ETV Bharat / bharat

ಕೋವಿಡ್​ ಕನ್ನಡಕಗಳನ್ನು ಮರುಬಳಕೆ ಮಾಡಿ:  ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸಲಹೆ - ಕೋವಿಡ್​ ಕನ್ನಡಕಗಳನ್ನು ಮರುಬಳಕೆ ಮಾಡಲು ಸಲಹೆ

ಕೋವಿಡ್​ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರು ಬಳಸಿದ ಕನ್ನಡಕಗಳನ್ನು ಮರುಬಳಕೆ ಮಾಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಲಹೆ ನೀಡಿದೆ.

Govt tells 7 ways how you can reuse your Covid goggles
ಕೋವಿಡ್​ ಕನ್ನಡಕಗಳನ್ನು ಮರುಬಳಕೆ ಮಾಡಲು ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸಲಹೆ
author img

By

Published : May 28, 2020, 6:05 PM IST

ನವದೆಹಲಿ : ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳಲ್ಲಿ ಕನ್ನಡಕಗಳು ಅತ್ಯಂತ ಪ್ರಮುಖ ಅಂಶವಾಗಿರುವುದರಿಂದ ಕೋವಿಡ್​ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರು ಬಳಸಿದ ಕನ್ನಡಕಗಳನ್ನು ಮರುಬಳಕೆ ಮಾಡಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಲಹೆ ನೀಡಿದೆ.

ಪಿಐಬಿಯ ಮಹಾರಾಷ್ಟ್ರ ಘಟಕವು ಟ್ವಿಟರ್‌ನಲ್ಲಿ ಈ ಬಗ್ಗೆ ಸಲಹೆಗಳನ್ನು ನೀಡಿದ್ದು, ಆರೋಗ್ಯ ಕಾರ್ಯಕರ್ತರು ಕನ್ನಡಕಗಳನ್ನು ಅದು ಹಾನಿಗೊಳಗಾಗುವವರೆಗೆ ಅಥವಾ ಅಸ್ಪಷ್ಟವಾಗುವವರೆಗೆ ದಿನಕ್ಕೆ ಕನಿಷ್ಠ ಐದು ಬಾರಿ ಮರುಬಳಕೆ ಮಾಡಲು ಸೂಚಿಸಿದೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್​ನಲ್ಲಿ, ನಿಗದಿತ ಇಎನ್ / ಬಿಐಎಸ್ ಮಾನದಂಡಗಳಿಗೆ ಅನುಗುಣವಾಗಿ ಕನ್ನಡಕಗಳನ್ನು ಪರಿಶೀಲಿಸಿ ನಂತರ ಮರು ಬಳಕೆ ಮಾಡುವಂತೆ ಸೂಚಿಸಿದೆ.

ಕನ್ನಡಗಳನ್ನು ಮರುಬಳಕೆ ಮಾಡುವಾಗ ಪ್ರತಿಯೊಬ್ಬರು ತಮ್ಮ ಸ್ವಂತದವುಗಳನ್ನೇ ಬಳಸಬೇಕು. ಪ್ರತೀ ಬಳಕೆಯ ನಂತರ ಅದನ್ನು ಮತ್ತೆ ಬಳಸುವ ಮೊದಲು ಮರು ಸಂಸ್ಕರಣೆ ಮಾಡಬೇಕು. ಕೈಗೆ ಗ್ಲೌಸ್​ ಹಾಕಿ ಸೋಪ್​ ನೀರಿನಿಂದ ಕನ್ನಡಕಗಳನ್ನು ತೊಳೆಯಬೇಕು ಬಳಿಕ ಹತ್ತು ನಿಮಿಷಗಳ ಕಾಲ ಅದನ್ನು ಒಂದು ಶೇಕಡಾ ಸೋಡಿಯಂ ಹೈಪೋಕ್ಲೋರೈಟ್‌ನಲ್ಲಿ ಮುಳುಗಿಸಬೇಕು ಬಳಿಕ ಶುದ್ದ ನೀರಿನಲ್ಲಿ ತೊಳೆಯಬೇಕು ಎಂದು ಸಲಹೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.