ETV Bharat / bharat

ಹೆಣ್ಣುಮಕ್ಕಳೇ ಸಿಡಿದೇಳಿ... ಸ್ವರಕ್ಷಣೆಗೆ ಇಲ್ಲಿದೆ ನೋಡಿ ಮಾರ್ಗ - ಬಂದೂಕಿನಿಂದ ಸ್ವ ರಕ್ಷಣೆ

ಧೈರ್ಯದಿಂದ ತಪ್ಪಿತಸ್ಥರನ್ನು ಹಿಡಿಯಲು ಮತ್ತು ದೌರ್ಜನ್ಯದ ವಿರುದ್ಧ ಹೋರಾಡಲು ಮನಸ್ಸು ಮಾಡುತ್ತಿದ್ದಾರೆ. ಬಂದೂಕಿನಿಂದ ಸ್ವರಕ್ಷಣೆ ಪಡೆಯುವ ಕಲ್ಪನೆ ಇಂದಿನ ಮಹಿಳೆಯರ ಸುರಕ್ಷತೆಗೆ ಇರುವ ಏಕೈಕ ಉಪಾಯವಾಗಿದೆ.

Girls and guns story
Girls and guns story
author img

By

Published : Dec 10, 2019, 5:42 PM IST

Updated : Dec 10, 2019, 5:56 PM IST

ನವದೆಹಲಿ 2012ರಲ್ಲಿ ನಿರ್ಭಯಾ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಾಕ್ಷಿಯಾಗಿತ್ತು. ಆ ಬಳಿಕ ನಗರದ ಹಣೆಬರಹ ಮತ್ತು ದಿನನಿತ್ಯದ ಭಯಾನಕ ಘಟನೆಗಳು ಒಂದಕ್ಕೊಂದು ತಳಕು ಹಾಕಿಕೊಂಡು ಎಲ್ಲೆ ಮೀರತೊಡಗಿದವು. ಇದರಿಂದಾಗಿ ಮಹಿಳೆಯರಲ್ಲಿ ಸಾಕಷ್ಟು ಅಸುರಕ್ಷಿತ ಭಾವ ಮೂಡತೊಡಗಿದೆ.

ಈ ಮಹಾನಗರಿಯಲ್ಲಿ ಮಹಿಳೆಯರು ಯಾವ ಸಮಯದಲ್ಲಿಯೂ ಒಬ್ಬಂಟಿಯಾಗಿ ಸಂಚರಿಸುವುದು ಸಾಧ್ಯ ಇಲ್ಲ. ಇತ್ತೀಚೆಗಂತೂ ಒಂದರ ನಂತರ ಒಂದರಂತೆ, ಇಂತಹ ಘೋರ ಅಪರಾಧಗಳು ನಡೆಯುತ್ತಲೇ ಇವೆ. ನಿಧಾನವಾಗಿ ಮಹಿಳೆಯರು ತಮ್ಮ ಸ್ವಂತ ಬಲದಿಂದ ಇಂತಹ ಘಟನೆಗಳನ್ನು ನಿಭಾಯಿಸಲು ಕಲಿಯುತ್ತಿದ್ದಾರೆ. ಧೈರ್ಯದಿಂದ ತಪ್ಪಿತಸ್ಥರನ್ನು ಹಿಡಿಯಲು ಮತ್ತು ದೌರ್ಜನ್ಯದ ವಿರುದ್ಧ ಹೋರಾಡಲು ಮನಸ್ಸು ಮಾಡುತ್ತಿದ್ದಾರೆ. ಬಂದೂಕಿನಿಂದ ಸ್ವರಕ್ಷಣೆ ಪಡೆಯುವ ಕಲ್ಪನೆ ಇಂದಿನ ಮಹಿಳೆಯರ ಸುರಕ್ಷತೆಗೆ ಇರುವ ಏಕೈಕ ಉಪಾಯವಾಗಿದೆ. ಸಾಮಾನ್ಯ ಮಹಿಳೆಯ ಆತ್ಮವಿಶ್ವಾಸ ಹೆಚ್ಚಿಸುವ ಇಂತಹ ವಿಚಾರಗಳ ಕುರಿತು ಮತ್ತಷ್ಟು ಗಮನ ಹರಿಸೋಣ.

