ಹೈದರಾಬಾದ್: ಸತ್ಯ ಮತ್ತು ಅಹಿಂಸಾ ಮಾರ್ಗದ ಮೂಲಕ ಮಹಾತ್ಮ ದೇಶದಲ್ಲಿ ಶಾಂತಿಯ ಬೀಜ ಬಿತ್ತಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಮಹಾತ್ಮನ ಈ ಅಹಿಂಸಾ ತತ್ತ್ವಗಳೇ ಇಂದಿಗೂ ಹೆಚ್ಚು ಪ್ರಸ್ತುತ.
ಕೆಲ ದೇಶ ಹಾಗೂ ಸಂಸ್ಥೆಗಳು ಅಹಿಂಸಾ ಮಾರ್ಗದ ಮೂಲಕ ತಮ್ಮ ಗುರಿ ಸಾಧನೆಗೆ ಮುಂದಾಗಿ ವಿಫಲಗೊಂಡಿವೆ. ಬಳಿಕ ಸಂವಾದ ಹಾಗೂ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಮೂಲಕ ಅಹಿಂಸಾ ತತ್ತ್ವಕ್ಕೆ ಶರಣಾಗಿ ತಮ್ಮ ಸಮಸ್ಯೆ ಹಾಗೂ ಬಿಕ್ಕಟ್ಟು ನಿರ್ವಹಣೆಗೆ ಮುಂದಾದವು.
ನಾಗಾ ನ್ಯಾಷನಲ್ ಕೌನ್ಸಿಲ್ ಹಾಗೂ ನಾಗಾಲ್ಯಾಂಡ್ನ ರಾಷ್ಟ್ರೀಯ ಸಮಾಜವಾದಿ ಮಂಡಳಿಗಳು ಸರ್ಕಾರದೊಂದಿಗೆ ಸಹಮತಗೊಳ್ಳದೇ ಸಾರ್ವಭೌಮತ್ವಕ್ಕಾಗಿ ಪ್ರತ್ಯೇಕವಾದಿ ಚಳವಳಿಯನ್ನು ಪ್ರಾರಂಭಿಸಿತು. ನಾಗಾ ಫೆಡರಲ್ ಸರ್ಕಾರ ಹಾಗೂ ನಾಗಾ ಫೆಡರಲ್ ಸೇನೆಯನ್ನು ರಚಿಸಲಾಯಿತು. ನಾಗಾಗಳು ಹಾಗೂ ಭಾರತೀಯ ಸೇನೆಯ ನಡುವೆ ಹಿಂಸಾಚಾರ ನಡೆಯಿತು. ಭಾರತದ ನೆಲದಲ್ಲಿ ಭಾರತೀಯ ನಾಯಕರನ್ನು ಭೇಟಿಯಾಗಲು ನಾಗಾಗಳು ಒಪ್ಪುತ್ತಿರಲಿಲ್ಲ. ಹಾಗಾಗಿ ಯುರೋಪ್ ಅಥವಾ ಆಗ್ನೇಯ ಏಷ್ಯಾದಲ್ಲಿ ಸಭೆಗಳು ನಡೆಯುತ್ತಿದ್ದವು. ಅಂತಿಮವಾಗಿ ನಾಗಾ ನಾಯಕರು ಭಾರತ ಸರ್ಕಾರದೊಂದಿಗೆ ತೊಡಗಿಕೊಳ್ಳಲು ನಿರ್ಧರಿಸಿದರು. ಪ್ರತ್ಯೇಕ ಸಂವಿಧಾನ ಮತ್ತು ಧ್ವಜಕ್ಕೆ ಬೇಡಿಕೆ ಇಡುತ್ತಿರುವ ನಾಗಾಗಳೊಂದಿಗೆ ಸಮಸ್ಯೆ ಇಂದಿಗೂ ಬಗೆಹರಿಯದಿದ್ದರೂ, ಅವರು ಭಾರತದೊಂದಿಗೆ ಶಾಂತಿ ಹಾಗೂ ಸಹಬಾಳ್ವೆಯ ಸಂಬಂಧ ಹೊಂದಿದ್ದಾರೆ.
