ನವದೆಹಲಿ: ದೇಶಕ್ಕೆ ಹೋರಾಟ ಹಾಗೂ ಸತ್ಯಾಗ್ರಹದ ಮೂಲಕವೇ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿ ರಾಷ್ಟ್ರಪಿತನಾದರು. ಇಂತಹ ಮಹಾನ್ ನಾಯಕ ಆರೋಗ್ಯದ ಬೆಸ್ಟ್ ಮಾಡಲ್ ಅಂದರೆ ಡಯಟಿಶೀಯನ್ ಕೂಡಾ ಹೌದು.
ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ, ಸತ್ಯಾಗ್ರಹದಲ್ಲಿ ಅತಿದೊಡ್ಡ ಪ್ರಭಾವವನ್ನೂ ಬೀರಿತ್ತು. ಇದರಲ್ಲಿ ಯಾವುದೇ ಸಂಶಯವೂ ಇಲ್ಲ ಬಿಡಿ. ಗಾಂಧೀಜಿ ನಿತ್ಯ ಹಲವು ಕಿಲೋಮೀಟರ್ ನಡೆಯುತ್ತಿದ್ದರು. ಆ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನ ಕಾಪಾಡಿಕೊಂಡಿದ್ದರು.
1942- 44ರವರೆಗೆ ಗಾಂಧೀಜಿ ಅವರು ಪೂನಾದ ಆಗಾ ಖಾನ್ ಪ್ಯಾಲೇಸ್ನಲ್ಲಿ ಕಾರ್ಯಕರ್ತರಿಗೆ ಆರೋಗ್ಯದ ಟಿಪ್ಸ್ ನೀಡಿದ್ದರು. ಆ ಅಂಶಗಳನ್ನೊಳಗೊಂಡ ಪುಸ್ತಕ ಸಂಕಲನವನ್ನ ಹೊರ ತಂದಿದ್ದರು. ಇದನ್ನ ಸುಶೀಲ್ ನಾಯರ್ ಇಂಗ್ಲಿಷ್ಗೆ ತರ್ಜುಮೆ ಕೂಡಾ ಮಾಡಿದ್ದರು. ಗಾಂಧೀಜಿ ಪುರಾತನ ಗ್ರಂಥಗಳಲ್ಲಿ ಲಭ್ಯ ಇರುವ ಆರೋಗ್ಯಕ್ಕೆ ಸಂಬಂಧಿಸಿದ ಟಿಪ್ಸ್ಗಳನ್ನ ಬಹು ಮೆಚ್ಚುತ್ತಿದ್ದರಲ್ಲದೇ ಅವುಗಳಿಂದ ಪ್ರಭಾವಿತರಾಗಿ ಅನುಸರಣೆ ಮಾಡುತ್ತಿದ್ದರು. ಈ ಬಗ್ಗೆ ಜನರನ್ನು ಸುಶೀಕ್ಷಿತರನ್ನಾಗಿ ಮಾಡಲು ಬಯಸುತ್ತಿದ್ದರು.
ಗಾಂಧೀಜಿ ಅವರು ಯೋಗಿ ಮತ್ತು ಬ್ರಹ್ಮಚರ್ಯದಲ್ಲಿ ನಂಬಿಕೆ ಇಟ್ಟಿದ್ದರು. ಬ್ರಹ್ಮಚರ್ಯ ಯೋಗ ಪರಿಪಾಲಿಸಲು ಅವರು ಪ್ರಯೋಗಗಳನ್ನು ಮಾಡಿ, ಮನಸ್ಸು ಕೇಂದ್ರೀಕರಿಸುವ ಯತ್ನವನ್ನು ಮಾಡಿದ್ದರು. ಡಯಟ್( ಅಂದರೆ ಉಪವಾಸ- ಪಥ್ಯ) ಮಾಡುವ ಮೂಲಕ ಆರೋಗ್ಯವನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನವನ್ನ ಗಾಂಧೀಜಿ ಸತತವಾಗಿ ಮಾಡುತ್ತಲೇ ಇರುತ್ತಿದ್ದರು. ಉಪವಾಸ ಅಂದರೆ ಆಹಾರಕ್ಕೆ ಕಡಿವಾಣ ಹಾಕುವುದು ಎಂದರ್ಥವಲ್ಲ. ಆದರೆ ಅನಗತ್ಯ ಹಾಗೂ ಆರೋಗ್ಯಕ್ಕೆ ಮಾರಕವಾದ ಜಂಕ್ ಫುಡ್ಗಳಿಂದ ದೂರವಾಗಿರುವುದು.
