ETV Bharat / bharat

16 ಕೆಜಿ ಚಿನ್ನ ಧರಿಸಿ ಯಾತ್ರೆ ಮಾಡಿದ ಗೋಲ್ಡನ್​ ಬಾಬಾ..! - ಗೋಲ್ಡನ್​ ಬಾಬ

ಕಳೆದ 25 ವರ್ಷಗಳಿಂದಲೂ ಕನ್ವಾರ್​ ಯಾತ್ರೆಗೆ ತೆರಳುತ್ತಿದ್ದ ಗೋಲ್ಡನ್​ ಬಾಬಾ ಈ ಬಾರಿಯೂ ಭಾಗವಹಿಸಿದ್ದಾರೆ. ಇದು ಅವರು 26ನೇ ಬಾರಿ ಇದರಲ್ಲಿ ಪಾಲ್ಗೊಂಡಂತಾಗಿದೆ. ಈ ಯಾತ್ರೆಯಲ್ಲಿ ಭಾಗವಹಿಸಿದಾಗ ಬಾಬಾ ಧರಿಸಿದ್ದ ಚಿನ್ನದ ಪ್ರಮಾಣ ಬರೋಬ್ಬರಿ 16 ಕೆಜಿಯಂತೆ ಕಳೆದ ವರ್ಷ 20 ಕೆಜಿ ಚಿನ್ನ ಧರಿಸಿ ಯಾತ್ರೆಗೆ ಹೋಗಿದ್ದರು. ಆರೋಗ್ಯ ಸಮಸ್ಯೆ ಇರುವುದರಿಂದ ಈ ಬಾರಿ ಕಡಿಮೆ ಪ್ರಮಾಣದ ಚಿನ್ನವನ್ನು ಧರಿಸಿರುವುದಾಗಿ ಬಾಬಾ ತಿಳಿಸಿದ್ದಾರೆ.

16 ಕೆಜಿ ಚಿನ್ನ ಧರಿಸಿ ಯಾತ್ರೆ ಮಾಡಿದ ಗೋಲ್ಡನ್​ ಬಾಬಾ..!
author img

By

Published : Jul 28, 2019, 10:09 AM IST

Updated : Jul 28, 2019, 10:29 AM IST

ಉತ್ತರಖಂಡ್​​​ : ಕೆಜಿಗಟ್ಟಲೆ ಚಿನ್ನವನ್ನು ತನ್ನ ಮೈಮೇಲೆ ಹಾಕಿಕೊಂಡು ಗೋಲ್ಡನ್​ ಬಾಬಾ ಎಂದೇ ಹೆಸರು ಪಡೆದಿರುವ ಸುಧೀರ್​ ಮಕ್ಕರ್​ ಈ ಬಾರಿಯೂ ಕೂಡ ಉತ್ತರ ಉತ್ತರಾಖಂಡ್'ನಲ್ಲಿ ನಡೆಯುವ ಕನ್ವರ್​​ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಉತ್ತರಾಖಂಡ್'ನಲ್ಲಿ ಪ್ರತಿವರ್ಷ ಶಿವನ ಭಕ್ತರು ಹರಿದ್ವಾರಕ್ಕೆ ಹೋಗುತ್ತಿದ್ದಾರೆ. ಈ ಯಾತ್ರೆಯನ್ನ ಕನ್ವರ್ ಯಾತ್ರೆ ಎಂದು ಕರೆಯಲಾಗುತ್ತದೆ.

ಕಳೆದ 25 ವರ್ಷಗಳಿಂದಲೂ ಕನ್ವಾರ್​ ಯಾತ್ರೆಗೆ ತೆರಳುತ್ತಿದ್ದ ಗೋಲ್ಡನ್​ ಬಾಬಾ ಈ ಬಾರಿಯೂ ಭಾಗಹಸಿದ್ದು, ಇದು 26ನೇ ಬಾರಿ ಭಾಗವಹಿಸಿದಂತಾಗಿದೆ. ಈ ಯಾತ್ರೆಯಲ್ಲಿ ಭಾಗವಹಿಸಿದಾಗ ಬಾಬಾ ಧರಿಸಿದ್ದ ಚಿನ್ನದ ಪ್ರಮಾಣ ಬರೋಬ್ಬರಿ 16 ಕೆಜಿಯಂತೆ ಕಳೆದ ವರ್ಷ 20 ಕೆಜಿ ಚಿನ್ನ ಧರಿಸಿ ಯಾತ್ರೆಗೆ ಹೋಗಿದ್ದರು. ಆರೋಗ್ಯ ಸಮಸ್ಯೆ ಇರುವುದರಿಂದ ಈ ಬಾರಿ ಕಡಿಮೆ ಪ್ರಮಾಣದ ಚಿನ್ನವನ್ನು ಧರಿಸಿರುವುದಾಗಿ ಬಾಬಾ ತಿಳಿಸಿದ್ದಾರೆ.

ತಾವು ಧರಿಸುವ ಚಿನ್ನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬಾ, ಮೊದಮೊದಲು ನಾನು ಗ್ರಾಂಗಳಲ್ಲಿ ಆಭರಣಗಳನ್ನು ಧರಿಸುತ್ತಿದ್ದೆ. ಆದರೆ, ಸದ್ಯ ಕೆಜಿಗಟ್ಟಲೆ ಚಿನ್ನವನ್ನು ತನ್ನ ಮೈಮೇಲೆ ಹಾಕಿಕೊಳ್ಳುತ್ತಿದ್ದೇನೆ. ಈ ಆಭರಣ ಕೊಳ್ಳಲು ನಾನು ಯಾರಿಂದಲೂ ಹಣ ಪಡೆಯುವುದಾಗಲಿ ಅಥವಾ ಸಾಲ ಪಡೆಯುವುದಾಗಲಿ ಮಾಡುವುದಿಲ್ಲ. ನನ್ನ ಸ್ವಂತ ಹಣದಿಂದಲೇ ಈ ಚಿನ್ನವನ್ನು ಖರೀದಿಸುತ್ತೇನೆ ಅಂತಾರೆ ಈ ಗೋಲ್ಡನ್​ ಬಾಬಾ.

ನನಗೆ ಆರೋಗ್ಯದ ಸಮಸ್ಯೆ ಕಂಡು ಬಂದಿದ್ದರಿಂದ ಕನ್ವಾರ್​ ಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗಲ್ಲ ಎಂದು ಹೇಳಿದ್ದೆ. ಆದರೆ, ಭಕ್ತಾಧಿಗಳು ನಾನು ಬರಲೇಬೇಕೆಂದು ಮನವಿ ಮಾಡಿದರು. ಆದ್ದರಿಂದ ಕನ್ವಾರ್ ಯತ್ರೆಯಲ್ಲಿ ಭಾಗವಹಿಸಿದೆ ಅಂದ್ರು.

Intro:Body:

national

Conclusion:
Last Updated : Jul 28, 2019, 10:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.