ ಸರ್ಕಾರ ರಚಿಸಿದ್ದ ಶಿವರಾಜ್ ಸಿಂಗ್ ಚೌಹಾಣ್ ಜನರ ನಾಯಕನಾಗಿ ಗುರುತಿಸಿಕೊಂಡಿದ್ದರು. ಅವರ ನಾಯಕತ್ವದ ಕಾರಣದಿಂದಾಗಿ 2013ರ ಚುನಾವಣೆಯಲ್ಲಿಯೂ ಕೂಡ ಭರ್ಜರಿ ಜಯ ಸಾಧಿಸಿದರು. ಅವರ ಸರ್ಕಾರದ ವೇಳೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಹಾಗೂ ಘೋಷಣೆಗಳು ಜನರಲ್ಲಿ ಅಸಮಾಧಾನ ಮೂಡಲು ಕಾರಣವಾಯಿತು.

ಕಾಂಗ್ರೆಸ್ ಅಧಿಕಾರ ಹಿಡಿದರೂ ಅನುಭವಿಸಲಾಗಲಿಲ್ಲ ..!

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಇದಕ್ಕೂ ಮೊದಲು ಚುನಾವಣೆಗಳಲ್ಲಿ 40 ಅಥವಾ 60 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗುತ್ತಿದ್ದ ಕಾಂಗ್ರೆಸ್​ಗೆ ಈ ಬಾರಿ ಬರೋಬ್ಬರಿ 114 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ತನ್ನದೇ ಪಕ್ಷದ ಸದಸ್ಯರ ಮೋಸದಿಂದಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಈಗ ಉಪಚುನಾವಣೆ ನಡೆದ 28 ಕ್ಷೇತ್ರಗಳಲ್ಲಿ 19 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗಳಿಸಿ ತೃಪ್ತಿ ಪಟ್ಟುಕೊಂಡಿದೆ. ಈ ಮೂಲಕ ಕಾಂಗ್ರೆಸ್ ಭವಿಷ್ಯ ಬಗ್ಗೆ ಹಾಗೂ ಅಲ್ಲಿನ ನಾಯಕರ ಬಗ್ಗೆ ಜನರಲ್ಲಿ ನಕಾರಾತ್ಮಕ ಯೋಚನೆಗಳು ಬಂದಿವೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.