ಗಾಂಧೀಜಿ ಅವರು ವಿವರಿಸುವಂತೆ ಮಾಡುವಂತೆ ಗಾಳಿ, ಬೆಳಕು, ನಿರ್ವಾತ, ಬೆಳಕು ಮತ್ತು ಭೂಮಿ ಇವು ಮಾನವ ಜೀವನದ ಹಾಗೂ ದೇಹದ ಅವಿಭಾಜ್ಯ ಅಂಗಗಳು. ಈ ಐದು ಅಂಶಗಳು ದೇಹದ ಮೇಲೆ ಭಾರೀ ಪ್ರಭಾವ ಬೀರುತ್ತವೆ. ಉದಾಹರಣೆಗೆ ಕೈ, ಪಾದ, ಬಾಯಿ, ಗುದದ್ವಾರ ಹಾಗೂ ಜನನಾಂಗಳು ಗ್ರಹಿಕ ಐದು ಇಂದ್ರೀಯಗಳು. ಚರ್ಮದ ಮೂಲಕ ಸ್ಪರ್ಶಗಾನ, ಮೂಗಿನ ಮೂಲಕ ವಾಸನೆ, ನಾಲಿಗೆ ಮೂಲಕ ರುಚಿ, ಕಣ್ಣಿನ ಮೂಲಕ ನೋಟ, ಗಾಳಿಯನ್ನ ಕೇಳುವುದರ ಮೂಲಕ ಕಂಡು ಹಿಡಿಯುತ್ತೇವೆ. ಈ ಕ್ರಿಯೆಗಳಿಗೆ ನಾವು ಪಂಚೇಂದ್ರಿಯಗಳು ಎನ್ನುತ್ತೇವೆ. ಇವುಗಳ ಬಗ್ಗೆ ಗಾಂಧೀಜಿ ತುಂಬಾ ನಿಗಾ ವಹಿಸಿದ್ದರು. ಮತ್ತು ಪುರಾತನ ನಿಯಮಗಳನ್ನ ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಅರ್ಜಿರ್ಣ ಅನ್ನೋದೇ ಎಲ್ಲ ಕಾಯಿಲೆಗಳಿಗೆ ಕಾರಣ ಎಂದು ಮಹಾತ್ಮ ಬಣ್ಣಿಸುತ್ತಿದ್ದರು.
ಇಂತಹ ಅವ್ಯವಸ್ಥೆಗೆ ಅರ್ಜಿರ್ಣ ಕಾರಣವಾಗುತ್ತದೆ. ಹೀಗಾಗಿ ಈ ಅಜೀರ್ಣತೆಗೆ ಮಹಾತ್ಮಗಾಂಧಿ ಪರಿಹಾರಗಳನ್ನೂ ಸೂಚಿಸಿದ್ದರು. ಹೀಗಾಗಿಯೇ ಗಾಂಧೀಜಿ ಸಸ್ಯಾಹಾರವನ್ನ ಬಿಟ್ಟು ಬೇರೇನನ್ನೂ ಮುಟ್ಟುತ್ತಿರಲಿಲ್ಲ. ಧಾನ್ಯ, ಬೇಳೆಕಾಳು, ಗಡ್ಡೆ- ಗೆಣಸು, ಹಸಿರು ಎಲೆಗಳು, ತಾಜಾ ಮತ್ತು ಆಂಪಿಯರ್ಸ್, ಹಾಲಿನ ಪದಾರ್ಥಗಳನ್ನ ಊಟಕ್ಕಾಗಿ ಬಳಸುತ್ತಿದ್ದರು.
