ETV Bharat / bharat

ಹೊರಗೆ ಬರಬೇಕಂದ್ರೆ ಮಾಸ್ಕ್​ ಕಡ್ಡಾಯ.. ಹೈದರಾಬಾದ್​ ನಂತರ ಚೆನ್ನೈ ಪಾಲಿಕೆ ಖಡಕ್​ ಕ್ರಮ

author img

By

Published : Apr 15, 2020, 2:03 PM IST

ಕೊರೊನಾ ವಿರುದ್ಧದ ಹೋರಾಟಕ್ಕೆ ದೇಶದ ಎಲ್ಲಾ ರಾಜ್ಯಗಳು ಮಹತ್ವದ ಹೋರಾಟ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಚೆನ್ನೈ ಮಹಾನಗರ ಪಾಲಿಕೆಯೂ ಮುಂದಡಿಯಿಟ್ಟಿದ್ದು, ನಗರದಲ್ಲಿ ಮಾಸ್ಕ್​ ಬಳಕೆ ಕಡ್ಡಾಯ ಮಾಡಿದೆ.

Greater Chennai Corporation
ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆ

ಚೆನ್ನೈ: ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆಯು ಕೊರೊನಾ ವೈರಸ್​ ವಿರುದ್ಧ ಹೋರಾಡಲು ಎಲ್ಲಾ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಸಾರ್ವಜನಿಕರಿಗೆ ಫೇಸ್ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳೊಸಿದೆ.

ಸಾಂಕ್ರಾಮಿಕ ರೋಗಗಳ ಕಾಯ್ದೆ 1987 ರ ಸೆಕ್ಷನ್ 2 ರ ಅಡಿಯಲ್ಲಿ ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆ, ಪಾಲಿಕೆ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಹೋಗುವಾಗ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕೆಂದು ನಿರ್ದೇಶಿಸಿದೆ.

ಇನ್ನು ಪಾಲಿಕೆಯ ಈ ನಿರ್ದೇಶನವನ್ನು ಧಿಕ್ಕರಿಸುವ ಯಾವುದೇ ವ್ಯಕ್ತಿಯು ಅಪರಾಧ ಮಾಡಿದನೆಂದು ಪರಿಗಣಿಸಲಾಗುತ್ತದೆ ಮತ್ತು ಈ ಕೆಳಗಿನ ಶಿಕ್ಷೆಯನ್ನು ಪೊಲೀಸ್ ಅಧಿಕಾರಿಗಳು ವಿಧಿಸುತ್ತಾರೆ ಎಂದು ಹೇಳಲಾಗಿದೆ.

  1. ನಿಯಮ ಉಲ್ಲಂಘಿಸಿಸ ವಾಹನವನ್ನು ವಶಪಡಿಸಿಕೊಳ್ಳಲಾಗುವುದು
  2. ಚಾಲನಾ ಪರವಾನಗಿಯನ್ನು ಆರು ತಿಂಗಳವರೆಗೆ ರದ್ದುಗೊಳಿಸಲಾಗುತ್ತದೆೆ.
  3. ನಿಯಮ ಉಲ್ಲಂಘಿಸುವ ಪಾದಚಾರಿಗಳಿಗೆ ದಿನಕ್ಕೆ ರೂ .100 / - ದಂಡ.

ಈ ಸೂಚನೆ ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಪಾಲಿಕೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.