ETV Bharat / bharat

ಗಯಾದಲ್ಲಿ ಕರ್ನಾಟಕದ 9 ಮಂದಿ ಸೇರಿ 16 ಜನ ಸೈಬರ್ ವಂಚಕರ ಬಂಧನ

author img

By

Published : Jan 9, 2021, 10:53 AM IST

ವಂಚಕರ ತಂಡ ಸುಮಾರು ಒಂದು ತಿಂಗಳಿಂದ ಬೋಧ್ ಗಯಾ ಪ್ರದೇಶದಲ್ಲಿ ಸಕ್ರಿಯವಾಗಿತ್ತು. ತಮ್ಮ ರಹಸ್ಯ ಕಾರ್ಯಾಚರಣೆಗಳನ್ನು ಖಾಸಗಿ ಹೊಟೇಲ್​ ಒಂದರಲ್ಲಿ ಕುಳಿತು ಮಾಡುತ್ತಿದ್ದರು. ವಂಚಕರು ಹೊಟೇಲ್​ನ ಕೋಣೆಯಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿ 16 ಮಂದಿಯನ್ನು ಬಂಧಿಸಿದ್ದಾರೆ.

gaya
ಸೈಬರ್ ವಂಚಕ

ಗಯಾ (ಬಿಹಾರ): ಖಚಿತ ಮಾಹಿತಿ ಮೇರೆಗೆ ಗಯಾ ಪೊಲೀಸರು ಇಲ್ಲಿನ ಖಾಸಗಿ ಅತಿಥಿಗೃಹವೊಂದರಲ್ಲಿ ಅಂತಾರಾಜ್ಯ ಆನ್‌ಲೈನ್ ವಂಚಕರ ಗ್ಯಾಂಗ್​ವೊಂದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು16 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಯುವಕರಲ್ಲಿ 9 ಯುವಕರು ಕರ್ನಾಟಕದವರು. ಇದೇ ಸಮಯದಲ್ಲಿ ಪೊಲೀಸರು ಗ್ಯಾಂಗ್ ಲೀಡರ್​ ರೋಶನ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಇಂಜಿನಿಯರಿಂಗ್ ಅಧ್ಯಯನವನ್ನು ಮೊಟಕುಗೊಳಿಸಿ ಹಣಗಳಿಕೆಗೆ ಅಡ್ಡದಾರಿ ಕಂಡುಕೊಂಡು ಗ್ಯಾಂಗ್ ಮೂಲಕ ಆನ್​ಲೈನ್​ ವಂಚನೆ ಕೃತ್ಯ ಎಸಗುತ್ತಿದ್ದನು.

ಈ ತಂಡ ಸುಮಾರು ಒಂದು ತಿಂಗಳಿಂದ ಬೋಧ್ ಗಯಾ ಪ್ರದೇಶದಲ್ಲಿ ಸಕ್ರಿಯವಾಗಿತ್ತು. ತಮ್ಮ ರಹಸ್ಯ ಕಾರ್ಯಾಚರಣೆಗಳನ್ನು ಖಾಸಗಿ ಹೊಟೇಲ್​ ಒಂದರಲ್ಲಿ ಕುಳಿತು ಮಾಡುತ್ತಿದ್ದರು. ವಂಚಕರು ಹೊಟೇಲ್​ನ ಕೋಣೆಯಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿ 16 ಮಂದಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ತಂಡದ ಮುಖ್ಯ ಗುರಿ ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣದ ಗ್ರಾಹಕರು. ಆನ್​ಲೈನ್​ ಲಾಟರಿ ಆಮಿಷವೊಡ್ಡುತ್ತಿದ್ದ ತಂಡ ಆಯಾ ರಾಜ್ಯದವರೊಂದಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸುವ ತಂಡವನ್ನು ಸಜ್ಜುಗೊಳಿಸಿತ್ತು.

ಇನ್ನು ಬಂಧಿತರಿಂದ ಗಾಂಜಾ, 2 ಕೆಜಿ ನಕಲಿ ಚಿನ್ನ, 24 ಸ್ಮಾರ್ಟ್​ ಫೋನ್​ಗಳು, ಮೂರು ಬೈಕ್​ಗಳು, ದುಬಾರಿ ವಾಚ್​, ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.