ಮುಂಬೈ: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯನ್ನು ಗಮನಿಸಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮಾಡಿದ್ದ ರಾಷ್ಟ್ರಪತಿ ಆಳ್ವಿಕೆ ಶಿಫಾರಸನ್ನು ರಾಮನಾಥ್ ಕೋವಿಂದ್ ಒಪ್ಪಿದ್ದು, ಮಹಾ ರಾಜಕೀಯಕ್ಕೆ ರೋಚಕ ತಿರುವು ಸಿಕ್ಕಿದೆ. ಕೋವಿಂದ್ ಅವರು ಸಮ್ಮತಿ ನೀಡಿರುವ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ಇಂದಿನಿಂದ ಅಧಿಕೃತವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿದೆ.
ಸರ್ಕಾರ ರಚನೆ ಮಾಡಲು ಬಿಜೆಪಿ, ಕಾಂಗ್ರೆಸ್ ಬಳಿಕ ಎನ್ಸಿಪಿಗೆ ನೀಡಲಾಗಿದ್ದ ಕಾಲಾವಧಿ ಮುಕ್ತಾಯಗೊಳ್ಳುತ್ತಿದ್ದಂತೆ ರಾಷ್ಟ್ರಪತಿ ಆಳ್ವಿಕೆಗೆ ಕೋಶ್ಯಾರಿ ಶಿಫಾರಸು ಮಾಡಿದ್ದರು. ಇನ್ನೊಂದೆಡೆ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಶಿವಸೇನೆ ನಾಯಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
-
Sources: #Maharashtra Governor Bhagat Singh Koshyari recommends President's rule in the state. pic.twitter.com/h1tpcrRhos
— ANI (@ANI) November 12, 2019 " class="align-text-top noRightClick twitterSection" data="
">Sources: #Maharashtra Governor Bhagat Singh Koshyari recommends President's rule in the state. pic.twitter.com/h1tpcrRhos
— ANI (@ANI) November 12, 2019Sources: #Maharashtra Governor Bhagat Singh Koshyari recommends President's rule in the state. pic.twitter.com/h1tpcrRhos
— ANI (@ANI) November 12, 2019
ಶಿವಸೇನೆ ಈಗಾಗಲೇ ಎನ್ಸಿಪಿ+ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದು, ಎರಡನೇ ಅತಿದೊಡ್ಡ ಪಕ್ಷವಾಗಿದ್ದ ಶಿವಸೇನೆಗೆ ಸರ್ಕಾರ ರಚನೆ ಮಾಡಲು ನೀಡಲಾಗಿದ್ದ ಕಾಲಾವಧಿ ನಿನ್ನೆ ಸಂಜೆ ಮುಕ್ತಾಯಗೊಂಡಿದೆ. ಇದಾದ ಬಳಿಕ ಎನ್ಸಿಪಿಗೆ ಸರ್ಕಾರ ರಚನೆ ಮಾಡುವಂತೆ ಅಲ್ಲಿನ ಗವರ್ನರ್ ಕಾಲಾವಕಾಶ ನೀಡಿದ್ದರು. ಇದೀಗ ಆ ಸಮಯ ಕೂಡ ಮುಕ್ತಾಯಗೊಳ್ಳಲು ಬರುತ್ತಿದ್ದಂತೆ ರಾಷ್ಟ್ರಪತಿ ಆಳ್ವಿಕೆಗಾಗಿ ಶಿಫಾರಸು ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ವಿಷಯದ ಬಗ್ಗೆ ರಾಜಭವನದಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸುಪ್ರೀಂ ಮೆಟ್ಟಿಲೇರಲು ಶಿವಸೇನೆ ನಿರ್ಧಾರ
ಇನ್ನು ಸರ್ಕಾರ ರಚನೆ ಮಾಡಲು ಶಿವಸೇನೆ ನಿನ್ನೆ 48 ಗಂಟೆ ಕಾಲಾವಕಾಶ ಕೇಳಿತ್ತು. ಈ ಮನವಿಯನ್ನ ಗವರ್ನರ್ ತಿರಸ್ಕರಿಸಿರುವುದರಿಂದ ಶಿವಸೇನೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ. ಸರ್ಕಾರ ರಚನೆ ಮಾಡಲು ಗವರ್ನರ್ ನಮಗೆ ಸಮಯವಕಾಶ ನೀಡುತ್ತಿಲ್ಲ ಎಂಬ ವಿಷಯವನ್ನಿಟ್ಟುಕೊಂಡು ಅವರು ಸುಪ್ರೀಂನಲ್ಲಿ ಗವರ್ನರ್ ವಿರುದ್ಧ ದೂರು ದಾಖಲು ಮಾಡುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಸಂಪುಟ ಸಭೆ!
ಮಹಾರಾಷ್ಟ್ರದಲ್ಲಿ ರಾಜಕೀಯ ಜಟಾಪಟಿ ಶುರುಗೊಂಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಇದರಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿಯೂ ದೊರೆತಿದೆ.
ಮಹಾರಾಷ್ಟ್ರಕ್ಕೆ ಖರ್ಗೆ, ಅಹ್ಮದ್ ಪಟೇಲ್
ಇನ್ನು ಮಹಾರಾಷ್ಟ್ರದಲ್ಲಿ ಎನ್ಸಿಪಿ ಮುಖಂಡ ಶರದ್ ಪವಾರ್ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸುವ ಉದ್ದೇಶದಿಂದ ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಅಹ್ಮದ್ ಪಟೇಲ್ ಮುಂಬೈಗೆ ತೆರಳಲಿದ್ದಾರೆ.