ETV Bharat / bharat

ಮನುಕುಲಕ್ಕೆ ಗಾಂಧಿ ನೀಡಿದ ಕೊಡುಗೆ ಸತ್ಯಾಗ್ರಹ ಹಾಗೂ ಅಹಿಂಸೆ!

ಅನ್ಯಾಯದ ವಿರುದ್ಧ ಹೋರಾಡಲು ಗಾಂಧೀಜಿಯವರು ಅಭಿವೃದ್ಧಿಪಡಿಸಿದ ವಿಶಿಷ್ಟ ತಂತ್ರವೇ 'ಸತ್ಯಾಗ್ರಹ'. ಗಾಂಧೀಜಿಯವರಿಗೆ ಸತ್ಯಾಗ್ರಹ ಕೇವಲ ಅಹಿಂಸಾತ್ಮಕ ಹೋರಾಟವಾಗಿರಲಿಲ್ಲ. ಬದಲಾಗಿ ಅವರ ಜೀವನದ ಅತ್ಯಮೂಲ್ಯ ತತ್ವವಾಗಿತ್ತು. ಗಾಂಧೀಜಿ ತಮ್ಮ ಜೀವನದಲ್ಲಿ ಹಲವು ಬಾರಿ ಸತ್ಯಾಗ್ರಹ ನಡೆಸಿದ್ದರು. ಸಮಯ ಹಾಗೂ ಪರಿಸ್ಥಿಗೆ ಅನುಗುಣವಾಗಿ ಅವರು ಸತ್ಯಾಗ್ರಹದ ರೂಪವನ್ನು ಸಮರ್ಪಕವಾಗಿ ಬದಲಾಯಿಸಿದ್ದರು. ಗಾಂಧೀಜಿ ದೃಷ್ಟಿಯಲ್ಲಿ ಅಹಿಂಸಾತ್ಮಕ ಹೋರಾಟದ ಉದ್ದೇಶವು ಕೇವಲ ಬ್ರಿಟಿಷ್​ ಆಡಳಿತದಿಂದ ಮುಕ್ತಿಗೊಳಿಸುವುದು ಮಾತ್ರವಲ್ಲದೇ ಸಮಾಜದಲ್ಲಿ ಮೂಲಭೂತ ಬದಲಾವಣೆ ತರುವ ಗುರಿ ಕೂಡಾ ಹೊಂದಿತ್ತು.

gandhi
author img

By

Published : Sep 7, 2019, 5:01 AM IST

ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ, ನ್ಯಾಯ ಹಾಗೂ ಶಾಂತಿಯುತ ಸಮಾಜವನ್ನ ಸೃಷ್ಟಿಸಿ, ಅದರಲ್ಲಿ ಮಾನವರು ಪರಸ್ಪರ ಸೌಹಾರ್ದತೆಯಿಂದ ಬದುಕುವಂತೆ ಮಾಡಿರುವುದು ರಾಷ್ಟ್ರಪಿತನ ಶ್ರೇಷ್ಠತೆ. ಈ ಮೂಲಕ ಅವರು, ಮನುಕುಲಕ್ಕೆ ಮಹಾತ್ಮಾ ಗಾಂಧೀಜಿಯವರ ಬಹುದೊಡ್ಡ ಕೊಡುಗೆಯಾಗಿದೆ.

ಅನ್ಯಾಯದ ವಿರುದ್ಧ ಹೋರಾಡಲು ಗಾಂಧೀಜಿಯವರು ಅಭಿವೃದ್ಧಿಪಡಿಸಿದ ವಿಶಿಷ್ಟ ತಂತ್ರವೇ 'ಸತ್ಯಾಗ್ರಹ'. ಸತ್ಯವನ್ನು 50 ವರ್ಷಗಳ ಕಾಲ ಪ್ರಯೋಗಕ್ಕೆ ಒಳಪಡಿಸಿದ ಅವರು ಈ ತಂತ್ರವನ್ನು ಅಳವಡಿಸಿಕೊಂಡಿದ್ದರು. ದೇಶವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸಲು ಮಹಾತ್ಮ ಗಾಂಧೀಜಿ ಸತ್ಯಾಗ್ರಹ ಚಳವಳಿ ಪ್ರಾರಂಭಿಸಿ ಅದನ್ನು ಮುನ್ನಡೆಸಿದರು.

ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಲು ಹಾಗೂ ಅವರ ಅಹಮದಾಬಾದ್​ನ ಸಾಬರಮತಿ ಮತ್ತು ವಾರ್ಧಾದ ಸೇವಾಗ್ರಾಮದಲ್ಲಿ ವಾಸಿಸಲಿಚ್ಛಿಸುವವರಿಗೆ ಗಾಂಧೀಜಿ ಹನ್ನೊಂದು ಕಟ್ಟುಪಾಡುಗಳನ್ನು ವಿಧಿಸಿದ್ದರು. ಬಳಿಕ ಇದನ್ನು ಅವರ ಶಿಷ್ಯ ವಿನೋಬಾ ಭಾವೆ 'ಏಕಾದಶ​ ವ್ರತ' ಎಂದು ಕರೆದರು. ಇದೇ ಹನ್ನೊಂದು ವಚನಗಳು ಗಾಂಧೀಜಿಯವರ ಪ್ರೇರಣೆಯಿಂದ ದೇಶದೆಲ್ಲೆಡೆ ಸ್ಥಾಪಿತವಾದ ಅನೇಕ ಆಶ್ರಮಗಳಲ್ಲಿ ಅಳವಡಿಕೆಯಾಗಿದ್ದು, ಹೆಸರುವಾಸಿಯಾಗಿವೆ.

gandhi
ಅನ್ಯಾಯದ ವಿರುದ್ಧ ಹೋರಾಡಲು ಗಾಂಧಿ ಕಂಡುಕೊಂಡ ತಂತ್ರವೇ ಸತ್ಯಾಗ್ರಹ

ಭಾರತಕ್ಕೆ ಗಾಂಧೀಜಿ ವಾಪಸ್​ ಬರುವ ಮುನ್ನ ಗಾಂಧೀಜಿ ಸುಮಾರು 20 ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಕಳೆದಿದ್ದರು. ಪ್ರಾರಂಭದಲ್ಲಿ ಅವರು ಹಣ ಸಂಪಾದಿಸುವ ಉದ್ದೇಶದಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಬಳಿಕ ಅಲ್ಲಿಗೆ ವಲಸೆ ಬಂದಿದ್ದ ಭಾರತೀಯರ ಸಮಸ್ಯೆಗಳ ಕುರಿತು ಗಮನ ಹರಿಸಿದ ಗಾಂಧೀಜಿ, ತಮ್ಮ ಕಾನೂನು ಅಭ್ಯಾಸವನ್ನು ತೊರೆದು ವಲಸೆ ಹೋಗಿದ್ದ ಭಾರತೀಯರ ಹಕ್ಕುಗಳಿಗಾಗಿ ಅಹಿಂಸಾತ್ಮಕ ಹೋರಾಟ ನಡೆಸಿದರು. ಆನಂತರದಲ್ಲಿ ಇದನ್ನೇ ಸತ್ಯಾಗ್ರಹ ಎಂದು ಬಣ್ಣಿಸಲಾಯಿತು. ಗಾಂಧೀಜಿಯವರಿಗೆ ಸತ್ಯಾಗ್ರಹ ಕೇವಲ ಅಹಿಂಸಾತ್ಮಕ ಹೋರಾಟವಾಗಿರಲಿಲ್ಲ. ಬದಲಾಗಿ ಅವರ ಜೀವನದ ಅತ್ಯಮೂಲ್ಯ ತತ್ವವಾಗಿತ್ತು.

