ETV Bharat / bharat

SARS-CoV-2 ವೈರಸ್​ಗಿಂತ ವಿಭಿನ್ನ ಇತರ ಕೊರೊನಾ ವೈರಸ್​ ಜೀನ್ ಲಕ್ಷಣಗಳು ಪತ್ತೆ - ಮಾರಣಾಂತಿಕ ಕೊರೊನಾ ವೈರಸ್

SARS-CoV-2 ವೈರಸ್​ ಹಾಗೂ ಇತರ ಕೊರೊನಾ ವೈರಸ್​ ಜೀನ್​ ಲಕ್ಷಣಗಳ ಪತ್ತೆಗೆ ತುಲನಾತ್ಮಕ ಜೀನ್ ಶಾಸ್ತ್ರ ಹಾಗೂ ಮಶೀನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. SARS-CoV-2 ವೈರಸ್ ಹಾಗೂ ಇತರ ಹೆಚ್ಚು ಮಾರಣಾಂತಿಕ ಕೊರೊನಾ ವೈರಸ್​ಗಳ ಪ್ರೋಟೀನ್​ಗಳನ್ನು ಈ ಸಂಶೋಧಕರು ಈಗಾಗಲೇ ಪತ್ತೆ ಮಾಡಿದ್ದಾರೆ.

Genomic features that could differentiate SARS-CoV-2

author img

By

Published : Jun 15, 2020, 8:27 PM IST

ಹೈದರಾಬಾದ್: ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವಿಜ್ಞಾನಿಗಳು COVID-19 ವೈರಸ್​ನ ಕೆಲ ಪ್ರಮುಖ ಜೀನ್ ಗುಣಲಕ್ಷಣಗಳನ್ನು ಪತ್ತೆಹಚ್ಚುವಲ್ಲಿ ಸಫಲರಾಗಿದ್ದಾರೆ. ಅಲ್ಲದೆ ಇದಕ್ಕೂ ಹೆಚ್ಚು ಮಾರಣಾಂತಿಕವಾದ ಕೋವಿಡ್​-19 ಗಿಂತ ಭಿನ್ನವಾದ ಇತರ ಕೊರೊನಾ ವೈರಸ್​ ಲಕ್ಷಣಗಳನ್ನು ಸಹ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಜೀನ್ ಗುಣಲಕ್ಷಣಗಳ ವಿಶ್ಲೇಷಣೆಯಿಂದ ಭವಿಷ್ಯದಲ್ಲಿ ಎರಗಬಹುದಾದ ಮತ್ತೊಂದು ಬಗೆಯ ಕೊರೊನಾ ವೈರಸ್ ಎಷ್ಟು ಪ್ರಬಲವಾಗಿರಬಹುದು ಎಂಬುದನ್ನು ತಿಳಿಯಲು ಸಹಕಾರವಾಗಲಿದೆ. ಹಾಗೆಯೇ ಮಾನವರಿಗೆ ಸಂಚಕಾರ ತರಬಲ್ಲ ಪ್ರಾಣಿಗಳಿಂದ ಹರಡಬಹುದಾದ ಕೊರೊನಾ ವೈರಸ್​ ಬಗ್ಗೆಯೂ ತಿಳಿಯಬಹುದಾಗಿದೆ.

ಕೋವಿಡ್​-19 ವಿಶ್ವದಲ್ಲಿ ಈಗಾಗಲೇ 3 ಲಕ್ಷ 80 ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಹೀಗಾಗಿ ವೈರಸ್​ಗಳ ಸಾಂಕ್ರಾಮಿಕತೆಯ ಇತಿಹಾಸ ಹಾಗೂ ಕೋವಿಡ್​-19 ಜೀನ್ ಗುಣಲಕ್ಷಣಗಳನ್ನು ಅರಿಯುವುದು ಬಹಳ ಮುಖ್ಯವಾಗಿದೆ.

