ಹೈದರಾಬಾದ್: ಕೊರೊನಾ ವೈರಸ್ ಸೋಂಕಿತರಲ್ಲಿ ಕೆಮ್ಮು, ಜ್ವರ, ಶೀತಜ್ವರ, ಉಸಿರಾಟ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರ ಜೊತೆಗೆ ಸೈಲೆಂಟ್ ಹೈಪೋಕ್ಸಿಯಾ ಲಕ್ಷಣ ಕಾಣಿಸಿಕೊಂಡರೆ ಹೆಚ್ಚಿನ ಅಪಾಯ ಎದುರಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಏನಿದು ಸೈಲೆಂಟ್ ಹೈಪೋಕ್ಸಿಯಾ? ಅಂತೀರಾ...ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
ಮನುಷ್ಯನ ರಕ್ತದಲ್ಲಿ ಆಮ್ಲಜನಕ ಪ್ರಮಾಣವು ಶೇ.90ಕ್ಕಿಂತ ಕಡಿಮೆಯಿದ್ದಲ್ಲಿ ಅದನ್ನು ಸೈಲೆಂಟ್ ಹೈಪೋಕ್ಸಿಯಾ ಅಥವಾ ಹ್ಯಾಪಿ ಹೈಪೋಕ್ಸಿಯಾ ಎಂದು ಕರೆಯಲಾಗುತ್ತದೆ. ಕೆಲವು ಸೋಂಕಿತ ಪ್ರಕರಣಗಳಲ್ಲಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ.50ರಷ್ಟಿದ್ದು ತೀವ್ರ ಆಘಾತವನ್ನುಂಟು ಮಾಡಿದೆ. ಈ ಕುರಿತು ಈ ಟಿವಿ ಭಾರತ್ನೊಂದಿಗೆ ದೆಹಲಿಯ ಸೀನಿಯರ್ ಹೋಮಿಯೋಪತಿ ವೈದ್ಯಕೀಯ ಸಲಹೆಗಾರ, ಸಂಶೋಧಕ, ದೆಹಲಿಯ ಹೋಮಿಯೋಪಥಿಕ್ ಸಿಸ್ಟಮ್ ಆಫ್ ಮೆಡಿಸಿನ್ ಮಂಡಳಿಯ ಉಪಾಧ್ಯಕ್ಷರಾಗಿರುವ ಎ.ಕೆ.ಅರುಣ್ ಮಾತನಾಡಿ ಕೆಲವೊಂದು ಅಗತ್ಯ ಸಲಹೆಯನ್ನು ನೀಡಿದ್ದಾರೆ.
ಹ್ಯಾಪಿ ಹೈಪೋಕ್ಸೆಮಿಯಾ: ಕೊರೊನಾ ವೈರಸ್ ಸೋಂಕಿತರಲ್ಲಿ ಕೆಮ್ಮು, ಜ್ವರ, ಶೀತಜ್ವರ, ಉಸಿರಾಟ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರ ಜೊತೆಗೆ ಸೈಲೆಂಟ್ ಹೈಪೋಕ್ಸಿಯಾ ಲಕ್ಷಣ ಕಾಣಿಸಿಕೊಂಡರೆ ಹೆಚ್ಚಿನ ಅಪಾಯ ಎದುರಿಸಬೇಕಾಗುತ್ತದೆ. ಒಮ್ಮೆ ಈ ಲಕ್ಷಣ ಕಂಡುಬಂದರೆ, ಆ ವ್ಯಕ್ತಿಗೆ ಉಸಿರಾಟದ ತೊಂದರೆ ಮತ್ತು ಎದೆ ನೋವು ಸೇರಿ ಹಲವಾರು ಸಮಸ್ಯೆಗಳು ಕಂಡುಬರುತ್ತವೆ ಎಂದು ಎಚ್ಚರಿಸಿದ್ದಾರೆ.
ಈ ರೋಗ ಲಕ್ಷಣವನ್ನು ಹೊಂದಿರುವ ವ್ಯಕ್ತಿಗಳಲ್ಲಿ ಆಮ್ಮಜನಕದ ಪ್ರಮಾಣ ಶೇ. 90 ಪ್ರತಿಶತಕ್ಕಿಂತ ಕಡಿಮೆ ಇರುತ್ತದೆ. ಹೀಗಾಗಿ ಇವರ ಉಸಿರಾಟಕ್ಕೆ ಹೆಚ್ಚಿನ ಆಮ್ಲಜನಕದ ಅಗತ್ಯತೆ ಇರುತ್ತದೆ. ಹೈಪೋಕ್ಸೆಮಿಯಾವನ್ನು ಪರೀಕ್ಷಿಸದೆ ಬಿಟ್ಟರೆ, ಹೈಪೋಕ್ಸಿಯಾ (ಕಡಿಮೆ ಅಂಗಾಂಶದ ಆಮ್ಲಜನಕದ ಮಟ್ಟ) ಎಂಬ ಸ್ಥಿತಿಗೆ ಕಾರಣವಾಗುತ್ತದೆ, ಇದು ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡುತ್ತದೆ.
