ETV Bharat / bharat

ಲಡಾಖ್​ ಪರಿಸ್ಥಿತಿ ಬಗ್ಗೆ ಸರ್ಕಾರದಿಂದ ಸಮಗ್ರ ಪರಿಶೀಲನೆ - ಪೂರ್ವ ಲಡಾಖ್‌ನ ಪರಿಸ್ಥಿತಿ ಪರಿಶೀಲನೆ

ಚೀನಾದ ಆಕ್ರಮಣಕಾರಿ ವರ್ತನೆಗೆ ಸಂಬಂಧಿಸಿದಂತೆ ಭಾರತದ ಕಾರ್ಯಾಚರಣೆಯ ಸನ್ನದ್ಧತೆ ಸೇರಿದಂತೆ ಪೂರ್ವ ಲಡಾಖ್‌ನ ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಸರ್ಕಾರ ಸಮಗ್ರ ಪರಿಶೀಲನೆ ನಡೆಸಿದೆ.

China Study group reviews Ladakh situation
ಲಡಾಖ್​ ಪರಿಸ್ಥಿತಿ ಬಗ್ಗೆ ಸರ್ಕಾರದಿಂದ ಸಮಗ್ರ ಪರಿಶೀಲನೆ
author img

By

Published : Sep 19, 2020, 7:35 AM IST

ನವದೆಹಲಿ: ಚೀನಾದ ಸೈನ್ಯದ ನಿರಂತರ ಆಕ್ರಮಣಕಾರಿ ವರ್ತನೆ ಮತ್ತು ಭಾರತೀಯ ಸೈನಿಕರನ್ನು ಬೆದರಿಸುವ ಹೊಸ ಪ್ರಯತ್ನಗಳ ಹಿನ್ನೆಲೆಯಲ್ಲಿ ಭಾರತದ ಕಾರ್ಯಾಚರಣೆಯ ಸನ್ನದ್ಧತೆ ಸೇರಿದಂತೆ ಪೂರ್ವ ಲಡಾಖ್‌ನ ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಸರ್ಕಾರ ಶುಕ್ರವಾರ ಸಮಗ್ರ ಪರಿಶೀಲನೆ ನಡೆಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಹೈ-ಪವರ್ ಚೀನಾ ಸ್ಟಡಿ ಗ್ರೂಪ್‌ನ ಸುಮಾರು 90 ನಿಮಿಷಗಳ ಸಭೆಯಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಸಹ ಹಾಜರಿದ್ದರು. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಪ್ರದೇಶಗಳು ಒಳಗೊಂಡಂತೆ 3,500 ಕಿ.ಮೀ. ಉದ್ದದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಜಾಗರೂಕತೆಯನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವನೆ ಅವರು ಪಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿರುವ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಹೊಸ ಮುಖಾಮುಖಿಯ ಬಗ್ಗೆ ಸಭೆಯಲ್ಲಿ ವಿವರಿಸಿದರು ಮತ್ತು ಅಂತಹ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.

"ಚೀನಾ ಸ್ಟಡಿ ಗ್ರೂಪ್​ನ ಸಭೆಯು ಪರಿಸ್ಥಿತಿಯ ಎಲ್ಲಾ ಅಂಶಗಳನ್ನು ಪರಿಶೀಲಿಸಿದೆ" ಎಂದು ಮೂಲವೊಂದು ತಿಳಿಸಿದೆ. ಕಠಿಣ ಚಳಿಗಾಲದ ತಿಂಗಳುಗಳಲ್ಲಿ ತಾಪಮಾನವು ಮೈನಸ್ 25 ಡಿಗ್ರಿ ಸೆಲ್ಸಿಯಸ್​​​​ವರೆಗೆ ಇಳಿಯುವಾಗ ಪೂರ್ವ ಲಡಾಖ್ ಮತ್ತು ಇತರ ಸೂಕ್ಷ್ಮ ಎತ್ತರದ ಪ್ರದೇಶಗಳಲ್ಲಿನ ಎಲ್ಲಾ ಫಾರ್ವರ್ಡ್​ ಏರಿಯಾಗಳಲ್ಲಿ ಪ್ರಸ್ತುತ ಮಟ್ಟದ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಮುಂದಿನ ಕಾರ್ಪ್ಸ್​ ಕಮಾಂಡರ್ ಮಟ್ಟದ ಮಾತುಕತೆಗಳಲ್ಲಿ ಭಾರತದ ಕಡೆಯಿಂದ ಎದ್ದಿರುವ ಮುಖ್ಯ ಮಾತುಕತೆಗಳ ಬಗ್ಗೆಯೂ ಸಭೆ ಸಂಕ್ಷಿಪ್ತವಾಗಿ ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಇದು ಸೆಪ್ಟೆಂಬರ್ 10ರಂದು ಮಾಸ್ಕೋದಲ್ಲಿ ಭಾರತ ಮತ್ತು ಚೀನಾ ವಿದೇಶಾಂಗ ಮಂತ್ರಿಗಳ ನಡುವೆ ನಡೆದ ಒಪ್ಪಂದದ ಅನುಷ್ಠಾನಕ್ಕೆ ಒತ್ತು ನೀಡುವ ನಿರೀಕ್ಷೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.