ETV Bharat / bharat

ಅ.15ರಿಂದ ಚಿತ್ರಮಂದಿರಗಳು ಪುನಾರಂಭ​​​​​​​.. ಥಿಯೇಟರ್‌ಗೆ ಹೋಗುವ ಮೊದ್ಲು ಷರತ್ತು ತಿಳ್ಕೊಳ್ಳಿ!!

author img

By

Published : Oct 6, 2020, 3:31 PM IST

ಲಾಕ್​​​ಡೌನ್​​ ಬಳಿಕ ಚಿತ್ರಮಂದಿರಗಳಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿತ್ತು. ಇದೀಗ ಚಿತ್ರಮಂದಿರಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಅದಕ್ಕೂ ಮೊದಲು ಈ ಷರತ್ತುಗಳು ಅನ್ವಯಿಸುತ್ತವೆ..

Minister Prakash Javadekar
ಸಚಿವ ಪ್ರಕಾಶ್ ಜಾವಡೇಕರ್

ನವದೆಹಲಿ: ಕೊರೊನಾ ಹಾವಳಿಯಿಂದಾಗಿ ಕಳೆದ 7 ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳಿಗೆ ರಿಲೀಫ್ ಸಿಕ್ಕಿದೆ. ಅಕ್ಟೋಬರ್ 15ರಿಂದ ಷರತ್ತುಗಳ ಮೇರೆಗೆ ಥಿಯೇಟರ್‌ಗಳನ್ನ ತೆರೆಯುವಂತೆ ಆದೇಶ ನೀಡಲಾಗಿದೆ.

ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್​​​​ ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಿತ್ರಮಂದಿರ ತೆರೆಯಲು ವಿಧಿಸಿರುವ ಪ್ರಮುಖ ಷರತ್ತುಗಳು:

  • ಚಿತ್ರಮಂದಿರಗಳು ಶೇ.50ಕ್ಕಿಂತ ಹೆಚ್ಚು ಪ್ರೇಕ್ಷಕರು ಕೂರುವಂತಿಲ್ಲ
  • ಪ್ರೇಕ್ಷಕರ ನಡುವೆ ದೈಹಿಕ ಅಂತರ ಹಾಗೂ ಮಾಸ್ಕ್​​​ ಕಡ್ಡಾಯ
  • ಪ್ರೇಕ್ಷಕರು ಕೂರದ ಸೀಟುಗಳನ್ನು ಗುರುತಿಸುವುದು
  • ಹ್ಯಾಂಡ್ ವಾಶ್ ಹಾಗೂ ಹ್ಯಾಂಡ್​ ಸ್ಯಾನಿಟೈಸರ್ ಬಳಕೆಗೆ ಉತ್ತೇಜನ
  • ಪ್ರೇಕ್ಷಕರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್​ ಹೊಂದಿರಬೇಕು
  • ಥರ್ಮಲ್​ ಸ್ಕ್ರೀನಿಂಗ್ ಕಡ್ಡಾಯ ಹಾಗೂ ಸೋಂಕಿತರಿದ್ದರೆ ಪ್ರವೇಶ ನಿರ್ಬಂಧ
  • ಡಿಜಿಟಲ್​ ಪೇಮೆಂಟ್​​​ಗೆ ಪ್ರೋತ್ಸಾಹ
  • ಪ್ರತಿನಿತ್ಯ ಚಿತ್ರಮಂದಿರ ಸ್ವಚ್ಛತಾ ಕಾರ್ಯ ಮಾಡುವುದು
  • ಟಿಕೆಟ್​​ ಕೌಂಟರ್​​​ಗಳ ಸಂಖ್ಯೆ ಹೆಚ್ಚಿಸುವುದು
  • ಚಿತ್ರಮಂದಿರದೊಳಗೆ ಬಂದ ಪ್ರೇಕ್ಷಕರು ಓಡಾಡುವುದಕ್ಕೆ ತಡೆ
  • ಟಿಕೆಟ್ ಕೌಂಟರ್ ಬಳಿ ದೈಹಿಕ ಅಂತರ ಕಾಪಾಡುವಂತೆ ನೋಡಿಕೊಳ್ಳುವುದು
  • ಮಂದಿರದೊಳಗೆ ಉಗುಳುವುದು ನಿಷೇಧ
  • ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಮೊಬೈಲ್ ನಂಬರ್ ಪಡೆದುಕೊಳ್ಳುವುದು
  • ದಿನಪೂರ್ತಿ ಟಿಕೆಟ್​ ಕೌಂಟರ್ ತೆರೆದಿಡುವುದು ಹಾಗೂ ಮುಂಗಡ ಬುಕ್ಕಿಂಗ್​​​​ ಸೌಲಭ್ಯ ನೀಡುವುದು
  • ತಿಂಡಿ-ತಿನಿಸು ಮಾರಾಟ ಕೌಂಟರ್​​​ಗಳ ಹೆಚ್ಚಳ
  • ಚಿತ್ರಮಂದಿರ ಸಿಬ್ಬಂದಿಗೆ ಪಿಪಿಇ, ಹ್ಯಾಂಡ್​ ಗ್ಲೌಸ್, ಮಾಸ್ಕ್​, ಸ್ಯಾನಿಟೈಸರ್ ಒದಗಿಸುವುದು

ಇದಿಷ್ಟೇ ಅಲ್ಲದೆ ಹಲವು ಷರತ್ತುಗಳನ್ನು ವಿಧಿಸುವ ಮೂಲಕ ಚಿತ್ರಮಂದಿರಗಳನ್ನ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.