ಮಲಪ್ಪುರಂ: ದುಬೈನಿಂದ ಕೇರಳದ ಕೋಯಿಕೋಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನಿಂದ ಜಿಲ್ಲಾ ಆಯುಕ್ತ ಟಿ.ಎ.ಕಿರಣ್ ತಂಡ 800 ಗ್ರಾಂ ಅಕ್ರಮ ಚಿನ್ನ ವಶಪಡಿಸಿಕೊಂಡಿದೆ.
ಕೋಯಿಕೋಡ್ನ ಇಬ್ರಾಹಿಂ ಶೆರಿಫ್ ಎಂಬಾತ ದುಬೈನಿಂದ ಕೇರಳಕ್ಕೆ ಮಾತ್ರೆಗಳಲ್ಲಿ 38.86 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನವನ್ನು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ.
ಈ ವೇಳೆ ಕಾರ್ಯಾಚರಣೆ ನಡೆಸಿದ ಜಿಲ್ಲಾ ಆಯುಕ್ತರ ತಂಡ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.