ನಿದಾರ್

ನಿದಾರ್​ ಅಂದ್ರೆ ಇದು ಹಗುರವಾದ ರಿವಾಲ್ವಾರ್​. ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಮತ್ತು ಇಶಾಪುರದಲ್ಲಿ ಮಹಿಳೆಯರಿಗೆಂದೇ ರೂಪಿಸಲಾದ ರಿವಾಲ್ವರ್ ತಯಾರಿಕೆ ಆರಂಭಿಸಿತು. ಇದರ ಬೆಲೆ ₹ 56,000. ರಿವಾಲ್ವರ್ ಇಟ್ಟುಕೊಳ್ಳಲು, ಮೊದಲು ಸ್ಥಳೀಯ ಪೊಲೀಸ್ ಠಾಣೆ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರವಾನಿಗೆಗೆ ಅರ್ಜಿ ಸಲ್ಲಿಸಬೇಕು. ಪರವಾನಗಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ಸ್ವಲ್ಪ ಸಮಯದಲ್ಲಿಯೇ ಬಂದೂಕು ಖರೀದಿಸಬಹುದು. ಈ ಬಂದೂಕುಗಳಿಗೆ ಕಾನೂನಿನ ಮಾನ್ಯತೆ ಇದೆ. ಇದೇ ಬಗೆಯ ಇತರೆ ಲಘು ತೂಕದ ರಿವಾಲ್ವರುಗಳನ್ನು ಸ್ವರಕ್ಷಣೆಗೆ ಬಳಸಲು ಸರ್ಕಾರದ ಅನುಮತಿ ಅಗತ್ಯವಿದೆ.

ನಿರ್ಭೀಕ್

ಮಹಿಳೆಯರಿಗೆಂದೇ ಸರ್ಕಾರ ವಿಶೇಷವಾಗಿ ವಿನ್ಯಾಸಗೊಳಿಸಿದ ಕಾನ್ಪುರದ ಶಸ್ತ್ರಾಗಾರದಲ್ಲಿ ತಯಾರದ ನಿರ್ಭೀಕ್, ಆತ್ಮರಕ್ಷಣೆಗಾಗಿರುವ ಆಯುಧ. ನಿರ್ಭಯಾ ಪ್ರಕರಣದ ಬಳಿಕ ಈ ಬಗೆಯ ಆಯುಧ ತಯಾರಿಸಲಾಯಿತು. ಇದನ್ನು ಹಠತೊಟ್ಟು ಮಾರುಕಟ್ಟೆಗೆ ಕೂಡ ಬಿಡುಗಡೆ ಮಾಡಲಾಗಿದೆ. ಇದೊಂದು ಲಘುತೂಕದ ಪಿಸ್ತೂಲು. ₹ 1.5 ಲಕ್ಷ ಮೌಲ್ಯದ ನಿರ್ಭೀಕ್​​​​ಅನ್ನು ಇದುವರೆಗೆ ಮೂರೂವರೆ ಸಾವಿರ ಮಂದಿ ಖರೀದಿಸಿದ್ದಾರೆ. ಪೂರ್ವಾನುಮತಿ ಪಡೆದ 60 ದಿನಗಳಲ್ಲಿ ಇದನ್ನು ಖರೀದಿಸಬಹುದು. 0.32 (7.65 ಮಿ.ಮೀ.) ಕ್ಯಾಲಿಬರ್ ನಳಿಕೆ ರಂಧ್ರದ ಸಾಮರ್ಥ್ಯ ಇರುವ ಈ ಬಂದೂಕು 15 ಮೀಟರ್ ದೂರದವರೆಗೆ ಗುರಿ ಇಡಲು ಸಹಕಾರಿ. ಅಲ್ಲದೆ ನಿರ್ವಹಣೆ ಕೂಡ ಸುಲಭ.

ಶಸ್ತ್ರಾಸ್ತ್ರ ಅಗತ್ಯವಿರುವ ಮಹಿಳೆಯರಿಗೆ, ಕರ್ನಾಟಕ ಮತ್ತು ಮೈಸೂರು ಪೊಲೀಸ್ ಇಲಾಖೆ 'ಸಿಟಿ ಸಿವಿಲಿಯನ್ ರೈಫಲ್ ಅಸೋಸಿಯೇಷನ್' ಅಡಿಯಲ್ಲಿ ಬಂದೂಕುಗಳ ಬಳಕೆಯ ಬಗ್ಗೆ ತರಬೇತಿ ನೀಡುತ್ತಿದೆ. ಮಹಿಳೆಯರ ಸ್ವರಕ್ಷಣೆಯ ಭಾಗವಾಗಿ ಈ ಬಗೆಯ ಸೇವೆಗಳನ್ನು 2016ರಲ್ಲಿ ಪೊಲೀಸರು ಆರಂಭಿಸಿದ್ದಾರೆ. ತರಬೇತಿ ನೀಡುವುದರ ಜೊತೆಗೆ, ಪರವಾನಗಿಗೆ ಅಗತ್ಯವಾದ ದಾಖಲೆಗಳು ಮತ್ತಿತರ ಸೇವೆಗಳಿಗೆ ಸಂಬಂಧಿಸಿದಂತೆ ಸಂಘ, ಗ್ರಾಹಕರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದೆ.

