ಪಣಜಿ(ಗೋವಾ): ರಾಜ್ಯದಲ್ಲಿ ನವೆಂಬರ್ 21 ರಿಂದ 10 ಮತ್ತು 12ನೇ ತರಗತಿಗಳಿಗೆ ಶಾಲೆಗಳನ್ನು ಪುನಾರಂಭಿಸಲು ಗೋವಾ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್‌ಒಪಿ)ಗಳನ್ನು ಬಿಡುಗಡೆ ಮಾಡಿದೆ.
ಎಸ್‌ಒಪಿ ಪ್ರಕಾರ, ಒಂದು ತರಗತಿಯಲ್ಲಿ 12 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು ಮತ್ತು ತರಗತಿಗಳು ಬೆಸ-ಸಮ ಸೂತ್ರವನ್ನು ಅನುಸರಿಸಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಕೌಶಲ್ಯ ಆಧಾರಿತ ತರಬೇತಿಗಾಗಿ ಕಾರ್ಯಾಗಾರಗಳು/ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳು ತರಬೇತಿ ಸಾಧನಗಳನ್ನು ಬಳಸುವ ಮೊದಲು ಮತ್ತು ನಂತರ ತಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ನೋಡಿಕೊಳ್ಳಬೇಕು.
ಮೂಲಭೂತವಾಗಿರುವ ಮುಖಗವಸುಗಳು, ಹ್ಯಾಂಡ್ ಸ್ಯಾನಿಟೈಜರ್‌ಗಳು ಮುಂತಾದ ವೈಯಕ್ತಿಕ ಸಂರಕ್ಷಣಾ ವಸ್ತುಗಳ ಸೂಕ್ತ ಬ್ಯಾಕ್-ಅಪ್ ಸಂಗ್ರಹವಿರುವಂತೆ ನೋಡಿಕೊಳ್ಳಬೇಕು. ಜೊತೆಗೆ, ಅವು ಶಿಕ್ಷಕರು ಮತ್ತು ಉದ್ಯೋಗಿಗಳಿಗೆ ಲಭ್ಯವಾಗುವಂತಿರಬೇಕು ಎಂದು ಎಸ್‌ಒಪಿ ಸೂಚಿಸಿದೆ.
ಕಳೆದ ತಿಂಗಳು ಅಕ್ಟೋಬರ್ 15 ರ ನಂತರ ಶ್ರೇಣಿಕೃತ ರೀತಿಯಲ್ಲಿ ಶಾಲೆಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಪುನಃ ತೆರೆಯುವ ನಿರ್ಧಾರ ತೆಗೆದುಕೊಳ್ಳಲು ಗೃಹ ಸಚಿವಾಲಯ ರಾಜ್ಯ /ಯುಟಿ ಸರ್ಕಾರಗಳಿಗೆ ಅವಕಾಶ ನೀಡಿದೆ.