ETV Bharat / bharat

ಕೇಂದ್ರ ಸರ್ಕಾರದಿಂದ ಹಸಿರು ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ

author img

By

Published : Mar 14, 2020, 2:49 PM IST

Updated : Mar 14, 2020, 7:27 PM IST

ಹಸಿರು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಯೋಜನೆಯಡಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 7,662.47 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನವೀಕರಣಕ್ಕೆ ಅನುಮೋದನೆ ನೀಡಿದೆ.

Govt approves up-gradation of 780 kms of green highways

ನವದೆಹಲಿ: ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶದಲ್ಲಿ ಹಸಿರು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಯೋಜನೆ (ಜಿಎನ್‌ಹೆಚ್‌ಸಿಪಿ) ಅಡಿ 780 ಕಿಲೋಮೀಟರ್ ರಸ್ತೆಗಳನ್ನು ನವೀಕರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ 7,662.47 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅನುಮೊದನೆ ನೀಡಿದೆ. ಈ ಯೋಜನೆಗೆ ವಿಶ್ವ ಬ್ಯಾಂಕ್ 3,500 ಕೋಟಿ ರೂಪಾಯಿ ಸಾಲ ನೀಡಿದೆ.

ಗ್ರೀನ್ ಕಾರಿಡಾರ್ ಯೋಜನೆಯಡಿ ರಸ್ತೆ ನಿರ್ಮಾಣಕ್ಕಾಗಿ ಸಿಮೆಂಟ್ ಬಳಸಲಾಗುತ್ತದೆ. ಅದರೊಂದಿಗೆ ಪ್ಲಾಸ್ಟಿಕ್, ತ್ಯಾಜ್ಯ ಮತ್ತು ಇತರ ಮರುಬಳಕೆ ಮಾಡಬಹುದಾದ ಉತ್ಪನ್ನಗಳನ್ನು ಮಿಶ್ರ ಮಾಡಲಾಗುತ್ತದೆ. ಹೆದ್ದಾರಿಯ ಇಕ್ಕೆಲೆಗಳಲ್ಲಿ ಗಿಡಗಳನ್ನು ನೆಡಲಾಗುತ್ತದೆ.

ಆಯ್ದ ಕೈಗಾರಿಕಾ ಪ್ರದೇಶಗಳು, ಕೃಷಿ ಪ್ರದೇಶಗಳು, ಪ್ರವಾಸಿ ಸ್ಥಳಗಳು, ಧಾರ್ಮಿಕ ಸ್ಥಳಗಳು, ಅಭಿವೃದ್ಧಿ ಹೊಂದುತ್ತಿರುವ ಮತ್ತು ಆದಾಯದ ದೃಷ್ಟಿಯಿಂದ ಹಿಂದುಳಿದ ಪ್ರದೇಶಗಳ ಮೂಲಕ ಈ ಹೆದ್ದಾರಿ ಹಾದುಹೋಗುತ್ತವೆ.

ಈ ಯೋಜನೆ ಪೂರ್ಣಗೊಂಡ ನಂತರ ಸಂಪರ್ಕ ಸುಧಾರಣೆಯಾಗಲಿದ್ದು, ಇದು ರಾಜ್ಯಗಳಿಗೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಹೆಚ್ಚಿನ ಆದಾಯವನ್ನು ನೀಡಲಿದೆ.

Last Updated : Mar 14, 2020, 7:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.