ಮಹಾತ್ಮ ಯಾವಾಗಲೂ ಮಾತ್ರೆಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದರು. ಅದಕ್ಕೆ ಪರ್ಯಾಯವಾಗಿ ಪಥ್ಯಾನ್ನ ಮಾಡುತ್ತಿದ್ದರು. ಆಹಾರ ಸೇವೆನೆ ತೃಪ್ತಿಗಾಗಿ ದೇಹದ ಆರೋಗ್ಯಕ್ಕಾಗಿಯೇ ಹೊರೆತು ಮಾತ್ರೆಗಳ ಮೂಲಕ ಸದೃಢವಾಗಿಡುವುದಕ್ಕಲ್ಲ ಎಂದಿದ್ದರು ಗಾಂಧೀಜಿ.
ಗಿಡಮೂಲಿಕೆ ಚಹಾದಂತಹ ಬೆಚ್ಚಗಿನ ಪಾನೀಯಗಳನ್ನು ಸೇವಿಸುವುದನ್ನು ಅವರು ಯಾವಾಗಲೂ ಸಮರ್ಥಿಸುತ್ತಿದ್ದರು. ಆದರೆ ಅದು ಇತಿ ಮಿತಿಯಲ್ಲಿ ಇರಬೇಕು ಎಂಬುದರ ಬಗ್ಗೆ ಎಚ್ಚರಿಕೆಯನ್ನೂ ವಹಿಸುತ್ತಿದ್ದರು. ಅಷ್ಟೇ ಅಲ್ಲ ಅವರು ಮದ್ಯ, ತಂಬಾಕು ಹಾಗೂ ಮಾದಕ ವಸ್ತುಗಳ ಸೇವೆನೆಯನ್ನ ವಿರೋಧಿಸುತ್ತಿದ್ದರು. ಇವುಗಳು ದೇಹದ ನಿಯಂತ್ರಣವನ್ನ ತಪ್ಪಿಸುತ್ತವೆ ಮತ್ತು ನಿತ್ಯದ ಕೆಲಸಗಳಿಂದ ವಿಮುಖಗೊಳಿಸುತ್ತವೆ ಎಂದು ನಂಬಿದ್ದರು. ಇನ್ನು ಇನ್ನು ಸದೃಢ ದೇಹದಲ್ಲಿ ಸದೃಢ ಮನಸ್ಸು ಎಂಬ ಉಕ್ತಿಯ ಮೇಲೆ ಅವರು ಹೆಚ್ಚಿನ ವಿಶ್ವಾಸ ಇಟ್ಟಿದ್ದರು.
ಇನ್ನೊಂದು ಹೆಜ್ಜೆ ಮುಂದಿಟ್ಟದ್ದ ಅವರು ಸತ್ಯ ಹಾಗೂ ಅಹಿಂಸೆಯಲ್ಲಿ ಅವರು ಅಚಲ ನಂಬಿಕೆ ಇಟ್ಟಿದ್ದರು. ಆಲಸ್ಯ ಎನ್ನುವುದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ದೇಹವು ಯೋಗ ಮತ್ತು ಇತರ ವ್ಯಾಯಾಮಗಳಂತಹ ಕಾರ್ಯಗಳಲ್ಲಿ ಮುಳುಗಿರಬೇಕು ಎಂದು ಹೇಳುತ್ತಿದ್ದರು. ಹೀಗಾಗಿ ಆರೋಗ್ಯವೇ ನಿಜವಾದ ಸಂಪತ್ತು. ಆದರೆ ಇದುವೇ ಬಂಗಾರ ಮತ್ತು ಬೆಳ್ಳಿ ಅಲ್ಲ ಎಂಬ ಅರಿವನ್ನ ಸತ್ಯಾಗ್ರಹಿಗಳಿಗೆ, ದೇಶದ ಅಸಂಖ್ಯಾತ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಗಾಂಧೀಜಿ ನುಡಿದಂತೆ ನಡೆದು ಮಾರ್ಗದರ್ಶಕರಾಗಿದ್ದರು.