"ಈ ಅಧ್ಯಯನದಲ್ಲಿ ನಾವು ಕೊರೊನಾ ವೈರಸ್​ ಅನ್ನೇ ಹೋಲುವ ಹಾಗೂ ಮಾನವರಿಗೆ ಗಂಭೀರ ಕಾಯಿಲೆ ಉಂಟುಮಾಡುವ ವೈರಸ್​ಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದೇವೆ. ಕಡಿಮೆ ಪರಿಣಾಮದ ಕೊರೊನಾ ವೈರಸ್​ ಬಗ್ಗೆ ಹಲವಾರು ಗುಣಲಕ್ಷಣಗಳನ್ನು ನಾವು ಈಗಾಗಲೇ ಕಂಡು ಹಿಡಿದಿದ್ದೇವೆ. ಆದರೆ ಈ ಎಲ್ಲ ಸಂಶೋಧನೆಗಳ ನಿಜವಾದ ಫಲಿತಾಂಶಗಳು ಪ್ರಸ್ತುತ ವಾಸ್ತವದಲ್ಲಿ ನಡೆಯುತ್ತಿರುವ ನೇರ ಪ್ರಯೋಗಗಳ ನಂತರವೇ ತಿಳಿದು ಬರಲಿವೆ." ಎಂದು ಎನ್​ಎಲ್​ಎಂ ನ್ಯಾಷನಲ್ ಸೆಂಟರ್ ಫಾರ್ ಬಯೊಟೆಕ್ನಾಲಜಿ ಇನ್ಫರ್ಮೇಶನ್ ಸಂಸ್ಥೆಯ ಸಂಶೋಧಕ ಡಾ. ಯೂಜೀನ್ ಕೋನಿನ್ ಹೇಳಿದ್ದಾರೆ.

SARS-CoV-2 ವೈರಸ್​ ಹಾಗೂ ಇತರ ಕೊರೊನಾ ವೈರಸ್​ ಜೀನ್​ ಲಕ್ಷಣಗಳ ಪತ್ತೆಗೆ ತುಲನಾತ್ಮಕ ಜೀನ್ ಶಾಸ್ತ್ರ ಹಾಗೂ ಮಶೀನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. SARS-CoV-2 ವೈರಸ್ ಹಾಗೂ ಇತರ ಹೆಚ್ಚು ಮಾರಣಾಂತಿಕ ಕೊರೊನಾ ವೈರಸ್​ಗಳ ಪ್ರೋಟೀನ್​ಗಳನ್ನು ಈ ಸಂಶೋಧಕರು ಈಗಾಗಲೇ ಪತ್ತೆ ಮಾಡಿದ್ದಾರೆ. ಪತ್ತೆಯಾದ ಜೀನ್ ಗುಣಲಕ್ಷಣಗಳು ಈ ಕೊರೊನಾ ವೈರಸ್​ಗಳಿಂದಾಗಬಹುದಾದ ಮಾರಣಾಂತಿಕ ಪರಿಣಾಮಗಳನ್ನು ಹೋಲುತ್ತವೆ ಹಾಗೂ ಪ್ರಾಣಿಗಳಿಂದ ಮಾನವ ಶರೀರದೊಳಗೆ ಪ್ರವೇಶಿಸಬಲ್ಲ ಅವುಗಳ ಸಾಮರ್ಥ್ಯವನ್ನು ಬಹಿರಂಗಪಡಿಸಿವೆ.

"ಈ ನೂತನ ಸಂಶೋಧನೆಗಳು ಕೋವಿಡ್-19 ವೈರಸ್​ ಹಾಗೂ ಅದನ್ನು ತಡೆಯಲು ಬೇಕಾದ ಕ್ರಮಗಳ ಬಗ್ಗೆ ಸಂಶೋಧಕರು ಹೆಚ್ಚಿನದನ್ನು ತಿಳಿಯಲು ಅನುಕೂಲವಾಗಲಿವೆ." ಎಂದು ಎನ್​ಎಲ್​ಎಂ ನಿರ್ದೇಶಕಿ ಪ್ಯಾಟ್ರಿಸಿಯಾ ಫ್ಲಾಟ್ಲೇ ಬೆನ್ನಾನ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.