ಬದಲಾವಣೆ ಅನಿವಾರ್ಯ...

ಎನ್‌ಸಿಸಿ ಮತ್ತು ಕ್ರೀಡಾ ಕೆಡೆಟ್‌ಗಳಿಗೆ ಸಾಮಾನ್ಯವಾಗಿ ಆಪರೇಟಿಂಗ್ ಗನ್ ಮತ್ತಿತರ ಬಂದೂಕುಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಹಾಗೆಯೇ, ಪ್ರತಿಯೊಂದು ಕಾಲೇಜುಗಳು ಸಮರ ಕಲೆಗಳಲ್ಲಿ ತರಬೇತಿ ನೀಡುವುದರ ಜೊತೆಗೆ ವಿಶೇಷವಾಗಿ ಮಹಿಳೆಯರಿಗೆ ಬಂದೂಕಿನಿಂದ ಗುಂಡು ಹಾರಿಸುವ ತರಬೇತಿ ನೀಡಬೇಕು. ಇದನ್ನು ಶಿಕ್ಷಣ ವ್ಯವಸ್ಥೆಯ ಭಾಗವಾಗಿ ತರಬೇಕು. ಎಲ್ಲೆಡೆಯೂ ಮತ್ತು ಯಾವಾಗಲೂ ಸಾರ್ವಜನಿಕರ ರಕ್ಷೆಗೆ ಪೊಲೀಸರನ್ನು ಅವಲಂಬಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. ಘಟನೆ ನಡೆದ ಬಳಿಕ ಅದನ್ನು ತಡೆಯಬಹುದಿತ್ತು ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಅಂತಹ ಸಂದರ್ಭದಲ್ಲಿ ಹೆಣ್ಣುಮಕ್ಕಳು ಸಮಯಕ್ಕೆ ಸರಿಯಾಗಿ ಸ್ವರಕ್ಷಣೆ ಮಾಡಿಕೊಳ್ಳಲು ತರಬೇತಿ ನೀಡಬೇಕು. ಬಂದೂಕಿನ ಬಳಕೆ ಮತ್ತು ಅದರ ಕಾರ್ಯಾಚರಣೆ ಬಗ್ಗೆ ಎಲ್ಲಾ ಹೆಣ್ಣುಮಕ್ಕಳಿಗೆ ಅರಿವು ಮೂಡಿಸಬೇಕು. ಇದರಿಂದ ಭಯಾನಕ ಅಪರಾಧಗಳು ಮರುಕಳಿಸುವುದಿಲ್ಲ.

ಫಾತಿಮಾ ಬಂದೂಕು ಹಿಡಿಯಲು ಪ್ರೇರಣೆ ಏನು?

ತಮ್ಮೊಂದಿಗೆ ಶಸ್ತ್ರಾಸ್ತ್ರ ಕೊಂಡೊಯ್ಯುವಂತಾದರೆ ಮಾತ್ರ ರಕ್ಷಣೆ ಸಾಧ್ಯವಾಗುತ್ತದೆ ಮತ್ತು ಸಮಾಜದಲ್ಲಿ ಕೆಲ ಗೂಂಡಾಗಳ ವಿರುದ್ಧ ಹೋರಾಡುವ ಆತ್ಮಸ್ಥೈರ್ಯ ಮೂಡುತ್ತದೆ ಎಂಬ ಭಾವ ಈಗ ಮಹಿಳೆಯರಲ್ಲಿ ಮೊಳೆಯುತ್ತಿದೆ. ಕಂಪ್ಯೂಟರ್ ಸೈನ್ಸ್ ಬೋಧಿಸುವ ವಾರಂಗಲ್‌ನ ನೌಶೀನ್ ಫಾತಿಮಾ ಅವರು ತಮ್ಮ ಸುರಕ್ಷಣೆಗಾಗಿ ಬಂದೂಕಿನ ಪರವಾನಗಿಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಮಹಿಳೆಯರನ್ನು ಕಾಡುತ್ತಿರುವ ಭಯಕ್ಕೆ ಉದಾಹರಣೆ.

