ETV Bharat / bharat

ಅತ್ಯಾಚಾರ ಆರೋಪ ಮುಚ್ಚಿ ಹಾಕಲು ₹20 ಲಕ್ಷಕ್ಕೆ ಬೇಡಿಕೆ ಇಟ್ಟ ಲೇಡಿ ಪಿಎಸ್​ಐ ಅಂದರ್​​!!​

ಸಮಾಜ ವಿರೋಧಿ ಚಟುವಟಿಕೆ ತಡೆ (ಪಾಸಾ) ಕಾಯ್ದೆಯಡಿ ಷಾ ಅವರ ಮೇಲೆ ಕೇಸು ದಾಖಲಿಸದಿರಲು ಹಣದ ಬೇಡಿಕೆ ಇಟ್ಟಿದ್ದಾರೆ. ಅಲ್ಲಿ ಪೊಲೀಸರು ಆರೋಪಿಯನ್ನು ಸ್ಥಳೀಯ ಜಿಲ್ಲೆಯ ಜೈಲಿಗೆ ಕಳುಹಿಸಬಹುದು..

Woman PSI arrested
ಅತ್ಯಾಚಾರ ಆರೋಪ ಮುಚ್ಚಿ ಹಾಕಲು 20 ಲಕ್ಷಕ್ಕೆ ಬೇಡಿಕೆ ಇಟ್ಟ ಪಿಎಸ್​ಐ ಅಂದರ್​​​
author img

By

Published : Jul 5, 2020, 7:46 PM IST

ಅಹಮದಾಬಾದ್​​ : ಸಾಮಾಜಿಕ ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸದೆ, ಅತ್ಯಾಚಾರ ಆರೋಪಿಗಳಿಂದ 20 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಹಮದಾಬಾದ್‌ ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಶ್ವೇತಾ ಜಡೇಜಾ ಅವರು ಕೆನಾಲ್ ಷಾ ಅವರ ವಿರುದ್ಧ 2019ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆನಲ್​ ಷಾ ಸಹೋದರರಿಂದ 35 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮಾಜ ವಿರೋಧಿ ಚಟುವಟಿಕೆ ತಡೆ (ಪಾಸಾ) ಕಾಯ್ದೆಯಡಿ ಷಾ ಅವರ ಮೇಲೆ ಕೇಸು ದಾಖಲಿಸದಿರಲು ಹಣದ ಬೇಡಿಕೆ ಇಟ್ಟಿದ್ದಾರೆ. ಅಲ್ಲಿ ಪೊಲೀಸರು ಆರೋಪಿಯನ್ನು ಸ್ಥಳೀಯ ಜಿಲ್ಲೆಯ ಜೈಲಿಗೆ ಕಳುಹಿಸಬಹುದು ಎಂದು ಅವರು ಹೇಳಿದರು.

ನಗರ ಅಪರಾಧ ಶಾಖೆ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಪ್ರಕಾರ, ಜಡೇಜಾ ಮಧ್ಯವರ್ತಿಯೊಬ್ಬರ ಮೂಲಕ 20 ಲಕ್ಷ ರೂ. ಸ್ವೀಕರಿಸಿದ್ದರು ಮತ್ತು ಅತ್ಯಾಚಾರ ಆರೋಪಿಗಳಿಂದ ಹೆಚ್ಚುವರಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.