ETV Bharat / bharat

ಕನಿಷ್ಠ ಬೆಂಬಲ ಬೆಲೆಗೆ ರೈತರ ಬೆಳೆ ಖರೀದಿ ಮುಂದುವರಿಕೆ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

author img

By

Published : Sep 29, 2020, 5:57 PM IST

ಕೇಂದ್ರ ಸರ್ಕಾರದ ಹೊಸ ಕೃಷಿ ಮಸೂದೆಗಳಿಗೆ ಇನ್ನಿಲ್ಲದ ಟೀಕೆ ವ್ಯಕ್ತವಾಗುತ್ತಿದ್ದು, ಇದರ ಮಧ್ಯೆ ಕೇಂದ್ರ ಸರ್ಕಾರ ಈಗಾಗಲೇ ಜಾರಿಯಲ್ಲಿರುವ ವಿವಿಧ ಯೋಜನೆಗಳ ಮೂಲಕ ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ ಬೆಳೆ ಖರೀದಿ ಮಾಡುವ ಯೋಜನೆ ಮುಂದುವರೆಸಿದೆ.

Minimum Support Price
Minimum Support Price

ನವದೆಹಲಿ: ದೇಶದಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿರುವ ಕೃಷಿ ಮಸೂದೆಗಳಿಗೆ ಕೆಲವೊಂದು ರಾಜ್ಯಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಪಂಜಾಬ್​, ಹರಿಯಾಣಗಳಲ್ಲಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಹೊರಹಾಕಿದೆ.

  • Upto 28th September 2020, paddy procurement totalling 16,420 MT having MSP value of Rs. 31 crores done from farmers of Haryana and Punjab: Government of India https://t.co/i4WQkRXL1T

    — ANI (@ANI) September 29, 2020 " class="align-text-top noRightClick twitterSection" data=" ">

ಈಗಾಗಲೇ ಜಾರಿಯಲ್ಲಿರುವ ವಿವಿಧ ಯೋಜನೆಗಳ ಪ್ರಕಾರ ಸರ್ಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್​​ಪಿ) ಬೆಳೆ ಖರೀದಿ ಮುಂದುವರೆಸಿದೆ ಎಂದು ತಿಳಿಸಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರಿಯಾಣದಲ್ಲಿ ಕೆಎಂಎಸ್​​ 2020-21ರಲ್ಲಿ 14.09 ಎಲ್​ಎಂಟಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳು ಖರೀದಿಸಲು ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿ ನೀಡಿದೆ.

2020ರ ಸೆಪ್ಟೆಂಬರ್​​ 28ರವರೆಗೆ ಭತ್ತ ಸಂಗ್ರಹವು ಒಟ್ಟು 16,420 ಮೆಟ್ರಿಕ್​ ಟನ್​​ ಆಗಿದ್ದು, ಹರಿಯಾಣ, ಪಂಜಾಬ್​​​ ರೈತರಿಂದ 31 ಕೋಟಿ ರೂ ಭತ್ತ ಖರೀದಿ ಮಾಡಲಾಗಿದೆ ಎಂದು ತಿಳಿಸಿದೆ.

ಮುಷ್ಕರದ ಮಧ್ಯೆ 48 ಗಂಟೆಯಲ್ಲಿ MSPಯಡಿ ₹10.53 ಕೋಟಿ ಭತ್ತ ಖರೀದಿ.. 3,961 ರೈತರಿಗೆ ಲಾಭ

2020-21ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಸರ್ಕಾರವು 495.37 ಲಕ್ಷ ಟನ್ ಭತ್ತ ಖರೀದಿ ಗುರಿ ಇಟ್ಟುಕೊಂಡಿದೆ. ಭತ್ತದ ಹೊರತಾಗಿ ಸರ್ಕಾರವು ತನ್ನ ನೋಡಲ್ ಏಜೆನ್ಸಿಗಳ ಮೂಲಕ ಸೆಪ್ಟೆಂಬರ್ 24ರವರೆಗೆ ತಮಿಳುನಾಡಿನ 40 ರೈತರಿಂದ 25 ಲಕ್ಷ ರೂ. ಮೌಲ್ಯದ 34.20 ಟನ್ ಬೆಳೆ ಖರೀದಿಸಿದೆ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.