ETV Bharat / bharat

ಮೊಘಲರ ಕಾಲದಿಂದ ಸ್ವತಂತ್ರ ಭಾರತದವರೆಗ ನಾಣ್ಯಗಳ ಸಂಗ್ರಹ: ಇತಿಹಾಸ ಸಾರುತ್ತಿವೆ ಪ್ರತೀ ನಾಣ್ಯಗಳು!

author img

By

Published : Dec 2, 2020, 4:32 PM IST

Updated : Dec 2, 2020, 6:08 PM IST

ಉರ್ದು ಲಿಪಿಯಲ್ಲಿ ಬರಹಗಳನ್ನು ಹೊಂದಿರುವ ಕ್ರಿ.ಶ 1500 ನಾಣ್ಯ, ರಾಮ - ಸೀತೆ ಮತ್ತು ಹನುಮನ ಚಿತ್ರಣವನ್ನು ಹೊಂದಿರುವ ನಾಣ್ಯ, . ಕ್ರಿ.ಶ 1700 ರ ಜಾರ್ಜ್ ಕಿಂಗ್‌ನ ಚಿತ್ರವನ್ನು ಹೊಂದಿರುವ ನಾಣ್ಯಗಳು ಸೇರಿದಂತೆ ಎಲ್ಲಾ ಕಾಲದ ನಾಣ್ಯಗಳನ್ನು ಇವರು ಸಂಗ್ರಹ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಈ ನಾಣ್ಯಗಳಿಂದ ದೇಶದ ಹಾಗೂ ಪ್ರಪಂಚದ ಇತಿಹಾಸವನ್ನು ಹಾಗೂ ಅಂದಿನ ಆಡಳಿತ ಪದ್ಧತಿಯನ್ನು ತಿಳಿಯಬಹುದಾಗಿದೆ.

from-mughal-era-to-independent-india-chhattisgarh-man-has-coins-from-all-period
ಮೊಘಲ್ ಯುಗದಿಂದ ಸ್ವತಂತ್ರ ಭಾರತದವರೆಗ ನಾಣ್ಯಗಳ ಸಂಗ್ರಹ

ಕೊರ್ಬಾ (ಛತ್ತೀಸ್​ಗಢ) :ನಾಣ್ಯ ಸಂಗ್ರಹಣೆ ಎನ್ನುವುದು ಕೆಲವರಿಗೆ ಅಭ್ಯಾಸವೇನೋ ಹೌದು. ಆದರೆ, ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ನಾಣ್ಯಗಳನ್ನು ಸಂಗ್ರಹ ಮಾಡಿರುವುದು ಸಾಮಾನ್ಯದ ಮಾತಂತೂ ಅಲ್ಲ. ಇಲ್ಲೋರ್ವ ವ್ಯಕ್ತಿ ಮೊಘಲ್​ ಯುಗದಿಂದಲೂ ನಾಣ್ಯ ಸಂಗ್ರಹಣೆ ಮಾಡಿಕೊಂಡು ಬಂದಿದ್ದಾರೆ.

ಛತ್ತೀಸ್​ಗಢದ ರಾಮ್ ಸಿಂಗ್ ಅಗರ್‌ವಾಲ್ ಅವರು ನಾಣ್ಯ ಸಂಗ್ರಹದಲ್ಲಿ ಹೆಚ್ಚು ಆಸಕ್ತಿ ಇರಿಸಿಕೊಂಡಿದ್ದು, ಈ ಹವ್ಯಾಸಕ್ಕಾಗಿ ಇವರು ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಈವರೆಗೆ ಖರ್ಚು ಮಾಡಿದ್ದಾರೆ. ನಾಣ್ಯಶಾಸ್ತ್ರಜ್ಞ ರಾಮ್ ಸಿಂಗ್ ಪ್ರಾಚೀನ ಕಾಲದ ನಾಣ್ಯಗಳನ್ನು ಒಳಗೊಂಡಿರುವ ಒಂದು ವಿಶಿಷ್ಟವಾದ ನಾಣ್ಯಗಳ ಸಂಗ್ರಹವನ್ನು ಹೊಂದಿದ್ದಾರೆ. ಇವರು ಕೊರ್ಬಾದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷರಾಗಿದ್ದು, 1970ರ ದಶಕದಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಂದ ನಾಣ್ಯ ಸಂಗ್ರಹ ಮಾಡುವ ಬಗ್ಗೆ ಒಲವು ಉಂಟಾಯಿತು ಎನ್ನುತ್ತಾರೆ ಸಿಂಗ್​.

