ETV Bharat / bharat

ಹರಿಯಾಣ ಚುನಾವಣೆ: ಮ್ಯಾಜಿಕ್​ ನಂಬರ್​ಗೆ ಸಮಬಲದ ಹೋರಾಟ​, ಜೆಜೆಪಿ ಪಾತ್ರ ನಿರ್ಣಾಯಕ! - ಹರಿಯಾಣ ವಿಧಾನಸಭಾ ಫಲಿತಾಂಶ 2019

ಸದ್ಯದ ಎಲೆಕ್ಷನ್ ​ಟ್ರೆಂಡ್​ ಪ್ರಕಾರ ಜೆಜೆಪಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಬಲ ಪಕ್ಷಗಳಾದ ಕಾಂಗ್ರೆಸ್​ ಹಾಗೂ ಬಿಜೆಪಿ ಬಹುಮತ ಗಳಿಸುವಲ್ಲಿ ಭಾಗಶಃ ವಿಫಲಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಭೂಪಿಂದರ್ ಸಿಂಗ್​ ಹೂಡಾ, ಜೆಜೆಪಿ, ಐಎನ್​ಎಲ್​ಡಿ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಜೊತೆಗೂಡಿ ಸಮ್ಮಿಶ್ರ ಸರ್ಕಾರ ನಡೆಸುವ ಬಗ್ಗೆ ಮಾತನಾಡಿದ್ದಾರೆ.

ಹರಿಯಾಣ ಚುನಾವಣೆ
author img

By

Published : Oct 24, 2019, 3:37 PM IST

Updated : Oct 24, 2019, 7:42 PM IST

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮುಖಭಂಗ ಎದುರಿಸುವಂತಾಗಿದೆ. ಸದ್ಯದ ಫಲಿತಾಂಶದ ಪ್ರಕಾರ ಮ್ಯಾಜಿಕ್​ ನಂಬರ್​ 46ನ್ನು ದಾಟಲು ಯಾವೊಂದು ಪಕ್ಷವೂ ಸಫಲವಾದಂತಿಲ್ಲ.

ಕಾಂಗ್ರೆಸ್​ ಹಾಗೂ ಆಡಳಿತಾರೂಢ ಬಿಜೆಪಿಗೆ ರಾಜ್ಯದಲ್ಲಿ ಕಠಿಣ ಸವಾಲು ಎದುರಾಗಿದ್ದು, ಮತದಾರ ಪ್ರಭು ಯಾರಿಗೆ ಒಲಿಯುತ್ತಾನೆ ಎಂದು ಇಂದು ಸಂಜೆಯೊಳಗೆ ಗೊತ್ತಾಗಲಿದೆ.

ಸದ್ಯದ ಎಲೆಕ್ಷನ್ ​ಟ್ರೆಂಡ್​ ಪ್ರಕಾರ ಜೆಜೆಪಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಬಲ ಪಕ್ಷಗಳಾದ ಕಾಂಗ್ರೆಸ್​ ಹಾಗೂ ಬಿಜೆಪಿ ಬಹುಮತ ಗಳಿಸುವಲ್ಲಿ ಭಾಗಶಃ ವಿಫಲಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಭೂಪಿಂದರ್ ಸಿಂಗ್​ ಹೂಡಾ, ಜೆಜೆಪಿ, ಐಎನ್​ಎಲ್​ಡಿ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಜೊತೆಗೂಡಿ ಸಮ್ಮಿಶ್ರ ಸರ್ಕಾರ ನಡೆಸುವ ಬಗ್ಗೆ ಮಾತನಾಡಿದ್ದಾರೆ.

  • #WATCH DS Hooda,Congress: BJP is trying to pressurize independent candidates as most of them want to join us. It can't be accepted in democracy.Independent candidates should be able to freely choose the party whom they wish to support.I want to appeal to EC about it through media pic.twitter.com/8qn3A1flJ1

    — ANI (@ANI) October 24, 2019 " class="align-text-top noRightClick twitterSection" data=" ">

ಕಾಂಗ್ರೆಸ್​ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ. ಜೆಜೆಪಿ, ಐಎನ್​ಎಲ್​ಡಿ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಒಗ್ಗೂಡಿ ಬಲಿಷ್ಠ ಸರ್ಕಾರ ರಚಿಸುವ ಕಾಲ ಸನ್ನಿಹಿತವಾಗಿದೆ. ಪ್ರತಿಯೊಬ್ಬರಿಗೂ ಗೌರವಯುತವಾದ ಸ್ಥಾನ ನೀಡುತ್ತೇವೆ ಎಂದು ರೋಹ್ಟಕ್​ನಲ್ಲಿ ಭೂಪಿಂದರ್ ಸಿಂಗ್​ ಹೂಡಾ ಭರವಸೆ ನೀಡಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್​ ನಾಯಕ ಡಿಎಸ್​ ಹೂಡಾ ಪ್ರತಿಕ್ರಿಯೆ ನೀಡುತ್ತಾ, ಜನರು ಮನೋಹರ್​ ಲಾಲ್​ ಖಟ್ಟರ್​​​ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದಿದ್ದಾರೆ. ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ. ಈ ಮೂಲಕ ಮತದಾರ ಪ್ರಭುಗಳ ತೀರ್ಮಾನವನ್ನು ಗೌರವಿಸೋಣ ಎಂದು ಕಾಂಗ್ರೆಸ್​ ನಾಯಕ ಡಿಎಸ್​ ಹೂಡಾ ಜೆಜೆಪಿ ನಾಯಕ ದುಶ್ಯಂತ್​ ಚೌಟಾಲ ಹಾಗೂ ಸ್ವತಂತ್ರ ಅಭ್ಯರ್ಥಿಗಳಲ್ಲಿ ಪರೋಕ್ಷವಾಗಿ ಹೇಳಿದ್ದಾರೆ.

ಕಾಂಗ್ರೆಸ್​ನ ಈ ಎಲ್ಲ ಮಾತುಗಳಿಗೆ ಪುಷ್ಟಿ ನೀಡುವಂತೆ ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ಸುಮಾರು 30,000 ಮತಗಳಿಂದ ಜಯಗಳಿಸಿದ್ದಾರೆ. ಉಚನಾ ಕಲನ್ ಕ್ಷೇತ್ರದಲ್ಲಿ ಸ್ಪರ್ಧಿಸಿರೋ ಅವರು, ಬಿಜೆಪಿಯ ಪ್ರೇಮ್ ಲತಾ ಅವರನ್ನು ಸೋಲಿಸಿದ್ದಾರೆ.

ಒಂದೆಡೆ ತೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿದ್ದ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್​ ಬರಾಲಾ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಇದು ಗಾಳಿಸುದ್ದಿ ಎಂದು ಖುದ್ದು ಸುಭಾಷ್​ ಬರಾಲಾ ಹೇಳಿಕೆ ನೀಡಿದ್ದಾರೆ.

  • BJP's Haryana chief Subhash Barala says that he has not resigned from his post and that the news of his resignation is a rumour. (file pic) pic.twitter.com/0pGOIVUWxc

Intro:Body:

haryana

Conclusion:
Last Updated : Oct 24, 2019, 7:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.