ETV Bharat / bharat

ಚೆನ್ನೈನಲ್ಲಿ 2.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು!

ಜ್ಯುವೆಲ್ಲರಿ ಅಂಗಡಿಗೆ ಲಗ್ಗೆ ಹಾಕಿರುವ ದರೋಡೆಕೋರರು ಬರೋಬ್ಬರಿ 2.5 ಕೋಟಿ ರೂ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

jewellery shop
jewellery shop
author img

By

Published : Oct 21, 2020, 7:21 PM IST

ಚೆನ್ನೈ: ತಮಿಳುನಾಡಿನಲ್ಲಿ ದರೋಡೆಕೋರರು ಕೈಚಳಕ ತೋರಿದ್ದು, ಬರೋಬ್ಬರಿ 2.5 ಕೋಟಿ ರೂ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಟಿ.ನಗರದ ಮೂಸಾ ಸ್ಟ್ರೀಟ್​​ನಲ್ಲಿ ಘಟನೆ ನಡೆದಿದೆ.

ಚಿನ್ನಾಭರಣದ ಅಂಗಡಿಗೆ ನುಗ್ಗಿರುವ ಖದೀಮರು ಬಂಗಾರ, ಡೈಮಂಡ್​ ಹಾಗೂ ಬೆಳ್ಳಿ ಆಭರಣ ದರೋಡೆ ಮಾಡಿದ್ದಾರೆ. ಅಂಗಡಿ ಮಾಲೀಕ ಉತ್ತಮ ಇಂದು ಬೆಳಗ್ಗೆ ಶಾಪ್​ಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಲಾಕರ್​​​ ಮುರಿದು ಹಾಕಿರುವ ಕಳ್ಳರು 5 ಕೆ.ಜಿ ಬಂಗಾರ, ಡೈಮಂಡ್​ ಹಾಗೂ ಬೆಳ್ಳಿ ಆಭರಣ ಸೇರಿ ಬರೋಬ್ಬರಿ 2.5 ಕೋಟಿ ರೂ ಮೌಲ್ಯದ ವಸ್ತು ದೋಚಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ್ದಾರೆ. ಡೆಪ್ಯುಟಿ ಕಮಿಷನರ್​​ ಹರಿಕಿರಣ್​ ಪ್ರಸಾದ್​ ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.