ನವದೆಹಲಿ: ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಸುಮಾರು 76 ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.
ಗಾಯಗೊಂಡ ಯೋಧರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, 18 ಸೈನಿಕರು ಲೇಹ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ. ಈ 18 ಸೈನಿಕರು ಚಿಕಿತ್ಸೆ ನಂತರ ಮುಂದಿನ 15 ದಿನಗಳಲ್ಲಿ ಕರ್ತವ್ಯಕ್ಕೆ ಮರಳಲಿದ್ದಾರೆ ಎಂದು ಹೇಳಿದೆ.
-
58 personnel that are at other hospitals have minor injuries, hence the optimistic timeframe of one week for their recovery: Indian Army Sources #GalwanValleyClash https://t.co/xVqyPUORXE
— ANI (@ANI) June 18, 2020 " class="align-text-top noRightClick twitterSection" data="
">58 personnel that are at other hospitals have minor injuries, hence the optimistic timeframe of one week for their recovery: Indian Army Sources #GalwanValleyClash https://t.co/xVqyPUORXE
— ANI (@ANI) June 18, 202058 personnel that are at other hospitals have minor injuries, hence the optimistic timeframe of one week for their recovery: Indian Army Sources #GalwanValleyClash https://t.co/xVqyPUORXE
— ANI (@ANI) June 18, 2020
ಅಲ್ಲದೆ ಸುಮಾರು 58 ಸೈನಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದೆ. ಈ 58 ಸೈನಿಕರು ಒಂದು ವಾರಗಳ ಕಾಲ ಚಿಕಿತ್ಸೆ ನಂತರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಿದೆ. ಘರ್ಷಣೆ ವೇಳೆ ಭಾರತದ ಯಾವುದೇ ಸೈನಿಕರು ಕಾಣೆಯಾಗಿಲ್ಲ ಎಂದು ಭಾರತೀಯ ಸೇನೆ ಈಗಾಗಲೆ ಸ್ಪಷ್ಟಪಡಿಸಿದೆ.
ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಸೋಮವಾರ ತಡರಾತ್ರಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಇತ್ತ ಚೀನಾದ 45 ಮಂದಿ ಸೈನಿರು ಸತ್ತಿರಬಹುದು ಅಥವಾ ಗಾಯಗೊಂಡಿರಬಹುದು ಎಂದು ಮೂಲಗಳು ತಿಳಿಸಿವೆ.