ETV Bharat / bharat

ಕೋವಿಡ್ ಬಿಕ್ಕಟ್ಟು: ಹೆಚ್ಚಾದ ಚಿನ್ನ ಕಳ್ಳಸಾಗಣೆ.. ಮೂರುವರೆ ವರ್ಷದಲ್ಲಿ 9,962 ಕೆ.ಜಿ ಬಂಗಾರ ವಶ - ಕಂದಾಯ ಗುಪ್ತಚರ ನಿರ್ದೇಶನಾಲಯ

ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಜನತೆ ಮೂಲ ಸೌಕರ್ಯಗಳಿಗೆ ಹೆಣಗಾಡುತ್ತಿದ್ದರೆ, ಅತ್ತ ವಿದೇಶಗಳಿಗೆ ಚಿನ್ನ ಕಳ್ಳಸಾಗಣೆ ಹೆಚ್ಚುತ್ತಿವೆ. ಹಾಗಾದ್ರೆ, ಅಧಿಕಾರಿಗಳು ಎಷ್ಟು ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ? ಎಷ್ಟು ಪ್ರಕರಣಗಳು ದಾಖಲಾಗಿವೆ ಅನ್ನೋದರ ವರದಿ ಇಲ್ಲಿದೆ.

golden-web
ಹೆಚ್ಚಾದ ಚಿನ್ನ ಕಳ್ಳಸಾಗಣೆ
author img

By

Published : Oct 17, 2020, 3:59 PM IST

ಹೈದರಾಬಾದ್ : ಚಿನ್ನ ಖರೀದಿಯಲ್ಲಿ ಭಾರತೀಯರೇ ಮೇಲುಗೈ. ಆರ್ಥಿಕ ಭದ್ರತೆ ಹಿತದೃಷ್ಟಿಯಿಂದ ಜನತೆ ಚಿನ್ನ ಸಂಗ್ರಹಿಸಿಡುತ್ತಾರೆ. ಆದ್ರೆ, ಇತ್ತೀಚೆಗೆ ಭಾರತದಲ್ಲಿ ಚಿನ್ನ ಕಳ್ಳಸಾಗಣೆ ಗಣನೀಯ ಏರಿಕೆ ಕಂಡಿದೆ. 2012 ರಿಂದ 2017 ರವರೆಗೆ ಬಂಗಾರದ ಅಧಿಕೃತ ಆಮದು ಸರಾಸರಿ 800 ಟನ್ ಆಗಿದೆ. ಇದರ ಮೌಲ್ಯ ಅಂದಾಜು 30 ಬಿಲಿಯನ್ ಯುಎಸ್​ಡಿ ಎಂದು ಅಂದಾಜಿಸಲಾಗಿದೆ.

ಕೊರೊನಾ ಬಿಕ್ಕಟ್ಟಿನ ಮಧ್ಯೆ ಜನತೆ ಮೂಲಸೌಕರ್ಯಗಳಿಗೆ ಹೆಣಗಾಡುತ್ತಿರುವಾಗ, ಚಿನ್ನ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನ ವಿದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿರುವುದು ಬಹಿರಂಗಗೊಂಡಿದೆ.

ಮಾರ್ಚ್ 25 ರಿಂದ ದೇಶದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಳಿಸಲಾಯಿತು. ಆದ್ರೆ, ಕೊರೊನಾ ಅವಧಿಯಲ್ಲಿ ವಿದೇಶದಲ್ಲಿ ಸಿಲುಕಿದ್ದವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮತ್ತೆ ವಿಮಾನ ಹಾರಾಟವನ್ನ ಪ್ರಾರಂಭಿಸಿತು. ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ ಮಧ್ಯಪ್ರಾಚ್ಯಕ್ಕೆ ಕಳುಹಿಸಿದ ವಿಮಾನಗಳಲ್ಲಿ ಕಳ್ಳಸಾಗಣೆ ದಂಧೆ ಸಕ್ರಿಯಗೊಂಡಿದ್ದವು ಎಂದಿದ್ದಾರೆ.