ಎರಡನೇ ಮಹಾಯುದ್ಧದ ಅಂತ್ಯದಲ್ಲಿ ಕೊರಿಯಾ ಎರಡು ಭಾಗವಾಗಿ ವಿಭಜನೆಗೊಂಡು, 1950-53ರ ಕೊರಿಯನ್ ಯುದ್ಧಗೆ ನಾಂದಿಯಾಯಿತು. ಉತ್ತರ ಕೊರಿಯಾಗೆ ಸೋವಿಯತ್ಒಕ್ಕೂಟಗಳು ಬೆಂಬಲ ನೀಡಿದರೆ, ದಕ್ಷಿಣ ಕೊರಿಯಕ್ಕೆ ಯುನೈಟೆಡ್ ಸ್ಟೇಟ್ಸ್ ಬೆಂಬಲ ಸೂಚಿಸಿದವು. ಯುನೈಟೆಡ್ ಸ್ಟೇಟ್ಸ್ ಹಾಗೂ ದಕ್ಷಿಣ ಕೊರಿಯಾದೊಂದಿಗೆ ಉತ್ತರ ಕೊರಿಯಾದ ದೀರ್ಘಕಾಲದ ದ್ವೇಷ ಮುಂದುವರಿಯಿತು. ಆದರೆ ಈಗ ಮೂರು ದೇಶಗಳ ಸರ್ಕಾರಗಳು ನಿರಂತರ ಸಭೆ ನಡೆಸಿ, ತಮ್ಮ ಸಂಘರ್ಷವನ್ನು ಕೊನೆಗೊಲಿಸಲು ನಿರ್ಧರಿಸಿವೆ.
ಪಾಕಿಸ್ತಾನ ಹಾಗೂ ಭಾರತದ ನಡುವಿರುವ ಕಾಶ್ಮೀರ ಸಮಸ್ಯೆಯ ಕುರಿತು ಮಾತನಾಡಿದ ನರೇಂದ್ರ ಮೋದಿ, 1947ರ ಮೊದಲು ಭಾರತ ಹಾಗೂ ಪಾಕಿಸ್ತಾನ ಒಂದಾಗಿತ್ತು. ಇದೀಗ ಪರಿಸ್ಥಿತಿ ಬದಲಾಗಿದ್ದರೂ ಪರಸ್ಪರ ಮಾತುಕತೆ ಮಾಡುವುದರ ಮೂಲಕ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಬಹುದು ಎಂದಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಪರಿಹರಿಸಲು ಬಯಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬಳಿಕ, ಮೋದಿ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಮಾವೋವಾದಿಗಳು ಹಾಗೂ ನಕ್ಸಲರು ಸಂಘರ್ಷ ಸೃಷ್ಟಿಸಿ ಹೋರಾಟ ನಡೆಸುತ್ತಿದ್ದರೂ, ನೇಪಾಳದ ಕಮ್ಯುನಿಸ್ಟ್ ಪಾರ್ಟಿಯು ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಆಂತರಿಕ ಯುದ್ಧ ಕೊನೆಗೊಳಿಸಿತು. ನೇಪಾಳದಲ್ಲಿ ರಾಜಪ್ರಭುತ್ವ ಅಂತ್ಯಗೊಳಿಸಿ, ಏಳು ಪಕ್ಷಗಳ ಮೈತ್ರಿಕೂಟ ಸೇರಿಕೊಂಡಿತು.
ಕಳೆದ ವರ್ಷ ಅಖಿಲ ಭಾರತ ರೈತ ಸಂಘಟನೆಯ ಸುಮಾರು 40,000 ರೈತರು ಭಾರತೀಯ ಕಮ್ಯುನಿಸ್ಟ್ ಪಕ್ಷದೊಂದಿಗೆ ಸೇರಿಕೊಂಡು 180 ಕಿಲೋ ಮೀಟರ್ವರೆಗೆ ಶಾಂತಿಯುತ ಕಾಲ್ನಡಿಗೆ ಜಾಥಾ ಆಯೋಜಿಸಿದ್ದರು. ಸಾಲ ಹಾಗೂ ವಿದ್ಯುತ್ ಬಿಲ್ ಮನ್ನಾ ಮತ್ತು ಸ್ವಾಮಿನಾಥನ್ ಕಮಿಷನ್ ರಿಪೋರ್ಟ್ ಹಾಗೂ ನಾಸಿಕ್ನಿಂದ ಮುಂಬಯಿ ತನಕ ಅರಣ್ಯ ಹಕ್ಕುಗಳ ಕಾಯ್ದೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದ್ದರು. ಜಾಥಾದ ಕೊನೆಯ ದಿನ ಮುಂಬಯಿಯಲ್ಲಿ ಪರೀಕ್ಷೆಗೆ ಹಾಜರಾಗುವವರು ಮತ್ತು ಕಚೇರಿಗೆ ತೆರಳುವವರಿಗೆ ಪ್ರಯಾಣದಲ್ಲಿ ತೊಂದರೆಯಾಗಬಾರದು ಎಂದು ಮುಂಜಾನೆ ಒಂದು ಗಂಟೆಗೇ ಜಾಥಾ ಆರಂಭಿಸಿದರು. ಇದು ಎಲ್ಲರ ಸಹಾನುಭೂತಿಯನ್ನು ಪಡೆಯಿತು.