ಫಾತಿಮಾ ಕಾಝಿಪೇಟೆಯಲ್ಲಿರುವ ತನ್ನ ಮನೆಯಿಂದ ಬೆಳಗ್ಗೆ ಹೊರಟು ವಾರಂಗಲ್‌ನ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ರಾತ್ರಿ ಮರಳುತ್ತಾರೆ. ದಿಶಾ ಪ್ರಕರಣದ ಬಳಿಕ ಉಂಟಾದ ಭೀತಿ ಆಕೆಗೂ ತಟ್ಟಿದೆ. ಅಪಾಯ ಸಂಭವಿಸಿದಾಗ ಮತ್ತೊಬ್ಬರು ಬಂದು ಉಳಿಸುತ್ತಾರೆ ಎಂದು ಕಾಯುತ್ತ ಕೂರಲು ಸಾಧ್ಯವಿಲ್ಲ ಎಂಬುದು ಆಕೆಯ ಅರಿವಿಗೆ ಬಂದಿದೆ. ಘಟನೆ ಬಳಿಕ ಪ್ರತಿಮನೆಯ ಹುಡುಗಿಯರೂ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ತಾವು ಸಂಚರಿಸುವಾಗ ಮಹಿಳೆಯರು ಲೈವ್ ಲೊಕೇಷನ್ ಹಂಚಿಕೊಳ್ಳುವುದು, ತೊಂದರೆಯಲ್ಲಿದ್ದಾಗ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡುವುದು, ಪೆಪ್ಪರ್ ಸ್ಪ್ರೇ ಬಳಕೆಯಂತಹ ಕ್ರಮಗಳನ್ನು ಕೈಗೊಳ್ಳುವುದು ರೂಢಿ. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದರೂ ಹುಡುಗಿ ಸುರಕ್ಷಿತವಾಗಿ ಇರಬಲ್ಲಳು ಎನ್ನುವುದು ಖಾತ್ರಿ ಇಲ್ಲ.

ಫಾತಿಮಾ ಅವರು ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಲು ಈ ಆಲೋಚನೆ ಪ್ರೇರಣೆಯಾಗಿದೆ. 2019ರ ನವೆಂಬರ್ 30ರಂದು ಅಗತ್ಯ ದಾಖಲೆಗಳೊಂದಿಗೆ ಕಾಝೀಪೇಟೆಯ ಪೊಲೀಸ್ ಆಯುಕ್ತರನ್ನು ಖುದ್ದಾಗಿ ಸಂಪರ್ಕಿಸಿ ಪರವಾನಗಿಗೆ ಅನುಮತಿ ಕೋರಿದ ಬಳಿಕ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಖಂಡಿತಾ ತನಗೆ ಬಂದೂಕು ಪರವಾನಗಿ ಸಿಗುತ್ತದೆ ಎನ್ನುತ್ತಾರೆ ಫಾತಿಮಾ. ನಂತರ ಸ್ವಯಂ ರಕ್ಷಣೆಗಾಗಿ ಒಂದು ಬಂದೂಕು ಖರೀದಿಸಿ ಅಪಾಯದ ವೇಳೆಯಲ್ಲಿಯೂ ವಿಶ್ವಾಸದಿಂದ ಹೆಜ್ಜೆ ಹಾಕುವುದಾಗಿ ಹೇಳುತ್ತಾರೆ.

ಮೊದಲು ಮನೆಯಲ್ಲಿ ಇದಕ್ಕೆಲ್ಲಾ ಅನುಮತಿ ನೀಡಿರಲಿಲ್ಲವಂತೆ. ಈಗ ಕುಟುಂಬದವರು ಒಪ್ಪಿರುವ ಬಗ್ಗೆ ಫಾತಿಮಾ ಸಂತಸ ಹಂಚಿಕೊಂಡಿದ್ದಾರೆ. ಮಹಿಳೆ ತನ್ನ ಬಳಿ ಒಂದು ಬಂದೂಕು ಇಟ್ಟುಕೊಳ್ಳಲಿ. ಆದರೆ ಎಂದಿಗೂ ಆಕೆ ಅದನ್ನು ಬಳಸುವಂತಹ ಸನ್ನಿವೇಶ ಬಾರದಿರಲಿ. ಮಹಿಳಾ ದೌರ್ಜನ್ಯ ಇನ್ನಾದರೂ ಇಳಿಮುಖವಾಗಲಿ ಎಂದು ಆಶಿಸೋಣ.

