ನವದೆಹಲಿ: ದೇಶದ 91 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಆರಂಭವಾಗಿದ್ದು ಮತದಾರರು ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಬರೋಬ್ಬರಿ 1279 ಅಭ್ಯರ್ಥಿಗಳು ತಮ್ಮ ಅದೃಷ್ಠ ಪರೀಕ್ಷೆಗೆ ಒಳಗಾಗಲಿದ್ದಾರೆ.
ದೇಶದ 543 ಕ್ಷೇತ್ರಗಳ ಪೈಕಿ 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಯನ್ನ ಮಾಡಿಕೊಂಡಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 20 ರಾಜ್ಯಗಳಲ್ಲಿ ಈ ಮತದಾನ ನಡೆಯಲಿದೆ. ಬಹುತೇಕ ಕಡೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವೋಟಿಂಗ್ ನಡೆಯಲಿದೆ. ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಮತದಾನ ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆವರೆಗೆ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.
- ವೋಟಿಂಗ್ ಲಿಸ್ಟ್ನಿಂದ ಅಪೋಲ್ ಸಂಸ್ಥೆ ಉಪಾಧ್ಯಕ್ಷೆ ಶೋಭನಾ ಕಾಮಿನೇನಿ ಹೆಸರು ಡಿಲಿಟ್
- ಅಮೆರಿಕದಿಂದ ಮತ ಚಲಾವಣೆಗಾಗಿ ಹೈದರಾಬಾದ್ಗೆ ಆಗಮಿಸಿದ್ದ ಕಾಮಿನೇನಿ