ಚಂಡೀಗಢ(ಹರಿಯಾಣ): ರಾಷ್ಟ್ರವ್ಯಾಪಿ ಲಾಕ್‌ಡೌನ್ ಹಿನ್ನೆಲೆ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಈ ಸಮಯದಲ್ಲಿ ಹರಿಯಾಣ ಸರ್ಕಾರವು ದೂರದರ್ಶನದ ಮೂಲಕ ಶಿಕ್ಷಣ ನೀಡಲು ಮುಂದಾಗಿದೆ.
ಈ ಯೋಜನೆಯ ಪ್ರಕಾರ, ಹರಿಯಾಣ ಎಜುಸ್ಯಾಟ್‌ನ ನಾಲ್ಕು ಚಾನೆಲ್‌ಗಳನ್ನು ಈಗ ಕೇಬಲ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಕೇಬಲ್ ಆಪರೇಟರ್‌ಗಳಿಗೆ ಸಂಬಂಧ ಆದೇಶಗಳನ್ನು ನೀಡಲಾಗಿದೆ. ಇನ್ನು 52 ಲಕ್ಷ ವಿದ್ಯಾರ್ಥಿಗಳಿಗೆ ಇದರ ಸದುಪಯೋಗವಾಗಲಿದೆ.
ಸರ್ಕಾರ ಹೊರಡಿಸಿದ ಆದೇಶಗಳು ಇಂತಿದೆ:
ಹರಿಯಾಣ ಎಜುಸ್ಯಾಟ್ ಚಾನೆಲ್‌ಗಳನ್ನು ದೂರದರ್ಶನದ ಪ್ರಸಾರದಲ್ಲಿ ಸೇರಿಸುವ ಬಗ್ಗೆ ಶಿಕ್ಷಣ ನಿರ್ದೇಶನಾಲಯವು ಜಿಲ್ಲಾ ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿಗಳು, ಪ್ರಾಂಶುಪಾಲರು ಮತ್ತು ವಿಭಾಗ ಶಿಕ್ಷಣ ಅಧಿಕಾರಿಗಳಿಗೆ ಆದೇಶಗಳನ್ನು ಕಳುಹಿಸಿದೆ.
ಲಾಕ್ ಡೌನ್ ಸಮಯದಲ್ಲಿ ಶಾಲೆಗಳು ಮುಚ್ಚಿರುವ ಕಾರಣ, ಯಾವುದೇ ವಿದ್ಯಾರ್ಥಿಯು ಶೈಕ್ಷಣಿಕವಾಗಿ ನಷ್ಟವಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಹರಿಯಾಣ ಎಜುಸ್ಯಾಟ್‌ನ ನಾಲ್ಕು ಚಾನೆಲ್‌ಗಳು 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯವಾರು ತರಗತಿಗಳನ್ನು ಪ್ರಸಾರ ಮಾಡುತ್ತವೆ. ಎನ್‌ಸಿಇಆರ್‌ಟಿಯ ಚಾನೆಲ್‌ಗಳನ್ನು ಈಗ ಡಿಟಿಎಚ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ (ಡಿಡಿ, ಡಿಶ್ ಟಿವಿ, ವಿಡಿಯೋಕಾನ್, ಏರ್‌ಟೆಲ್, ಟಾಟಾ ಸ್ಕೈನಲ್ಲಿ ಇದು ಲಭ್ಯವಿರುತ್ತದೆ ).
ವಿಶೇಷ ಶುಲ್ಕಗಳಿಲ್ಲ:
ಈ ಚಾನಲ್‌ಗಳನ್ನು ವೀಕ್ಷಣೆ ಮಾಡಬೇಕು ಎಂದರೆ ಯಾವುದೇ ವಿಶೇಷ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಈ 4 ಚಾನೆಲ್‌ಗಳು ಮಾಸಿಕ ಆಧಾರದ ಮೇಲೆ ವರ್ಗವಾರು ಮತ್ತು ವಿಷಯವಾರು ತರಗತಿಗಳನ್ನು 8 ಗಂಟೆಗಳ ಕಾಲ ನಡೆಸುತ್ತವೆ. ಈ ಚಾನೆಲ್‌ಗಳ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಾರೆ.
ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಲು ಮತ್ತು ಅವರ ಅನುಮಾನಗಳನ್ನು ನಿವಾರಿಸಲು ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಇದಕ್ಕಾಗಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸಂಪರ್ಕದಲ್ಲಿರಬೇಕು. ಇನ್ನು ಜೆಇಇ, ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಮೊದಲ ಪ್ರಸಾರವನ್ನು ತಪ್ಪಿಸಿಕೊಂಡರೆ, ಪುನರಾವರ್ತಿತ ಪ್ರಸಾರಕ್ಕಾಗಿ ವ್ಯವಸ್ಥೆ ಕೂಡ ಮಾಡಲಾಗುವುದು.
ಹರಿಯಾಣ ಶಿಕ್ಷಣ ಸಚಿವ ಕನ್ವರ್ ಪಾಲ್ ಗುರ್ಜರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರವು ಎಲ್ಲಾ ಪ್ರಮುಖ ಕೇಬಲ್ ಆಪರೇಟರ್‌ಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅವರು ಈ ಚಾನೆಲ್‌ಗಳನ್ನು ಉಚಿತವಾಗಿ ಪ್ರಸಾರ ಮಾಡುತ್ತಾರೆ ಎಂದಿದ್ದಾರೆ.