ಸೋನಿಪತ್(ಹರಿಯಾಣ) : ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳ ವಿಚಾರದಲ್ಲಿ ಸರ್ಕಾರ ಮತ್ತು ರೈತರ ನಡುವೆ ಮಾತುಕತೆ ನಡೆಯುತ್ತಿದೆ. ರೈತರ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ ಕೃಷಿ ಕಾನೂನುಗಳಲ್ಲಿ ಕೆಲವು ತಿದ್ದುಪಡಿಗಳನ್ನು ಸೂಚಿಸಿದ್ದು, ಲಿಖಿತ ಪ್ರಸ್ತಾವನೆಯನ್ನು ರೈತರಿಗೆ ಕಳುಹಿಸಿದೆ.
ಎಲ್ಲಾ ಕೃಷಿ ಸುಧಾರಣಾ ಕಾನೂನುಗಳನ್ನು ತೆಗೆದು ಹಾಕಬೇಕೆಂದು ರೈತರು ಒತ್ತಾಯ ಮಾಡುತ್ತಿದ್ದು, ಆದಷ್ಟು ಬೇಗ ಸರ್ಕಾರದ ಪ್ರಸ್ತಾಪವನ್ನು ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಫಲ ನೀಡದ ಅಮಿತ್ ಶಾ ಸಂಧಾನ: ಇಂದು ನಡೆಯಬೇಕಿದ್ದ ಕೇಂದ್ರ ಸರ್ಕಾರ-ರೈತರ ಸಭೆ ರದ್ದು
ಕೇಂದ್ರ ಸರ್ಕಾರದ ಈ ಪ್ರಸ್ತಾವದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ರದ್ದು ಮಾಡುವುದಿಲ್ಲ ಎಂದು ಕೂಡ ಉಲ್ಲೇಖ ಮಾಡಲಾಗಿದೆ. ಮಂಗಳವಾರವಷ್ಟೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ರೈತರೊಂದಿಗೆ ಸಭೆ ನಡೆಸಿದ್ದು, ಮಾತುಕತೆ ವಿಫಲವಾಗಿತ್ತು.
ಇದಾದ ನಂತರ ರೈತ ಸಂಘಟನೆಗಳ ನಾಯಕರು ದೆಹಲಿ-ಹರಿಯಾಣದ ನಡುವಿನ ಸಿಂಘು ಗಡಿಯಲ್ಲಿ ಎಲ್ಲಾ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಒತ್ತಾಯ ಮಾಡಲಾರಂಭಿಸಿದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳಿಗೆ ಲಿಖಿತ ರೂಪದ ಪ್ರಸ್ತಾವವನ್ನು ನೀಡಿ, ಕೆಲವು ತಿದ್ದುಪಡಿಗಳನ್ನು ಉಲ್ಲೇಖ ಮಾಡಿದೆ.