Intro:Body:

publish

Edited use related images 

ಹೆಣ್ಣುಮಕ್ಕಳೇ ಸಿಡಿದೇಳಿ... ಬಂದೂಕು ಬಳಸಿ, ಸ್ವಯಂ ರಕ್ಷಣೆಗೆ ಮುಂದಾಗಿ! 

ನವದೆಹಲಿ 2012ರಲ್ಲಿ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಾಕ್ಷಿಯಾಗಿತ್ತು. ಆ ಬಳಿಕ ನಗರದ ಹಣೆಬರಹ ಮತ್ತು ದಿನನಿತ್ಯದ ಭಯಾನಕ ಘಟನೆಗಳು ಒಂದಕ್ಕೊಂದು ತಳಕು ಹಾಕಿಕೊಂಡು ಎಲ್ಲೆ ಮೀರತೊಡಗಿದವು. ಇದರಿಂದಾಗಿ ಮಹಿಳೆಯರಲ್ಲಿ ಸಾಕಷ್ಟು ಅಸುರಕ್ಷಿತ ಭಾವ ಮೂಡುತ್ತಿದೆ. 

ಈ ಮಹಾನಗರಿಯಲ್ಲಿ ಮಹಿಳೆಯರು ಯಾವ ಸಮಯದಲ್ಲಿಯೂ ಒಬ್ಬಂಟಿಯಾಗಿ ಸಂಚರಿಸುವುದು ಸಾಧ್ಯ ಇಲ್ಲ. ಇತ್ತೀಚೆಗಂತೂ ಒಂದರ ನಂತರ ಒಂದರಂತೆ, ಇಂತಹ ಘೋರ ಅಪರಾಧಗಳು ನಡೆಯುತ್ತಲೇ ಇವೆ. ನಿಧಾನವಾಗಿ ಮಹಿಳೆಯರು ತಮ್ಮ ಸ್ವಂತ ಬಲದಿಂದ ಇಂತಹ ಘಟನೆಗಳನ್ನು ನಿಭಾಯಿಸಲು ಕಲಿಯುತ್ತಿದ್ದಾರೆ. ಧೈರ್ಯದಿಂದ ತಪ್ಪಿತಸ್ಥರನ್ನು ಹಿಡಿಯಲು ಮತ್ತು ದೌರ್ಜನ್ಯದ ವಿರುದ್ಧ ಹೋರಾಡಲು ಮನಸ್ಸು ಮಾಡುತ್ತಿದ್ದಾರೆ. ಬಂದೂಕಿನಿಂದ ಸ್ವರಕ್ಷಣೆ ಪಡೆಯುವ ಕಲ್ಪನೆ ಇಂದಿನ ಮಹಿಳೆಯರ ಸುರಕ್ಷತೆಗೆ ಇರುವ ಏಕೈಕ ಉಪಾಯವಾಗಿದೆ. ಸಾಮಾನ್ಯ ಮಹಿಳೆಯ ಆತ್ಮವಿಶ್ವಾಸ ಹೆಚ್ಚಿಸುವ ಇಂತಹ ವಿಚಾರಗಳ ಕುರಿತು ಮತ್ತಷ್ಟು ಗಮನ ಹರಿಸೋಣ. 

ನಿದಾರ್

ನಿದಾರ್​ ಅಂದ್ರೆ ಇದು ಹಗುರವಾದ ರಿವಾಲ್ವಾರ್​. ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಮತ್ತು ಇಶಾಪುರದಲ್ಲಿ, ಮಹಿಳೆಯರಿಗೆಂದೇ ರೂಪಿಸಲಾದ ರಿವಾಲ್ವರ್ ತಯಾರಿಕೆ ಆರಂಭಿಸಿತು. ಇದರ ಬೆಲೆ ರೂ 56,000. ರಿವಾಲ್ವರ್ ಇಟ್ಟುಕೊಳ್ಳಲು ಮೊದಲು ಸ್ಥಳೀಯ ಪೊಲೀಸ್ ಠಾಣೆ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರವಾನಿಗೆಗೆ ಅರ್ಜಿ ಸಲ್ಲಿಸಬೇಕು. ಪರವಾನಗಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ಸ್ವಲ್ಪ ಸಮಯದಲ್ಲಿಯೇ ಬಂದೂಕು ಖರೀದಿಸಬಹುದು. ಈ ಬಂದೂಕುಗಳಿಗೆ ಕಾನೂನಿನ ಮಾನ್ಯತೆ ಇದೆ. ಇದೇ ಬಗೆಯ ಇತರೆ ಲಘು ತೂಕದ ರಿವಾಲ್ವರುಗಳನ್ನು ಸ್ವರಕ್ಷಣೆಗೆ ಬಳಸಲು ಸರ್ಕಾರದ ಅನುಮತಿ ಅಗತ್ಯವಿದೆ. 

