ETV Bharat / bharat

ಜಗತ್ತಿನಲ್ಲಿ ಎರಡೂವರೆ ಲಕ್ಷದ ಗಡಿ ದಾಟಿದ ಸಾವಿನ ಸಂಖ್ಯೆ: ಅಮೆರಿಕದಲ್ಲಂತೂ ರುದ್ರತಾಂಡವ

ಕೊರೊನಾ ಸೋಂಕಿನಿಂದ ವಿಶ್ವದಲ್ಲಿ ಒಟ್ಟು ಸಾವಿನ ಸಂಖ್ಯೆ ಎರಡೂವರೆ ಲಕ್ಷ ಗಡಿ ದಾಟಿದೆ. ಅಮೆರಿಕ ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.

author img

By

Published : May 5, 2020, 11:08 AM IST

corona updates
ಕೊರೊನಾ ಅಪ್ಡೇಟ್ಸ್​​​

ವಾಷಿಂಗ್ಟನ್​​ (ಅಮೆರಿಕ) : ಕೊರೊನಾ ಆರ್ಭಟ ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳಿಗೂ ಕೂಡಾ ವ್ಯಾಪಿಸಿದೆ. ರೌದ್ರನರ್ತನ ತೋರುತ್ತಿರುವ ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ ಎರಡೂವರೆ ಲಕ್ಷ ದಾಟಿದೆ ಎಂದು ಜೊಹಾನ್ಸ್​ ಹಾಪ್ಕಿನ್ಸ್​ ವಿಶ್ವವಿದ್ಯಾಲಯ ತಿಳಿಸಿದೆ.

ವಿಶ್ವವಿದ್ಯಾಲಯದ ಸೆಂಟರ್ ಫಾರ್​ ಸಿಸ್ಟಮ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​ನ ಅಂಕಿ - ಅಂಶದಂತೆ 2,51,510 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ಇಲ್ಲಿಯವರೆಗೆ 68,922 ಮಂದಿ ಸಾವನ್ನಪ್ಪಿದ್ದು ಸೋಂಕಿತರ ಜತೆಗೆ ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇಟಲಿಯಲ್ಲಿ 29,079, ಇಂಗ್ಲೆಂಡಿನಲ್ಲಿ 28,809 ಮಂದಿ, ಸ್ಪೇನ್​​ನಲ್ಲಿ 25,428 ಮಂದಿ, ಫ್ರಾನ್ಸ್​​​ನಲ್ಲಿ 25,204 ಮಂದಿ ಸಾವನ್ನಪ್ಪಿದ್ದಾರೆ.

ವಿಶ್ವದಲ್ಲಿ ಒಟ್ಟು 35,82,469 ಸೋಂಕಿತರಿದ್ದು, 11,80,288 ಸೋಂಕಿತರನ್ನು ಹೊಂದಿರುವ ಅಮೆರಿಕ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಸ್ಪೇನ್​​ನಲ್ಲಿ 2,18,011, ಇಟಲಿಯಲ್ಲಿ 2,11,938, ಇಂಗ್ಲೆಂಡಿನಲ್ಲಿ 1,91,832, ಫ್ರಾನ್ಸ್​ನಲ್ಲಿ 1,69,583, ಜರ್ಮನಿಯಲ್ಲಿ 1,66,152, ರಷ್ಯಾದಲ್ಲಿ 1,45,268, ಟರ್ಕಿಯಲ್ಲಿ 1,27,659 ಹಾಗೂ ಬ್ರೆಜಿಲ್​ನಲ್ಲಿ 1,08,266 ಮಂದಿ ಸೋಂಕಿತರಿದ್ದಾರೆ.

ವಿಶ್ವದಲ್ಲಿ ಈವರೆಗೆ 12,00,282 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಅಮೆರಿಕದಲ್ಲಿ 1,88,068, ಸ್ಪೇನ್​​ನಲ್ಲಿ 151,633, ಜರ್ಮನಿಯಲ್ಲಿ 1,35,100 ಮಂದಿ ಗುಣಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.