ETV Bharat / bharat

ಲಾಕ್ ಡೌನ್​ ಬಳಿಕ ವಿಮಾನ ಪ್ರಯಾಣ ಮಾಡುವವರಿಗೆ ಆರೋಗ್ಯ ಸೇತು ಆ್ಯಪ್​ ಕಡ್ಡಾಯ? - ವಿಮಾನ ಪ್ರಯಾಣಕರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ

ಕೊರೊನಾ ಲಾಕ್​ ಡೌನ್​ ಮುಕ್ತಾಯವಾದ ಬಳಿಕ ವಿಮಾನದಲ್ಲಿ ಪ್ರಯಾಣ ಬೆಳೆಸುವವರು ತಮ್ಮ ಮೊಬೈಲ್​ನಲ್ಲಿ ಆರೋಗ್ಯ ಸೇತು ಆ್ಯಪ್​ ಇನ್​​ಸ್ಟಾಲ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಈ ಕುರಿತು ಪ್ರಾಥಮಿಕ ಚರ್ಚೆಗಳು ನಡೆದಿದ್ದು, ಅಂತಿಮ ನಿರ್ಧಾರ ಹೊರಬೀಳಬೇಕಿದೆ.

Govt likely to make Aarogya Setu app mandatory for flyers post lockdown
ಆರೋಗ್ಯ ಸೇತು ಆ್ಯಪ್​ ಕಡ್ಡಾಯಗೊಳಿಸುವ ಸಾಧ್ಯತೆ
author img

By

Published : May 12, 2020, 8:23 AM IST

ನವದೆಹಲಿ: ಲಾಕ್ ಡೌನ್ ಬಳಿಕ ವಿಮಾನ ಪ್ರಯಾಣ ಮಾಡುವವರು ತಮ್ಮ ಮೊಬೈಲ್ ಪೋನ್​ಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಇನ್​​ಸ್ಟಾಲ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ವಿಮಾನಯಾನ ಸಂಸ್ಥೆಗಳೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಪ್ರಾಥಮಿಕ ಚರ್ಚೆ ನಡೆಸಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಷ್ಟೆ.

ಆರೋಗ್ಯ ಸೇತು ಆ್ಯಪ್​ ಜನರಿಗೆ ಕೋವಿಡ್​ ಅಪಾಯದಿಂದ ರಕ್ಷಣೆ ಪಡೆಯಲು ನೆರವಾಗುತ್ತದೆ. ಅಲ್ಲದೆ ಈ ಆ್ಯಪ್​ ಕಲರ್​ ಕೋಡ್​ ಮೂಲಕ ಜನರ ಆರೋಗ್ಯ ಸ್ಥಿತಿಯನ್ನು ತಿಳಿಸುತ್ತದೆ ಮತ್ತು ನಮ್ಮ ಅಕ್ಕ ಪಕ್ಕ ಕೋವಿಡ್​ ಬಾಧಿತರು ಯಾರಾದರು ಇದ್ದಾರಾ ಎಂಬವುದನ್ನು ತಿಳಿಸುತ್ತದೆ.

ಸದ್ಯ ಚರ್ಚೆ ನಡೆಸಲಾಗಿರುವ ವಿಷಯಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಿದರೆ ಮುಂದಿನ ದಿನಗಳಲ್ಲಿ ಆರೋಗ್ಯ ಸೇತು ಆ್ಯಪ್​ ಇಲ್ಲದವರು ವಿಮಾನ ಹತ್ತಲು ಸಾಧ್ಯವಾಗುವುದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.