ಸತ್ಯಾಗ್ರಹ ಮಾಡುವವರು ಯಾವುದೇ ರೀತಿಯ ಅನ್ಯಾಯವನ್ನು ಸಹಿಸಿಕೊಳ್ಳಬಾರದು ಎಂದು ಮಹಾತ್ಮಾ ಗಾಂಧೀಜಿ ನಂಬಿದ್ದರು. ಸತ್ಯಾಗ್ರಹಕ್ಕೆ ಯಾವುದೇ ಅಡೆತಡೆ ಬಂದರೂ ದಿಟ್ಟವಾಗಿ ಎದುರಿಸಬೇಕು. ಇಲ್ಲಿ ಹೇಡಿತನಕ್ಕೆ ಅವಕಾಶವಿಲ್ಲ. ಹೋರಾಟವು ಅನ್ಯಾಯದ ವಿರುದ್ಧ ಇರಬೇಕೇ ಹೊರತು, ಅನ್ಯಾಯ ಎಸಗುವ ವ್ಯಕ್ತಿಯ ವಿರುದ್ಧ ಇರಬಾರದು. ಹೋರಾಟ ಪ್ರತೀಕಾರ ತೀರಿಸಲು ಅಥವಾ ಎದುರಾಳಿಯನ್ನು ಶಿಕ್ಷಿಸುವ ಸಲುವಾಗಿ ನಡೆಯಬಾರದು. ಸಮಾಜದಲ್ಲಿ ಒಳ್ಳೆಯ ಹಾಗೂ ಕೆಟ್ಟ ಜನರಿರುತ್ತಾರೆಯೇ ಹೊರತು ಇಡೀ ಸಮಾಜವೇ ಕೆಟ್ಟದಾಗಿರಲು ಸಾಧ್ಯವಿಲ್ಲ.

ಗಾಂಧೀಜಿ ತಮ್ಮ ಜೀವನದಲ್ಲಿ ಹಲವು ಬಾರಿ ಸತ್ಯಾಗ್ರಹ ನಡೆಸಿದ್ದರು. ಸಮಯ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಅವರು ಸತ್ಯಾಗ್ರಹದ ರೂಪವನ್ನು ಸಮರ್ಪಕವಾಗಿ ಬದಲಾಯಿಸಿದ್ದರು. ತಮ್ಮ ಭಾಷಣ ಹಾಗೂ ಬರವಣಿಗೆಯ ಮೂಲಕ ಜನರಿಗೆ ಸತ್ಯಾಗ್ರಹದ ಶ್ರೇಷ್ಠತೆಯ ಕುರಿತು ತಿಳಿಸಿದರು. ಎದುರಾಳಿಗೆ ಸತ್ಯದ ಅರಿವಾದಾಗ ಮಾತ್ರ ಸತ್ಯಾಗ್ರಹವು ಯಶಸ್ಸು ಗಳಿಸುತ್ತದೆ ಎಂಬುದು ಗಾಂಧೀಜಿಯವರ ನಂಬಿಕೆ ಆಗಿತ್ತು. ಅಂತಹ ವಾದವನ್ನ ಅವರು ಸಮರ್ಥವಾಗಿ ಪ್ರಸ್ತುತ ಪಡಿಸಿದ್ದರು. ಹಾಗಾಗಿ ಅವರು ಜನಸಾಮಾನ್ಯರೊಂದಿಗೆ ವಿರೋಧಿಗಳಲ್ಲಿಯೂ ಅನ್ಯಾಯದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು.

gandhi
ಸತ್ಯಾಗ್ರಹವೇ ಮಹಾತ್ಮಾನ ಜೀವನದ ಅತ್ಯಮೂಲ್ಯ ತತ್ವ

ಗಾಂಧೀಜಿಯವರ ನಾಯಕತ್ವದಲ್ಲಿ ದೇಶವು ವಿವಿಧ ಬಗೆಯ ಸತ್ಯಾಗ್ರಹಗಳಿಗೆ ಸಾಕ್ಷಿಯಾಯಿತು. 1919 ರಿಂದ 1922ರ ನಡುವೆ ನಡೆದ ಅಸಹಕಾರ ಚಳವಳಿ ಹಾಗೂ 1930-34ರಲ್ಲಿ ನಡೆದ ದಂಡಿ ಸತ್ಯಾಗ್ರಹದಲ್ಲಿ ಜನ ಸಕ್ರಿಯವಾಗಿ ಭಾಗವಹಿಸಿದರು. ಅನ್ಯಾಯದ ವಿರುದ್ಧ ಪ್ರತಿಭಟಿಸಲು ಸತ್ಯಾಗ್ರಹವೇ ಪರಿಣಾಮಕಾರಿ ಮಾರ್ಗವೆಂದು ಜನ ಅರಿತುಕೊಂಡರು. ಸತ್ಯಾಗ್ರಹದ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತುವ ಮೂಲಕ, ಗಾಂಧೀಜಿ ಶೋಷಣೆಗೊಳಗಾದ ಮತ್ತು ತುಳಿತಕ್ಕೊಳಗಾದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದರು.