ಚಿನ್ನ ಕಳ್ಳಸಾಗಣೆ ಹೆಚ್ಚಾದ ಹಿನ್ನೆಲೆ, ಜುಲೈ 2020 ರ ಅವಧಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ಎನ್​ಐಎ ತನಿಖೆ ಪ್ರಾರಂಭಿಸಿದರು. ಈ ವೇಳೆ ತಿರುವನಂತಪುರಂ ಏರ್ಪೋರ್ಟ್​​ನಲ್ಲಿ ಅಕ್ರಮ ಚಿನ್ನ ಸಾಗಣೆ ಮಾಡ್ತಿದ್ದ 16 ಮಂದಿಯನ್ನ ಬಂಧಿಸಲಾಗಿದ್ದು, 30 ಕೆಜಿ ಗೂ ಅಧಿಕ ಬಂಗಾರ ವಶಪಡಿಸಿಕೊಳ್ಳಲಾಯಿತು.

ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ 196 ಕಳ್ಳಸಾಗಣೆ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ. 2020ರ ಏಪ್ರಿಲ್​ನಿಂದ ಆಗಸ್ಟ್​​ವರೆಗೆ 103 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡಿದ್ದಕ್ಕಾಗಿ 200 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2019 -20 ನೇ ಸಾಲಿನಲ್ಲಿ ಕಳ್ಳಸಾಗಣೆ ಅಲ್ಪಪ್ರಮಾಣದಲ್ಲಿ ಕುಸಿದೆ. ಆದ್ರೆ, ಮುಂಬೈ, ದೆಹಲಿ, ಚೆನ್ನೈ, ಕೋಯಿಕ್ಕೋಡ್​ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಅತಿ ಹೆಚ್ಚು ಚಿನ್ನವನ್ನ ವಶಪಡಿಸಿಕೊಂಡಿದ್ದಾರೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ 2018-19 ರಲ್ಲಿ 2,946 ಕೆಜಿ, 2017-18ರಲ್ಲಿ 2,236 ಕೆ.ಜಿ, 2019-20ರಲ್ಲಿ 2,668 ಕೆಜಿ ಚಿನ್ನವನ್ನ ವಶಪಡಿಸಿಕೊಳ್ಳಲಾಗಿದೆ.

ಭಾರತದಲ್ಲಿ ಚಿನ್ನದ ಬೆಲೆ ದಿಢೀರನೆ ಶೇಕಡ 30 ರಷ್ಟು ಹೆಚ್ಚಳವಾಗಿರುವುದು ಕಳ್ಳಸಾಗಣೆ ಹೆಚ್ಚಾಗಲು ಕಾರಣವಾಗಿದೆ. ಜಾರಿ ನಿರ್ದೇಶನಾಲಯ ವಿವಿಧೆಡೆ ದಾಳಿ ನಡೆಸಿ 1,600 ಕೆ.ಜಿಗೂ ಅಧಿಕ ಚಿನ್ನ ವಶಪಡಿಸಿಕೊಂಡಿದೆ.

ಅಕ್ಟೋಬರ್ 2, 2020 ರಂದು ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) 33 ಕೆ.ಜಿ. ಚಿನ್ನವನ್ನ ವಶಕ್ಕೆ ಪಡೆದು ನಾಲ್ವರನ್ನ ಬಂಧಿಸಿತ್ತು.

ಆಗಸ್ಟ್ 2020 ರವೆಗೆ ವಿವಿಧ ಏಜೆನ್ಸಿಗಳಿಂದ 2,112 ಕೆ.ಜಿ ಚಿನ್ನ ವಶಪಡಿಸಿಕೊಳ್ಳುವಿಕೆ ಪ್ರಕರಣಗಳು ವರದಿಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.