ಕೊರೊನಾ ಸೋಂಕಿತರಿಗೆ ಸೈಲೆಂಟ್ ಹೈಪೋಕ್ಸಿಯಾದಿಂದಾಗುವ ಸಮಸ್ಯೆ: ಡಿಸ್ಪ್ನಿಯಾ (ಉಸಿರಾಟದ ತೊಂದರೆ) ಇದು ಒಂದು ಪ್ರಮುಖ ರೋಗಲಕ್ಷಣವಾಗಿದ. ಇದು ರೋಗಿಯು ಮಾತ್ರ ಅನುಭವಿಸುತ್ತಾನೆಯೇ ಹೊರತು, ಸುತ್ತಲಿನ ಜನರಿಗೆ ಇದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ವೇಗದ ಉಸಿರಾಟ, ವೇಗದ ಹೃದಯ ಬಡಿತದಂತಹ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಸೂಕ್ತ ವೈದ್ಯರಿಗೆ ತೋರಿಸುವವರೆಗೆ ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುದು ತಿಳಿದುಬಂದಿದೆ.
ಮಧುಮೇಹಿಗಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಸೈಲೆಂಟ್ ಹೈಪೋಕ್ಸಿಯಾಕ್ಕೆ ಹೆಚ್ಚು ಒಳಗಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ. ಕೆಲವು ರೋಗಿಗಳು ಅಧಿಕ ರಕ್ತದ ಇಂಗಾಲದ ಡೈಆಕ್ಸೈಡ್ ಮಟ್ಟದೊಂದಿಗೆ ಉಸಿರಾಟದ ತೊಂದರೆಗಳನ್ನು ಎದುರಿಸಬಹುದು. ಅದೇ ರೀತಿ ಕೆಲ ವ್ಯಕ್ತಿಗಳು ಇದನ್ನು ಸಮರ್ಥವಾಗಿ ಎದುರಿಸಿರುವ ಉದಾಹರಣೆಗಳೂ ಕಂಡುಬಂದಿವೆ.
ರೋಗಿಗಳಲ್ಲಿ ಕಂಡು ಬರುವ ಲಕ್ಷಣಗಳು:
ದೇಹದ ಚರ್ಮದ ಬಣ್ಣದಲ್ಲಿ ಬದಲಾವಣೆ
- ಕೆಮ್ಮು
- ವೇಗದ ಹೃದಯ ಬಡಿತ
- ಉಸಿರಾಡುವಾಗ ನೋವು
- ಕಡಿಮೆ ಆಮ್ಲಜನಕ ಪ್ರಮಾಣ
- ಎದೆ ಬಿಗಿಯುವುದು
- ತ್ವರಿತ ಉಸಿರಾಟ
- ಉಸಿರಾಟದ ತೊಂದರೆ
- ಹೃದಯ ಬಡಿತದಲ್ಲಿ ನಿಧಾನ
- ಬೆವರುವುದು
- ಉಬ್ಬಸ
- ಜ್ವರ
- ಕೆಮ್ಮು
- ಶೀತ
ಹೋಮಿಯೋಪತಿಯಲ್ಲಿ ಹ್ಯಾಪಿ ಹೈಪೋಕ್ಸಿಯಾ ವೈರಸ್ಗೆ ಅನೇಕ ಔಷಧಿಗಳಿವೆ. ಕೆಲವು ಪ್ರಮುಖ ಔಷಧಿಗಳೆಂದರೆ ಅಮೋನ್ ಕಾರ್ಬ್, ಕ್ಯಾಕ್ಟಸ್ ಗ್ರ್ಯಾಂಡ್, ಕಾರ್ಬೊ ವೆಜ್, ಕ್ಯಾಂಪೋರಾ, ಇಗ್ನೇಷಿಯಾ ಅಮರಾ, ಲಾಚೆಸಿಸ್, ಸ್ಟ್ಯಾಫಿಸಾಗ್ರಿಯಾ ಇತ್ಯಾದಿಗಳನ್ನು ಗುರುತಿಸಲಾಗಿದೆ.
ಹೆಚ್ಚಿನ ಮಾಹಿತಿಗೆ: dr.akarundocarun2@gmail.com