ನಿರ್ಭೀಕ್

ಮಹಿಳೆಯರಿಗೆಂದೇ ಸರ್ಕಾರ ವಿಶೇಷವಾಗಿ ವಿನ್ಯಾಸಗೊಳಿಸಿದ ಕಾನ್ಪುರದ ಶಸ್ತ್ರಾಗಾರದಲ್ಲಿ ತಯಾರದ ನಿರ್ಭೀಕ್, ಆತ್ಮರಕ್ಷಣೆಗಾಗಿ ಇರುವ ಆಯುಧ. ನಿರ್ಭಯಾ ಪ್ರಕರಣದ ಬಳಿಕ ಈ ಬಗೆಯ ಆಯುಧ ತಯಾರಿಸಲಾಯಿತು. ಇದನ್ನು ಹಠತೊಟ್ಟು ಮಾರುಕಟ್ಟೆಗೆ ಕೂಡ ಬಿಡುಗಡೆ ಮಾಡಲಾಗಿದೆ. ಇದೊಂದು ಲಘುತೂಕದ ಪಿಸ್ತೂಲು. ರೂ. 1.5 ಲಕ್ಷ ಮೌಲ್ಯದ ನಿರ್ಭೀಕನ್ನು ಇದುವರೆಗೆ ಮೂರೂವರೆ ಸಾವಿರ ಮಂದಿ ಖರೀದಿಸಿದ್ದಾರೆ. ಪೂರ್ವಾನುಮತಿ ಪಡೆದ 60 ದಿನಗಳಲ್ಲಿ ಇದನ್ನು ಖರೀದಿಸಬಹುದು. 0.32 (7.65 ಮಿ.ಮೀ.) ಕ್ಯಾಲಿಬರ್ ನಳಿಕೆ ರಂಧ್ರದ ಸಾಮರ್ಥ್ಯ ಇರುವ ಈ ಬಂದೂಕು, 15 ಮೀಟರ್ ದೂರದವರೆಗೆ ಗುರಿ ಇಡಲು ಸಹಕಾರಿ. ಅಲ್ಲದೆ ನಿರ್ವಹಣೆ ಕೂಡ ಸುಲಭ.

ಶಸ್ತ್ರಾಸ್ತ್ರ ಅಗತ್ಯವಿರುವ ಮಹಿಳೆಯರಿಗೆ, ಕರ್ನಾಟಕ ಮತ್ತು ಮೈಸೂರು ಪೊಲೀಸ್ ಇಲಾಖೆ 'ಸಿಟಿ ಸಿವಿಲಿಯನ್ ರೈಫಲ್ ಅಸೋಸಿಯೇಷನ್' ಅಡಿಯಲ್ಲಿ ಬಂದೂಕುಗಳ ಬಳಕೆಯ ಬಗ್ಗೆ ತರಬೇತಿ ನೀಡುತ್ತಿದೆ. ಮಹಿಳೆಯರ ಸ್ವರಕ್ಷಣೆಯ ಭಾಗವಾಗಿ ಈ ಬಗೆಯ ಸೇವೆಗಳನ್ನು 2016ರಲ್ಲಿ ಪೊಲೀಸರು ಆರಂಭಿಸಿದ್ದಾರೆ. ತರಬೇತಿ ನೀಡುವುದರ ಜೊತೆಗೆ, ಪರವಾನಗಿಗೆ ಅಗತ್ಯವಾದ ದಾಖಲೆಗಳು ಮತ್ತಿತರ ಸೇವೆಗಳಿಗೆ ಸಂಬಂಧಿಸಿದಂತೆ ಸಂಘ, ಗ್ರಾಹಕರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದೆ. 