ಗಾಂಧೀಜಿ ದೃಷ್ಟಿಯಲ್ಲಿ ಅಹಿಂಸಾತ್ಮಕ ಹೋರಾಟದ ಉದ್ದೇಶವು ಕೇವಲ ಬ್ರಿಟಿಷ್​ ಆಡಳಿತದಿಂದ ಮುಕ್ತಿಗೊಳಿಸುವುದು ಮಾತ್ರವಲ್ಲದೇ ಸಮಾಜದಲ್ಲಿ ಮೂಲಭೂತ ಬದಲಾವಣೆ ತರುವ ಗುರಿ ಕೂಡಾ ಹೊಂದಿತ್ತು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ಚರಕ ಸಂಘ, ಗ್ರಾಮೋದಯ ಸಂಘ, ಹರಿಜನ ಸೇವಕ ಸಂಘ, ಗೋ ಸೇವಾ ಸಂಘ, ರಾಷ್ಟ್ರ ಭಾಷಾ ಪ್ರಚಾರ ಸಮಿತಿ, ಆದಿಮ್ ಜಾತಿ ಸೇವಕ ಸಂಘ ಹಾಗೂ ಮಜೂರ್​ ಮಹಾಜನ್​ ಮುಂತಾದ ಸಂಸ್ಥೆಗಳನ್ನು ರಚಿಸಿದರು. ಇವುಗಳಿಗೆ ಕಾಂಗ್ರೆಸ್​ನ ರಾಷ್ಟ್ರಮಟ್ಟದ ನಾಯಕರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದರು.

ದುರಾದೃಷ್ಟವಶಾತ್, ರಾಜಕೀಯ ಚಟುವಟಿಕೆಗಳಿಗೆ ಕಾಂಗ್ರೆಸ್​ ಪಕ್ಷವು ತಾನು ಹಾಕಿದ ಶ್ರಮವನ್ನು ಇಂತಹ ರಚನಾತ್ಮಕ ಚಟುವಟಿಕೆಗಳಿಗೆ ವ್ಯಯಿಸಲಿಲ್ಲ. ಗಾಂಧೀಜಿಯವರ ದಾರಿಯಲ್ಲಿ ಕಾಂಗ್ರೆಸ್​ ನಡೆದಿದ್ದರೆ, ಅಹಿಂಸಾತ್ಮಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕಾರ್ಯಕರ್ತರ ದೊಡ್ಡ ಸೇನೆಯೇ ನಿರ್ಮಾಣವಾಗುತ್ತಿತ್ತು.

Intro:Body:

ಮನುಕುಲಕ್ಕೆ ಗಾಂಧಿ ನೀಡಿದ ಕೊಡುಗೆ ಸತ್ಯಾಗ್ರಹ ಹಾಗೂ ಅಹಿಂಸೆ! 

ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ, ನ್ಯಾಯ ಹಾಗೂ ಶಾಂತಿಯುತ ಸಮಾಜವನ್ನ ಸೃಷ್ಟಿಸಿ, ಅದರಲ್ಲಿ ಮಾನವರು ಪರಸ್ಪರ ಸೌಹಾರ್ದತೆಯಿಂದ ಬದುಕುವಂತೆ ಮಾಡಿರುವುದು ರಾಷ್ಟ್ರಪಿತನ ಅಗ್ಗಳಿಕೆ. ಈ ಮೂಲಕ ಅವರು, ಮನುಕುಲಕ್ಕೆ ಮಹಾತ್ಮಾ ಗಾಂಧೀಜಿಯವರ ಬಹುದೊಡ್ಡ ಕೊಡುಗೆಯಾಗಿದೆ.  