ಮೊಘಲರ ಕಾಲದಿಂದ ಸ್ವತಂತ್ರ ಭಾರತದವರೆಗ ನಾಣ್ಯಗಳ ಸಂಗ್ರಹ

ರಾಮ್ ಸಿಂಗ್ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಯುಕೋ ಬ್ಯಾಂಕ್‌ಗೆ ಭೇಟಿ ನೀಡಿದ್ದರಂತೆ. ಅಲ್ಲಿ ಕಾಲಕಾಲಕ್ಕೆ ಬದಲಾದ ನಾಣ್ಯಗಳನ್ನು ಸಂಗ್ರಹಣೆ ಮಾಡಲಾಗಿತ್ತು. ಇದರಿಂದ ಪ್ರೇರಣೆಗೊಂಡ ಸಿಂಗ್​ ತಾವೂ ಯಾಕೆ ಈ ರೀತಿ ಮಾಡಬಾರದು ಎಂದು ಅರಿತು ಅಲ್ಲಿಂದ ನಾಣ್ಯ ಸಂಗ್ರಹಣೆಯಲ್ಲಿ ಮುಂದಾಗಿದ್ದಾರೆ. ಅವರು ತಮ್ಮ ಮೊದಲ ನಾಣ್ಯವನ್ನು 1974 ರಲ್ಲಿ ಸಂಗ್ರಹ ಮಾಡಿದ್ದಾರೆ. ಇವರ ಸಂಗ್ರಹಾಗಾರದಲ್ಲಿ ಮೊಘಲ್ ಮತ್ತು ಬ್ರಿಟಿಷ್ ಕಾಲದಿಂದ ಹಿಡಿದು ಭಾರತ ಸರ್ಕಾರ ಹೊರಡಿಸಿದ 1000 ರೂಪಾಯಿ ನಾಣ್ಯಗಳನ್ನೂ ಕಾಣಬಹುದು.

ಉರ್ದು ಲಿಪಿಯಲ್ಲಿ ಬರಹಗಳನ್ನು ಹೊಂದಿರುವ ಕ್ರಿ.ಶ 1500 ನಾಣ್ಯ, ರಾಮ- ಸೀತೆ ಮತ್ತು ಹನುಮನ ಚಿತ್ರಣವನ್ನು ಹೊಂದಿರುವ ನಾಣ್ಯ, . ಕ್ರಿ.ಶ 1700 ರ ಜಾರ್ಜ್ ಕಿಂಗ್‌ನ ಚಿತ್ರವನ್ನು ಹೊಂದಿರುವ ನಾಣ್ಯಗಳು, ಹಲವಾರು ಈಸ್ಟ್ ಇಂಡಿಯಾ ಕಂಪನಿಯ ನಾಣ್ಯಗಳು ಇವರಲ್ಲಿ ಇವೆ.

ಬೃಹದೀಶ್ವರ ದೇವಸ್ಥಾನವು ಸಾವಿರ ವರ್ಷಗಳನ್ನು ಪೂರ್ಣಗೊಳಿಸಿದಾಗ 1000 ರೂಪಾಯಿ ನಾಣ್ಯವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಅಂತೆಯೇ ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾಚರಣೆಯಂದು ಪ್ರಯುಕ್ತ 150 ರೂಪಾಯಿ ನಾಣ್ಯವನ್ನು ಕೂಡ ಬಿಡುಗಡೆ ಮಾಡಲಾಗಿತ್ತು. ಈ ಎಲ್ಲ ನಾಣ್ಯಗಳು ಇವರ ಸಂಗ್ರಹದಲ್ಲಿ ಅಡಕವಾಗಿವೆ.

ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಂದು ಬಿಡುಗಡೆಯಾದ 150 ರೂಪಾಯಿ ನಾಣ್ಯ. ಗುರುನಾನಕ್ ದೇವ್ ಅವರ 550 ನೇ ಪ್ರಕಾಶ್ ಪರ್ವದಲ್ಲಿ ಬಿಡುಗಡೆಯಾದ 550 ರೂಪಾಯಿ ನಾಣ್ಯಗಳ ಸಂಗ್ರಹ ಇವರಲ್ಲಿ ಇವೆ. ಇನ್ನು ಪ್ರಮುಖ ವಿಷಯ ಎಂದರೆ ಈ ನಾಣ್ಯ ಸಂಗ್ರಹಕ್ಕಾಗಿಯೇ ಸುಮಾರು 30 ದೇಶಗಳಿಗೆ ಭೇಟಿ ನೀಡಿ ಬಂದಿದ್ದಾರಂತೆ.

Last Updated : Dec 2, 2020, 6:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.