ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್, ಬಿಜೆಪಿ ಸಂಸದ ಗೌತಮ್ ಗಂಭೀರ್ ಮನೆಯಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡಿದ್ದು, ಅವರು ಕೂಡ ಸೆಲ್ಫ್ ಐಸೋಲೇಷನ್ಗೊಳಗಾಗಿದ್ದಾರೆ.
-
Due to a case at home, I have been in isolation awaiting my COVID test result. Urge everyone to follow all guidelines & not take this lightly. Stay safe!
— Gautam Gambhir (@GautamGambhir) November 6, 2020 " class="align-text-top noRightClick twitterSection" data="
">Due to a case at home, I have been in isolation awaiting my COVID test result. Urge everyone to follow all guidelines & not take this lightly. Stay safe!
— Gautam Gambhir (@GautamGambhir) November 6, 2020Due to a case at home, I have been in isolation awaiting my COVID test result. Urge everyone to follow all guidelines & not take this lightly. Stay safe!
— Gautam Gambhir (@GautamGambhir) November 6, 2020
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಗಂಭೀರ್, ಮನೆಯಲ್ಲಿ ಕೋವಿಡ್ ಕೇಸ್ ಕಾಣಿಸಿಕೊಂಡಿರುವ ಕಾರಣ ತಾವು ಸೆಲ್ಫ್ ಐಸೋಲೇಷನ್ಗೊಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ. ಜತೆಗೆ ಕೊರೊನಾ ಪರೀಕ್ಷೆಯ ವರದಿಗೋಸ್ಕರ ಕಾಯುತ್ತಿರುವುದಾಗಿ ಹೇಳಿದ್ದಾರೆ. ಇದೇ ವೇಳೆ, ಸರ್ಕಾರ ಜಾರಿಗೊಳಿಸಿರುವ ಎಲ್ಲ ಮಾರ್ಗಸೂಚಿ ಅನುಸರಿಸುವಂತೆ ಅವರು ಮನವಿ ಮಾಡಿದ್ದು, ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ.
ಭಾರತದಲ್ಲಿ ಈಗಾಗಲೇ 84 ಲಕ್ಷ ಕೋವಿಡ್ ಕೇಸ್ಗಳಿದ್ದು, ಅದರಲ್ಲಿ 5,20,773 ಸಕ್ರೀಯ ಪ್ರಕರಣಗಳಿವೆ. ದೇಶದಲ್ಲಿ ಇಲ್ಲಿಯವರೆಗೆ 11,54,29,095 ಸ್ಯಾಂಪಲ್ ಪರೀಕ್ಷೆ ಮಾಡಲಾಗಿದೆ.