ETV Bharat / bharat

ಗುಡ್​​ ನ್ಯೂಸ್​: ಕೊರೊನಾಗೆ ಭಾರತದಲ್ಲೇ ತಯಾರಾದ ಔಷಧಿ ರಿಲೀಸ್​​​! - ಕೋವಿಡ್​-19 ಔಷಧ ಬಿಡುಗಡೆ

ಕೋವಿಡ್​-19 ಚಿಕಿತ್ಸೆಗಾಗಿ ಫ್ಯಾಬಿಫ್ಲೂವಿ ಅನುಮೋದಿತ ಮೊದಲ ಮೌಖಿಕ ಔಷಧ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಫ್ಯಾಬಿಫ್ಲೂನಂತಹ ಪರಿಣಾಮಕಾರಿ ಚಿಕಿತ್ಸೆಯ ಲಭ್ಯತೆಯು ಭಾರತದಲ್ಲಿನ ರೋಗಿಗಳಿಗೆ ಹೆಚ್ಚು ಅಗತ್ಯ ಮತ್ತು ಸಮಯೋಚಿತ ಚಿಕಿತ್ಸೆಯ ಆಯ್ಕೆ ನೀಡುತ್ತದೆ ಎಂದು ಕಂಪನಿ ಆಶಿಸಿದೆ..

ಫಾರ್ಮಾಸ್ಯುಟಿಕಲ್ಸ್​ನಿಂದ ಔಷಧ ಬಿಡುಗಡೆ
ಫಾರ್ಮಾಸ್ಯುಟಿಕಲ್ಸ್​ನಿಂದ ಔಷಧ ಬಿಡುಗಡೆ
author img

By

Published : Jun 20, 2020, 5:11 PM IST

Updated : Jun 20, 2020, 6:21 PM IST

ನವದೆಹಲಿ: ತೀವ್ರವಾಗಿ ಕೊರೊನಾ ಬಾಧೆಗೆ ಒಳಗಾಗದ ರೋಗಿಗಳ ಚಿಕಿತ್ಸೆಗಾಗಿ ಫ್ಯಾಬಿಫ್ಲೂ ಎಂಬ ಬ್ರಾಂಡ್ ಹೆಸರಿನಲ್ಲಿ ಆಂಟಿವೈರಲ್ ಔಷಧಿ ಫಾವಿಪಿರವಿರ್‌ ಬಿಡುಗಡೆ ಮಾಡಲಾಗಿದೆ ಎಂದು ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ತಿಳಿಸಿದೆ. ಮುಂಬೈ ಮೂಲದ ಔಷಧ ಸಂಸ್ಥೆಯು ಶುಕ್ರವಾರ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ದಿಂದ ಉತ್ಪಾದನೆ ಮತ್ತು ಮಾರುಕಟ್ಟೆ ಅನುಮೋದನೆ ಪಡೆದಿತ್ತು.

ಕೋವಿಡ್​-19 ಚಿಕಿತ್ಸೆಗಾಗಿ ಫ್ಯಾಬಿಫ್ಲೂವಿ ಅನುಮೋದಿತ ಮೊದಲ ಔಷಧ ಇದಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಫ್ಯಾಬಿಫ್ಲೂನಂತಹ ಪರಿಣಾಮಕಾರಿ ಚಿಕಿತ್ಸೆಯ ಲಭ್ಯತೆಯು ಭಾರತದಲ್ಲಿನ ರೋಗಿಗಳಿಗೆ ಹೆಚ್ಚು ಅಗತ್ಯವಿರುವ ಮತ್ತು ಸಮಯೋಚಿತ ಚಿಕಿತ್ಸೆಯ ಆಯ್ಕೆ ನೀಡುತ್ತದೆ ಎಂದು ಕಂಪನಿ ಆಶಿಸಿದೆ. ಕ್ಲಿನಿಕಲ್ ಪ್ರಯೋಗಗಳ ಸಮಯದಲ್ಲಿ ಫ್ಯಾಬಿಫ್ಲೂ ಮಧ್ಯಮ ಬಾಧಿತ ಕೋವಿಡ್​-19 ರೋಗಿಗಳಿಗೆ ಪರಿಣಾಮಕಾರಿಯಾಗಿದೆ ಎಂದು ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಗ್ಲೆನ್ ಸಲ್ದಾನಾ ಹೇಳಿದರು.

ದೇಶಾದ್ಯಂತದ ರೋಗಿಗಳಿಗೆ ಫ್ಯಾಬಿಫ್ಲೂವನ್ನು ತ್ವರಿತವಾಗಿ ನೀಡಲು ಗ್ಲೆನ್‌ಮಾರ್ಕ್ ಸರ್ಕಾರ ಮತ್ತು ವೈದ್ಯಕೀಯ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ಸಲ್ದಾನಾ ಹೇಳಿದರು. ಈ ಔಷಧದ ಟ್ಯಾಬ್ಲೆಟ್‌ ಒಂದಕ್ಕೆ 103 ರೂ. ಪ್ರಿಸ್ಕ್ರಿಪ್ಷನ್ ಆಧಾರಿತ ಔಷಧಿಯಾಗಿ ಲಭ್ಯವಿರುತ್ತದೆ. 1,800 ಮಿ. ಗ್ರಾಂ ದಿನಕ್ಕೆ ಎರಡು ಬಾರಿಯಂತೆ 14 ದಿನದವರೆಗೆ ತೆಗೆದುಕೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ.

ಇದು ನಾಲ್ಕು ದಿನಗಳಲ್ಲಿ ವೈರಲ್ ಲೋಡ್‌ ಶೀಘ್ರವಾಗಿ ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ರೋಗಲಕ್ಷಣ ಕಡಿಮೆ ಮಾಡುತ್ತದೆ. ಫಾವಿಪಿರವಿರ್ ಶೇ. 88ರಷ್ಟು ವೈದ್ಯಕೀಯ ಸುಧಾರಣೆ ತೋರಿಸಿದೆ ಎಂದು ಔಷಧಿ ತಯಾರಕರು ಹೇಳಿದರು.

Last Updated : Jun 20, 2020, 6:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.