ಬದಲಾವಣೆ ಅನಿವಾರ್ಯ...

ಎನ್‌ಸಿಸಿ ಮತ್ತು ಕ್ರೀಡಾ ಕೆಡೆಟ್‌ಗಳಿಗೆ ಸಾಮಾನ್ಯವಾಗಿ ಆಪರೇಟಿಂಗ್ ಗನ್ ಮತ್ತಿತರ ಬಂದೂಕುಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಹಾಗೆಯೇ, ಪ್ರತಿಯೊಂದು ಕಾಲೇಜುಗಳು ಸಮರ ಕಲೆಗಳಲ್ಲಿ ತರಬೇತಿ ನೀಡುವುದರ ಜೊತೆಗೆ ವಿಶೇಷವಾಗಿ ಮಹಿಳೆಯರಿಗೆ ಬಂದೂಕಿನಿಂದ ಗುಂಡು ಹಾರಿಸುವ ತರಬೇತಿ ನೀಡಬೇಕು. ಇದನ್ನು ಶಿಕ್ಷಣ ವ್ಯವಸ್ಥೆಯ ಭಾಗವಾಗಿ ತರಬೇಕು. ಎಲ್ಲೆಡೆಯೂ ಮತ್ತು ಯಾವಾಗಲೂ ಸಾರ್ವಜನಿಕರ ರಕ್ಷೆಗೆ ಪೊಲೀಸರನ್ನು ಅವಲಂಬಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. ಘಟನೆ ನಡೆದ ಬಳಿಕ ಅದನ್ನು ತಡೆಯಬಹುದಿತ್ತು ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಅಂತಹ ಸಂದರ್ಭದಲ್ಲಿ ಹೆಣ್ಣುಮಕ್ಕಳು ಸಮಯಕ್ಕೆ ಸರಿಯಾಗಿ ಸ್ವರಕ್ಷಣೆ ಮಾಡಿಕೊಳ್ಳಲು ತರಬೇತಿ ನೀಡಬೇಕು. ಬಂದೂಕಿನ ಬಳಕೆ ಮತ್ತು ಅದರ ಕಾರ್ಯಾಚರಣೆ ಬಗ್ಗೆ ಎಲ್ಲಾ ಹೆಣ್ಣುಮಕ್ಕಳಿಗೆ ಅರಿವು ಮೂಡಿಸಬೇಕು. ಇದರಿಂದ ಭಯಾನಕ ಅಪರಾಧಗಳು ಮರುಕಳಿಸುವುದಿಲ್ಲ. 

ಫಾತಿಮಾ ಬಂದೂಕು ಹಿಡಿಯಲು ಪ್ರೇರಣೆ ಏನು? 

ತಮ್ಮೊಂದಿಗೆ ಶಸ್ತ್ರಾಸ್ತ್ರ ಕೊಂಡೊಯ್ಯುವಂತಾದರೆ ಮಾತ್ರ ರಕ್ಷಣೆ ಸಾಧ್ಯವಾಗುತ್ತದೆ ಮತ್ತು ಸಮಾಜದಲ್ಲಿ ಕೆಲ ಗೂಂಡಾಗಳ ವಿರುದ್ಧ ಹೋರಾಡುವ ಆತ್ಮಸ್ಥೈರ್ಯ ಮೂಡುತ್ತದೆ ಎಂಬ ಭಾವ ಈಗ ಮಹಿಳೆಯರಲ್ಲಿ ಮೊಳೆಯುತ್ತಿದೆ. ಕಂಪ್ಯೂಟರ್ ಸೈನ್ಸ್ ಬೋಧಿಸುವ ವಾರಂಗಲ್‌ನ ಶ್ರೀಮತಿ ನೌಶೀನ್ ಫಾತಿಮಾ ಅವರು ತಮ್ಮ ಸುರಕ್ಷಣೆಗಾಗಿ ಬಂದೂಕಿನ ಪರವಾನಗಿಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಮಹಿಳೆಯರನ್ನು ಕಾಡುತ್ತಿರುವ ಭಯಕ್ಕೆ ಉದಾಹರಣೆ.  