ಅನ್ಯಾಯದ ವಿರುದ್ಧ ಹೋರಾಡಲು ಗಾಂಧೀಜಿಯವರು ಅಭಿವೃದ್ಧಿಪಡಿಸಿದ ವಿಶಿಷ್ಟ ತಂತ್ರವೇ 'ಸತ್ಯಾಗ್ರಹ'. ಸತ್ಯವನ್ನು 50 ವರ್ಷಗಳ ಕಾಲ ಪ್ರಯೋಗಕ್ಕೆ ಒಳಪಡಿಸಿದ ಅವರು ಈ ತಂತ್ರವನ್ನು ಅಳವಡಿಸಿಕೊಂಡಿದ್ದರು. ದೇಶವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸಲು ಮಹಾತ್ಮ ಗಾಂಧೀಜಿ ಸತ್ಯಾಗ್ರಹ ಚಳವಳಿ ಪ್ರಾರಂಭಿಸಿ ಅದನ್ನು ಮುನ್ನಡೆಸಿದರು.

ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಲು ಹಾಗೂ ಅವರ ಅಹಮದಾಬಾದ್​ನ ಸಾಬರಮತಿ ಮತ್ತು ವಾರ್ಧಾದ ಸೇವಾಗ್ರಾಮದಲ್ಲಿ ವಾಸಿಸಲಿಚ್ಛಿಸುವವರಿಗೆ ಗಾಂಧೀಜಿ ಹನ್ನೊಂದು ಕಟ್ಟುಪಾಡುಗಳನ್ನು ವಿಧಿಸಿದ್ದರು. ಬಳಿಕ ಇದನ್ನು ಅವರ ಶಿಷ್ಯ ವಿನೋಬಾ ಭಾವೆ 'ಏಕಾದಶ​ ವ್ರತ' ಎಂದು ಕರೆದರು. ಇದೇ ಹನ್ನೊಂದು ವಚನಗಳು ಗಾಂಧೀಜಿಯವರ ಪ್ರೇರಣೆಯಿಂದ ದೇಶದೆಲ್ಲೆಡೆ ಸ್ಥಾಪಿತವಾದ ಅನೇಕ ಆಶ್ರಮಗಳಲ್ಲಿ ಅಳವಡಿಕೆಯಾಗಿದ್ದು, ಹೆಸರುವಾಸಿಯಾಗಿವೆ.

ಭಾರತಕ್ಕೆ ಗಾಂಧೀಜಿ ವಾಪಸ್​ ಬರುವ ಮುನ್ನ ಗಾಂಧೀಜಿ ಸುಮಾರು 20 ವರ್ಷಗಳನ್ನು  ದಕ್ಷಿಣ ಆಫ್ರಿಕಾದಲ್ಲಿ ಕಳೆದಿದ್ದರು. ಪ್ರಾರಂಭದಲ್ಲಿ ಅವರು ಹಣ ಸಂಪಾದಿಸುವ ಉದ್ದೇಶದಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಬಳಿಕ ಅಲ್ಲಿಗೆ ವಲಸೆ ಬಂದಿದ್ದ ಭಾರತೀಯರ ಸಮಸ್ಯೆಗಳ ಕುರಿತು ಗಮನ ಹರಿಸಿದ ಗಾಂಧೀಜಿ, ತಮ್ಮ ಕಾನೂನು ಅಭ್ಯಾಸವನ್ನು ತೊರೆದು ವಲಸೆ ಹೋಗಿದ್ದ ಭಾರತೀಯರ ಹಕ್ಕುಗಳಿಗಾಗಿ ಅಹಿಂಸಾತ್ಮಕ ಹೋರಾಟ ನಡೆಸಿದರು. ಆನಂತರದಲ್ಲಿ ಇದನ್ನೇ ಸತ್ಯಾಗ್ರಹ ಎಂದು ಬಣ್ಣಿಸಲಾಯಿತು. ಗಾಂಧೀಜಿಯವರಿಗೆ ಸತ್ಯಾಗ್ರಹ ಕೇವಲ ಅಹಿಂಸಾತ್ಮಕ ಹೋರಾಟವಾಗಿರಲಿಲ್ಲ. ಬದಲಾಗಿ ಅವರ ಜೀವನದ ಅತ್ಯಮೂಲ್ಯ ತತ್ತ್ವವಾಗಿತ್ತು.

