ನವದೆಹಲಿ: ಅಕ್ರಮ ಹಣ ವರ್ಗಾವಣೆ ಹಾಗೂ ಐಎನ್ಎಕ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ನಿನ್ನೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರ ಬಂದ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ದೇಶದ ಆರ್ಥಿಕತೆ ಕುಸಿತ ಹಾಗೂ ಮೋದಿ ಮೌನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವರ್ಷದ ಅಂತ್ಯಕ್ಕೆ ಜಿಡಿಪಿ ಶೇ.5 ರಷ್ಟು ಮುಟ್ಟಿದರೆ ಅದು ನಮ್ಮ ಅದೃಷ್ಟ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕೆಟ್ಟ ನಿರ್ಧಾರಗಳಿಂದ ದೇಶದ ಜಿಡಿಪಿ ಹಿಡಿತಕ್ಕೆ ಸಿಗದಷ್ಟು ಕಡಿಮೆಯಾಗುತ್ತಿದೆ. ಮತ್ತೆ ಈಗಿರುವ ನೀತಿಗಳನ್ನೇ ಮುಂದುವರಿಸಿದರೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
-
Congress leader P Chidambaram: Prime Minister has been unusually silent on the economy. He has left it to his ministers to indulge in bluff and bluster. The net result, as the Economist put it, is that the government has turned out to be an ‘incompetent manager’ of the economy. https://t.co/algL4hlIJF
— ANI (@ANI) December 5, 2019 " class="align-text-top noRightClick twitterSection" data="
">Congress leader P Chidambaram: Prime Minister has been unusually silent on the economy. He has left it to his ministers to indulge in bluff and bluster. The net result, as the Economist put it, is that the government has turned out to be an ‘incompetent manager’ of the economy. https://t.co/algL4hlIJF
— ANI (@ANI) December 5, 2019Congress leader P Chidambaram: Prime Minister has been unusually silent on the economy. He has left it to his ministers to indulge in bluff and bluster. The net result, as the Economist put it, is that the government has turned out to be an ‘incompetent manager’ of the economy. https://t.co/algL4hlIJF
— ANI (@ANI) December 5, 2019
ಎನ್ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಡಾ.ಅರವಿಂದ್ ಸುಬ್ರಮಣಿಯನ್, ನಿಮ್ಮ ಈ ನೀತಿಗಳನ್ನೇ ಮುಂದುವರಿಸಿದರೆ ದೇಶದ ಜಿಡಿಪಿ ಶೇ.5ಕ್ಕೆ ಕುಸಿಯಲಿದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಹೀಗಾಗಿ ಅರ್ಥಶಾಸ್ತ್ರಜ್ಞರು ಹೇಳಿದಂತೆ ಆರ್ಥಿಕತೆ ‘ಅಸಮರ್ಥ ವ್ಯವಸ್ಥಾಪಕ’ ಎಂಬಂತಾಗಿದೆ ಎಂದು ವಿಶ್ಲೇಷಿಸಿದರು.
ಅಷ್ಟೇ ಅಲ್ಲದೆ, ದೇಶದ ಆರ್ಥಿಕತೆ ಬಗ್ಗೆ ಬರೀ ವಿತ್ತ ಸಚಿವರೇ ಮಾತನಾಡುತ್ತಿದ್ದಾರೆ. ಜಿಡಿಪಿ ಕುಸಿತದ ಕುರಿತು ಪ್ರಧಾನಿ ಮೋದಿ ಅವರು ಮಾತ್ರ ಎಲ್ಲಿಯೂ ಮಾತನಾಡುತ್ತಿಲ್ಲ. ಅದು ಏಕೆಂದು ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
-
P. Chidambaram, Congress: I am particularly concerned about the political leaders who have been detained without charges. Freedom is indivisible, if we must preserve our freedom, we must fight for their freedom. https://t.co/eS5HbMtWmB
— ANI (@ANI) December 5, 2019 " class="align-text-top noRightClick twitterSection" data="
">P. Chidambaram, Congress: I am particularly concerned about the political leaders who have been detained without charges. Freedom is indivisible, if we must preserve our freedom, we must fight for their freedom. https://t.co/eS5HbMtWmB
— ANI (@ANI) December 5, 2019P. Chidambaram, Congress: I am particularly concerned about the political leaders who have been detained without charges. Freedom is indivisible, if we must preserve our freedom, we must fight for their freedom. https://t.co/eS5HbMtWmB
— ANI (@ANI) December 5, 2019
ಕಾಶ್ಮೀರ ಕಣಿವೆ 75 ಲಕ್ಷ ಜನರಿಂದ ಇದೇ ಆಗಸ್ಟ್ 4ರಿಂದ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ಅಲ್ಲಿನ ಜನರು ಕತ್ತಲೆ ಜಗತ್ತಿನಿಂದ ಹೊರಬರಲು ಹೋರಾಟ ಅಗತ್ಯ ಎಂದರು. ಈಚೆಗೆ ಹೈದರಾಬಾದ್ನಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣವನ್ನು ನೆನೆಸಿಕೊಂಡು ಭಾವುಕರಾದರು.