ಕ್ಯಾಲಿಕಟ್ (ಕೇರಳ): ಮಾಸ್ಕ್ನಲ್ಲಿ ಚಿನ್ನ ಅಡಗಿಸಿಟ್ಟು, ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಇಲ್ಲಿನ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ವಾಯು ಗುಪ್ತಚರ ಘಟಕವು ಪ್ರಯಾಣಿಕನಿಂದ 40 ಗ್ರಾಂ ಚಿನ್ನ ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಪ್ರಯಾಣಿಕನು ಗ್ರೀನ್ ಚಾನೆಲ್ ದಾಟುತ್ತಿದ್ದಾಗಲೇ ಕಸ್ಟಮ್ಸ್ ಅಧಿಕಾರಿಗಳಿಗೆ ಆತನ ಮೇಲೆ ಅನುಮಾನವಿತ್ತು. ಕಸ್ಟಮ್ಸ್ ಅಧಿಕಾರಿಗಳು ತಕ್ಷಣ ಆತನನ್ನು ತಡೆದು ಮಾಸ್ಕ್ನಲ್ಲಿದ್ದ 40 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.