ಫಾತಿಮಾ ಕಾಝಿಪೇಟೆಯಲ್ಲಿರುವ ತನ್ನ ಮನೆಯಿಂದ ಬೆಳಗ್ಗೆ ಹೊರಟು ವಾರಂಗಲ್‌ನ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ರಾತ್ರಿ ಮರಳುತ್ತಾರೆ. ದಿಶಾ ಪ್ರಕರಣದ ಬಳಿಕ ಉಂಟಾದ ಭೀತಿ ಆಕೆಗೂ ತಟ್ಟಿದೆ. ಅಪಾಯ ಸಂಭವಿಸಿದಾಗ ಮತ್ತೊಬ್ಬರು ಬಂದು ಉಳಿಸುತ್ತಾರೆ ಎಂದು ಕಾಯುತ್ತ ಕೂರಲು ಸಾಧ್ಯವಿಲ್ಲ ಎಂಬುದು ಆಕೆಯ ಅರಿವಿಗೆ ಬಂದಿದೆ. ಘಟನೆ ಬಳಿಕ ಪ್ರತಿಮನೆಯ ಹುಡುಗಿಯರೂ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ತಾವು ಸಂಚರಿಸುವಾಗ ಮಹಿಳೆಯರು ಲೈವ್ ಲೊಕೇಷನ್ ಹಂಚಿಕೊಳ್ಳುವುದು, ತೊಂದರೆಯಲ್ಲಿದ್ದಾಗ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡುವುದು, ಪೆಪ್ಪರ್ ಸ್ಪ್ರೇ ಬಳಕೆಯಂತಹ ಕ್ರಮಗಳನ್ನು ಕೈಗೊಳ್ಳುವುದು ರೂಢಿ. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದರೂ ಹುಡುಗಿ ಸುರಕ್ಷಿತವಾಗಿ ಇರಬಲ್ಲಳು ಎನ್ನುವುದು ಖಾತ್ರಿ ಇಲ್ಲ. 

ಫಾತಿಮಾ ಅವರು ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಲು ಈ ಆಲೋಚನೆ ಪ್ರೇರಣೆಯಾಗಿದೆ.  2019ರ ನವೆಂಬರ್ 30ರಂದು ಅಗತ್ಯ ದಾಖಲೆಗಳೊಂದಿಗೆ ಕಾಝೀಪೇಟೆಯ ಪೊಲೀಸ್ ಆಯುಕ್ತರನ್ನು ಖುದ್ದಾಗಿ ಸಂಪರ್ಕಿಸಿ ಪರವಾನಗಿಗೆ ಅನುಮತಿ ಕೋರಿದ ಬಳಿಕ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಿದ್ದಾರೆ. 

ಪ್ರಸ್ತುತ ಸನ್ನಿವೇಶದಲ್ಲಿ ಖಂಡಿತಾ ತನಗೆ ಬಂದೂಕು ಪರವಾನಗಿ ಸಿಗುತ್ತದೆ ಎನ್ನುತ್ತಾರೆ ಫಾತಿಮಾ. ನಂತರ ಸ್ವಯಂ ರಕ್ಷಣೆಗಾಗಿ ಒಂದು ಬಂದೂಕು ಖರೀದಿಸಿ ಅಪಾಯದ ವೇಳೆಯಲ್ಲಿಯೂ ವಿಶ್ವಾಸದಿಂದ ಹೆಜ್ಜೆ ಹಾಕುವುದಾಗಿ ಹೇಳುತ್ತಾರೆ.

ಮೊದಲು ಮನೆಯಲ್ಲಿ ಇದಕ್ಕೆಲ್ಲಾ ಅನುಮತಿ ನೀಡಿರಲಿಲ್ಲವಂತೆ. ಈಗ ಕುಟುಂಬದವರು ಒಪ್ಪಿರುವ ಬಗ್ಗೆ ಫಾತಿಮಾ ಸಂತಸ ಹಂಚಿಕೊಂಡಿದ್ದಾರೆ. 

ಮಹಿಳೆ ತನ್ನ ಬಳಿ ಒಂದು ಬಂದೂಕು ಇಟ್ಟುಕೊಳ್ಳಲಿ ಆದರೆ ಎಂದಿಗೂ ಆಕೆ ಅದನ್ನು ಬಳಸುವಂತಹ ಸನ್ನಿವೇಶ ಬಾರದಿರಲಿ ಎಂಬ ಆಶಯದೊಂದಿಗೆ ಮಹಿಳಾ ದೌರ್ಜನ್ಯ ಇನ್ನಾದರೂ ಇಳಿಮುಖವಾಗಲಿ ಎಂದು ಭಾವಿಸೋಣ...

Conclusion:
Last Updated : Dec 10, 2019, 5:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.