ಸತ್ಯಾಗ್ರಹ ಮಾಡುವವರು ಯಾವುದೇ ರೀತಿಯ ಅನ್ಯಾಯವನ್ನು ಸಹಿಸಿಕೊಳ್ಳಬಾರದು ಎಂದು ಮಹಾತ್ಮಾ ಗಾಂಧೀಜಿ ನಂಬಿದ್ದರು. ಸತ್ಯಾಗ್ರಹಕ್ಕೆ ಯಾವುದೇ ಅಡೆತಡೆ ಬಂದರೂ ದಿಟ್ಟವಾಗಿ ಎದುರಿಸಬೇಕು. ಇಲ್ಲಿ ಹೇಡಿತನಕ್ಕೆ ಅವಕಾಶವಿಲ್ಲ. ಹೋರಾಟವು ಅನ್ಯಾಯದ ವಿರುದ್ಧ ಇರಬೇಕೇ ಹೊರತು ಅನ್ಯಾಯ ಎಸಗುವ ವ್ಯಕ್ತಿಯ ವಿರುದ್ಧ ಇರಬಾರದು. ಹೋರಾಟ ಪ್ರತೀಕಾರ ತೀರಿಸಲು ಅಥವಾ ಎದುರಾಳಿಯನ್ನು ಶಿಕ್ಷಿಸುವ ಸಲುವಾಗಿ ನಡೆಯಬಾರದು. ಸಮಾಜದಲ್ಲಿ ಒಳ್ಳೆಯ ಹಾಗೂ ಕೆಟ್ಟ ಜನರಿರುತ್ತಾರೆಯೇ ಹೊರತು ಇಡೀ ಸಮಾಜವೇ ಕೆಟ್ಟದಾಗಿರಲು ಸಾಧ್ಯವಿಲ್ಲ. 

ಗಾಂಧೀಜಿ ತಮ್ಮ ಜೀವನದಲ್ಲಿ ಹಲವು ಬಾರಿ ಸತ್ಯಾಗ್ರಹ ನಡೆಸಿದ್ದರು. ಸಮಯ ಹಾಗೂ ಪರಿಸ್ಥಿಗೆ ಅನುಗುಣವಾಗಿ ಅವರು ಸತ್ಯಾಗ್ರಹದ ರೂಪವನ್ನು ಸಮರ್ಪಕವಾಗಿ ಬದಲಾಯಿಸಿದ್ದರು. ತಮ್ಮ ಭಾಷಣ ಹಾಗೂ ಬರವಣಿಗೆಯ ಮೂಲಕ ಜನರಿಗೆ ಸತ್ಯಾಗ್ರಹದ ಶ್ರೇಷ್ಟತೆಯ ಕುರಿತು ತಿಳಿಸಿದರು. ಎದುರಾಳಿಗೆ ಸತ್ಯದ ಅರಿವಾದಾಗ ಮಾತ್ರ ಸತ್ಯಾಗ್ರಹವು ಯಶಸ್ಸು ಗಳಿಸುತ್ತದೆ ಎಂಬುವುದು ಗಾಂಧೀಜಿಯವರ ನಂಬಿಕೆ ಆಗಿತ್ತು. ಅಂತಹ ವಾದವನ್ನ ಅವರು ಸಮರ್ಥವಾಗಿ ಪ್ರಸ್ತುತ ಪಡಿಸಿದರು. ಹಾಗಾಗಿ ಅವರು ಜನಸಾಮಾನ್ಯರೊಂದಿಗೆ ವಿರೊಧಿಗಳಲ್ಲಿಯೂ ಅನ್ಯಾಯದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. 

