ETV Bharat / bharat

ವಿಶ್ವದಲ್ಲಿ 3.7 ಕೋಟಿ ಕೊರೊನಾ​ ಸೋಂಕಿತರು.. 10.7 ಲಕ್ಷ ಮಂದಿ ಬಲಿ

author img

By

Published : Oct 11, 2020, 2:22 PM IST

Updated : Oct 11, 2020, 2:54 PM IST

ಪ್ರಪಂಚದ ಕೊರೊನಾ​ ಪೀಡಿತ ದೇಶಗಳ ಪೈಕಿ ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​ನಲ್ಲಿ ಮೃತರ ಸಂಖ್ಯೆ 1.5 ಲಕ್ಷ ಗಡಿ ದಾಟಿದ್ದು, ಕೇಸ್​ಗಳ ಪೈಕಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 7 ಮಿಲಿಯನ್​ ಗಡಿ ದಾಟಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್

ಹೈದರಾಬಾದ್​: ವಿಶ್ವದಾದ್ಯಂತ ಬರೋಬ್ಬರಿ 3,74,75,839 ಜನರಿಗೆ ಮಾರಣಾಂತಿಕ​ ಕೊರೊನಾ ವೈರಸ್​ ಅಂಟಿದ್ದು, 10,77,594 ಸೋಂಕಿತರು ಬಲಿಯಾಗಿದ್ದಾರೆ. ಆದರೆ ಸೋಂಕಿತರ ಪೈಕಿ 2,81,17,060 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 79,45,505 ಇದ್ದು, ಮೃತರ ಸಂಖ್ಯೆ 2,19,282ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 70,53,806 ಕೇಸ್​ಗಳು ಪತ್ತೆಯಾಗಿದ್ದು, 1,08,371 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 50,91,840 ಪ್ರಕರಣಗಳು ಹಾಗೂ 1,50,236 ಸಾವುಗಳು ವರದಿಯಾಗಿವೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 12,85,084 ಕೇಸ್​​ಗಳಿದ್ದು, 22,454 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 85,557 ಪ್ರಕರಣಗಳು ಹಾಗೂ 4,634 ಸಾವುಗಳು ಸಂಭವಿಸಿವೆ.

Last Updated : Oct 11, 2020, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.