ETV Bharat / bharat

ಸಂತ ಜೋಸೆಫರ ಉಡುಪು ಧರಿಸಿ ಸಂಚಾರ ನಿಮಯದ ಅರಿವು ಮೂಡಿಸಿದ ಪೊಲೀಸರು

author img

By

Published : Dec 25, 2019, 11:01 AM IST

ದಿನಾಲೂ ಬಳಸುತ್ತಿದ್ದ ಸಮವಸ್ತ್ರವನ್ನು ಇಂದು ಪಕ್ಕಕ್ಕಿಟ್ಟು ಸಂತ ಜೋಸೆಫರ ಉಡುಪು ಧರಿಸಿದ ಸಂಚಾರಿ ಪೊಲೀಸರು, ಸವಾರರಿಗೆ ಸಂಚಾರಿ ನಿಯಮ ಪಾಲನೆ ಕುರಿತು ಅರಿವು ಮೂಡಿಸಿದರು.

Goa police spreading awareness about traffic rules and regulation by wearing Santa outfit
ಸಂಚಾರ ನಿಮಯ ಪಾಲನೆ ಅರಿವು ಮೂಡಿಸಿದ ಪೊಲೀಸರು

ಗೋವಾ: ಕ್ರಿಸ್​ಮಸ್​ ಹಬ್ಬದ ಸಲುವಾಗಿ ಇಲ್ಲಿನ ಸಂಚಾರಿ ಪೊಲೀಸರು ಸಂತ ಜೋಸೆಫರ ಉಡುಪು ಧರಿಸಿ ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲನೆಯ ಅರಿವು ಮೂಡಿಸುವ ಮೂಲಕ ಗಮನ ಸೆಳೆದರು.

ಪಣಜಿ ಸಂಚಾರಿ ಪೊಲೀಸರು ತಮ್ಮ ಸಮವಸ್ತ್ರದ ಬದಲಿಗೆ ಸಂತ ಜೋಸೆಫರ ಉಡುಪು ಧರಿಸಿ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸುತ್ತ ವಾಹನ ಸವಾರರಿಗೆ ಸಿಹಿ ಹಂಚಿ ಶುಭ ಕೋರಿದ್ರು. ಪ್ರತಿಯಾಗಿ ಸವಾರರೂ ಪೊಲೀಸರಿಗೆ ಶುಭಾಶಯ ವಿನಿಮಯ ಮಾಡಿದರು.

ಸರ್ಕಾರ ರೂಪಿಸಿರುವ ಸಂಚಾರ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಪ್ರತಿಯೊಬ್ಬ ದ್ವಿಚಕ್ರ ಸವಾರನೂ ಹೆಲ್ಮೆಟ್​ ಧರಿಸಿ ತಮ್ಮ ಜೀವ ಉಳಿಸಿಕೊಳ್ಳಿ ಎಂದು ಎಲ್ಲರಿಗೂ ಸಲಹೆ ನೀಡಿದರು.

ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.