ಗಾಂಧೀಜಿಯವರ ನಾಯಕತ್ವದಲ್ಲಿ ಭಾರತ ದೇಶವು ವಿವಿಧ ಬಗೆಯ ಸತ್ಯಾಗ್ರಹಗಳಿಗೆ ಸಾಕ್ಷಿಯಾಯಿತು. 1919 ರಿಂದ 1922ರ ನಡುವೆ ನಡೆದ ಅಸಹಕಾರ ಚಳವಳಿ ಹಾಗೂ 1930-34ರಲ್ಲಿ ನಡೆದ ದಂಡಿ ಸತ್ಯಾಗ್ರಹದಲ್ಲಿ ಜನ ಸಕ್ರಿಯವಾಗಿ ಭಾಗವಹಿಸಿದರು. ಅನ್ಯಾಯದ ವಿರುದ್ಧ ಪ್ರತಿಭಟಿಸಲು ಸತ್ಯಾಗ್ರಹವೇ ಪರಿಣಾಮಕಾರಿ ಮಾರ್ಗವೆಂದು ಜನ ಅರಿತುಕೊಂಡರು. ಸತ್ಯಾಗ್ರಹದ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತುವ ಮೂಲಕ, ಗಾಂಧೀಜಿ ಶೋಷಣೆಗೊಳಗಾದ ಮತ್ತು ತುಳಿತಕ್ಕೊಳಗಾದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದರು. 

ಗಾಂಧೀಜಿ ದೃಷ್ಟಿಯಲ್ಲಿ ಅಹಿಂಸಾತ್ಮಕ ಹೋರಾಟದ ಉದ್ದೇಶವು ಕೇವಲ ಬ್ರಿಟಿಷ್​ ಆಡಳಿತದಿಂದ ಮುಕ್ತಿಗೊಳಿಸುವುದು ಮಾತ್ರವಲ್ಲದೇ ಸಮಾಜದಲ್ಲಿ ಮೂಲಭೂತ ಬದಲಾವಣೆ ತರುವ ಗುರಿ ಕೂಡಾ ಹೊಂದಿತ್ತು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ಚರಕ ಸಂಘ, ಗ್ರಾಮೋದಯ ಸಂಘ, ಹರಿಜನ ಸೇವಕ ಸಂಘ, ಗೋ ಸೇವಾ ಸಂಘ, ರಾಷ್ಟ್ರ ಭಾಷಾ ಪ್ರಚಾರ ಸಮಿತಿ, ಆದಿಮ್ ಜಾತಿ ಸೇವಕ ಸಂಘ ಹಾಗೂ ಮಜೂರ್​ ಮಹಾಜನ್​ ಮುಂತಾದ ಸಂಸ್ಥೆಗಳನ್ನು ರಚಿಸಿದರು. ಇವುಗಳಿಗೆ ಕಾಂಗ್ರೆಸ್​ನ ರಾಷ್ಟ್ರಮಟ್ಟದ ನಾಯಕರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದರು.

ದುರಾದೃಷ್ಟವಶಾತ್, ರಾಜಕೀಯ ಚಟುವಟಿಕೆಗಳಿಗೆ ಕಾಂಗ್ರೆಸ್​ ಪಕ್ಷವು ತಾನು ಹಾಕಿದ ಶ್ರಮವನ್ನು ಇಂತಹ ರಚನಾತ್ಮಕ ಚಟುವಟಿಕೆಗಳಿಗೆ ವ್ಯಯಿಸಲಿಲ್ಲ. ಗಾಂಧೀಜಿಯವರ ದಾರಿಯಲ್ಲಿ ಕಾಂಗ್ರೆಸ್​ ನಡೆದಿದ್ದರೆ, ಅಹಿಂಸಾತ್ಮಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕಾರ್ಯಕರ್ತರ ದೊಡ್ಡ ಸೇನೆಯೇ ನಿರ್ಮಾಣವಾಗುತ್ತಿತ್ತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.