ಶಾಂತಿಯುತ ಪ್ರತಿಭಟನೆ ಗಾಂಧೀಜಿಯ ಸತ್ಯಾಗ್ರದಿಂದ ಪ್ರೇರಣೆ ಪಡೆದಿದೆ. ಹಲವಾರು ಸಂಸ್ಥೆಗಳು ಗಾಂಧೀಜಿಯ ಪ್ರತಿಭಟನಾ ವಿಧಾನ ಬಳಸಿದವು. ರಾಜಕೀಯ ಖೈದಿಗಳಿಗೆ ಮಾನವೀಯತೆ ತೋರಬೇಕೆಂದು ಕೋರಿ ಜತಿನ್ ದಾಸ್ ನಡೆಸುತ್ತಿದ್ದ ಉಪವಾಸಕ್ಕೆ, ಭಗತ್ ಸಿಂಗ್ ಕೂಡಾ ಲಾಹೋರ್ ಜೈಲ್ನಲ್ಲಿಯೇ ಉಪವಾಸ ನಡೆಸಿ ಬೆಂಬಲ ಸೂಚಿಸಿದರು. ಗಾಂಧಿ ಮಾದರಿಯ ಪಾದಯಾತ್ರೆ ವಿನೋಬಾ ಬಾವೆ, ಮೇಧಾ ಪಾಟ್ಕರ್, ಅಣ್ಣಾ ಹಜಾರೆ, ಇರೋಮ್ ಶರ್ಮಿಳಾ ಮೊದಲಾದವರು ಪಾಲಿಸಿದರು.
ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿ ತರಬೇತಿ ಪಡೆದಿದ್ದ ಹಾಗೂ ಉಮ್ಖಾಂಟೋ ವೆ ಸಿಜ್ವೆಯ ಸಂಘಟನೆಯ ಸಹ ಸಂಸ್ಥಾಪಕರಾಗಿದ್ದ ನೆಲ್ಸನ್ ಮಂಡೇಲಾ ಗಾಂಧೀ ತತ್ವಗಳನ್ನೇ ಪಾಲಿಸಿದರು. 27 ವರ್ಷಗಳ ಜೈಲುಶಿಕ್ಷೆಯ ಬಳಿಕ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದಾಗ ರಾಷ್ಟ್ರೀಯ ಸಾಮರಸ್ಯಕ್ಕೆ ಕರೆ ನೀಡಿದರು.
ಅಮೆರಿಕ ಹಾಗೂ ಇಸ್ರೆಲ್ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿರುವ ಪ್ಯಾಲೆಸ್ತಿನ್ ಸಂಘಟನೆ ಹಮಸ್ನ ನಾಯಕ ಖಲೀದ್ ಮಶಾಲ್ ತಾನು ಗಾಂಧಿಯನ್ನು ಆದರ್ಶವೆಂದು ಪರಿಗಣಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಸಾಮಾನ್ಯ ಜನರು ಕೂಡಾ ತಮ್ಮ ಸರಳ ಬೇಡಿಕೆಗಳಿಗೆ ದನಿಯಾಗಿಸಲು ಗಾಂಧೀಜಿಯ ಮಾದರಿಯನ್ನೇ ಬಳಸಿದ್ದಾರೆ. ತಮ್ಮ ಸಮಸ್ಯೆಗಳು ಹಾಗೂ ಕುಂದುಕೊರತೆಗಳ ಪರಿಹಾರಕ್ಕಾಗಿ ಕೆಲವರು ಸರ್ಕಾರಿ ಕಚೇರಿಗಳ ಹೊರಗೆ ಶಾಂತಿಯುತ ಧರಣಿ ನಡೆಸುವುದನ್ನು ನಾವು ಕಾಣಬಹುದು.