ETV Bharat / bharat

ರಾಜಕೀಯ ಇನ್ನಿಂಗ್ಸ್‌ಗೆ ಗೌತಮ್ 'ಗಂಭೀರ'.. ಸ್ಪರ್ಧೆಗೆ ಮನವೊಲಿಸಿದ ಬಿಜೆಪಿ?

ಟೀಂ ಇಂಡಿಯಾದ ಮಾಜಿ ಕ್ರಿಕೆಟರ್‌ ಗೌತಮ್ ಗಂಭೀರ್ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್‌ ಶುರು ಮಾಡಲಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಬಿಜೆಪಿ ಟಿಕೆಟ್ ಪಡೆದು ದೆಹಲಿ ಲೋಕಸಭಾ ಕ್ಷೇತ್ರವೊಂದರಿಂದ ತಮ್ಮ ರಾಜಕೀಯ ಅದೃಷ್ಟ ಪರೀಕ್ಷಿಗಿಳಿಯಲಿದ್ದಾರಂತೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟರ್‌ ಗೌತಮ್ ಗಂಭೀರ್
author img

By

Published : Mar 9, 2019, 12:04 PM IST

ನವದೆಹಲಿ: ಮಾಜಿ ಕ್ರಿಕೆಟರ್‌ ಗೌತಮ್ ಗಂಭೀರ್ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್‌ ಶುರು ಮಾಡುವ ಸಾಧ್ಯತೆ ದಟ್ಟವಾಗಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಟೀಂ ಇಂಡಿಯಾದ ಮಾಜಿ ಆಟಗಾರ ಗಂಭೀರ್, ಬಿಜೆಪಿ ಟಿಕೆಟ್ ಪಡೆದು ದೆಹಲಿ ಲೋಕಸಭಾ ಕ್ಷೇತ್ರವೊಂದರಿಂದ ತಮ್ಮ ರಾಜಕೀಯ ಅದೃಷ್ಟ ಪರೀಕ್ಷಿಗಿಳಿಯಲಿದ್ದಾರಂತೆ.

ಈಗಾಗಲೇ ರಾಜಧಾನಿ ನವದೆಹಲಿ ಹಾಗೂ ರಾಷ್ಟ್ರಕ್ಕೆ ಸಂಬಂಧಿಸಿದ ಸಾಕಷ್ಟು ವಿಷಯಗಳ ಮೇಲೆ ಗಂಭೀರ ಧ್ವನಿ ಎತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಈಗ ಮಾಜಿ ಕ್ರಿಕೆಟರ್‌ಗೆ ಟಿಕೆಟ್‌ ಕೊಟ್ಟು ಅಖಾಡಕ್ಕಿಳಿಸುವ ಬಗ್ಗೆ ಭಾರತೀಯ ಜನತಾ ಪಕ್ಷ ಉತ್ಸುಕತೆ ತೋರಿಸಿದೆ. ಸುಪ್ರೀಂಕೋರ್ಟ್‌ ವಕೀಲೆ, ಹಾಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಪ್ರತಿನಿಧಿಸುವ ಸಂಸತ್‌ ಕ್ಷೇತ್ರದಿಂದಲೇ ಗಂಭೀರ್ ಅವರನ್ನ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಗಂಭೀರವಾಗಿ ಚಿಂತನೆ ನಡೆಸಿದೆ.

2014ರಲ್ಲಿ ನವದೆಹಲಿ 7 ಕ್ಷೇತ್ರಗಳಲ್ಲೂ ಬಿಜೆಪಿ ಕ್ಲೀನ್‌ಸ್ವೀಪ್ ಮಾಡಿತ್ತು. ಈಗ ಆ ಎಲ್ಲ ಏಳೂ ಸ್ಥಾನ ಕಾಪಾಡಿಕೊಳ್ಳಲು ಬಿಜೆಪಿ ಸಾಕಷ್ಟು ಎಫರ್ಟ್ ಹಾಕುತ್ತಿದೆ. ಯಾಕಂದ್ರೇ, ಈಗಿರುವ ಸಂಸದರು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಹಾಗಾಗಿಯೇ ಹಾಲಿ ಸಂಸದರ ಜಾಗಕ್ಕೆ ಬೇರೆಯವರಿಗೆ ಟಿಕೆಟ್‌ ನೀಡಲು ಬಿಜೆಪಿ ತಂತ್ರ ರೂಪಿಸಿದೆ. ಈಗಾಗಲೇ ಬಿಜೆಪಿ ನಾಯಕರು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಜತೆಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಸದ್ಯದಲ್ಲೇ ಗಂಭೀರ ಬಿಜೆಪಿಯಿಂದ ಸ್ಪರ್ಧಿಸುವ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.

ಮಾಜಿ ಕ್ರಿಕೆಟರುಗಳಾದ ನವಜೋತ್ ಸಿಂಗ್‌ ಸಿಧು, ಕೀರ್ತಿ ಆಜಾದ್‌ ಹಾಗೂ ಮೊಹ್ಮದ್‌ ಅಜರುದ್ದೀನ್‌ ಈಗಾಗಲೇ ಮೂವರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅದೇ ಸಾಲಿಗೆ ಗೌತಮ್ ಗಂಭೀರ ಸೇರಿಕೊಳ್ಳಲಿದ್ದಾರೆ.

Intro:Body:

Gautam Gambhir likely to start new innings in politics, could be fielded by BJP for Lok Sabha polls

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.