ನವದೆಹಲಿ: ಕೊರೊನಾ ವೈರಸ್ನಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಬಳಲುತ್ತಿರುವ ವ್ಯವಹಾರಗಳಿಗೆ ಸಾಲ ನೀಡಲು ಬ್ಯಾಂಕುಗಳಿಗೆ ಸಾಧ್ಯವಾಗುವಂತೆ ನಿಯಮಗಳ ಪುನಾರಚನೆ ಅಗತ್ಯ ಇದೆ ಎಂದು ಆರ್‌ಬಿಐ ನಿರ್ದೇಶಕ ಎಸ್ ಗುರುಮೂರ್ತಿ ಪ್ರತಿಪಾದಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸಲಹೆಯನ್ನೂ ನೀಡಿದ್ದಾರೆ.
ವಿದೇಶಿ ನಿಧಿಗಳಿಗಿಂತ ಇದು ಉತ್ತಮ ಆಯ್ಕೆಯಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕ್ಗಳು ಸಾಲ ನೀಡಿದರೆ ಉತ್ತಮ ಎಂದು ಅವರು ಹೇಳಿದರು.
ದೆಹಲಿಯ ಭಾರತ್ ಪ್ರಕಾಶನ್ ಆಯೋಜಿಸಿದ 'ಭಾರತೀಯ ಆರ್ಥಿಕತೆ: ಸವಾಲುಗಳು ಮತ್ತು ಅವಕಾಶಗಳು' ಎಂಬ ವೆಬ್‌ನಾರ್‌ನಲ್ಲಿ ಗುರುಮೂರ್ತಿ ಅವರು ಈ ರೀತಿಯಾಗಿ ಹೇಳಿದ್ದಾರೆ .
ಕೆಲವೊಂದು ಮಾನದಂಡಗಳಿಂದಾಗಿ ಬ್ಯಾಂಕ್ಗಳು ಸಾಲ ನೀಡಲಾಗುತ್ತಿಲ್ಲ. ಅವುಗಳನ್ನು ಬದಲಿಸಿ ಪುನರ್ ರಚಿಸುವ ಅಗತ್ಯವಿದೆ ಎಂದು ಎಸ್ ಗುರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.