ನವದೆಹಲಿ: ಅಭಿವೃದ್ಧಿ ಹೆಸರಿನಲ್ಲಿ ಅಪಾರ ಅರಣ್ಯ ಸಂಪತ್ತು ನಾಶವಾಗುತ್ತಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದ್ರೆ, ಖುಷಿಯ ವಿಚಾರ ಏನು ಗೊತ್ತೇ? ಕಳೆದ 5 ವರ್ಷದಲ್ಲಿ ಭಾರತದಲ್ಲಿ ಅರಣ್ಯ ಸಂಪತ್ತು ಹೆಚ್ಚಳ ಆಗಿದೆಯಂತೆ. ಈ ವಿಚಾರವನ್ನು ಸ್ವತ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
-
Union Min of Environment & Forest, P Javadekar: Forest cover has increased 8000sq km in 2015-2017, it can be seen from satellites. From 2014-2019, it increased by around 16000 sq km. Sometimes permission is given to cut trees for development but if 1 tree is cut, 5-10 are planted pic.twitter.com/v0vhf3cn6x
— ANI (@ANI) July 28, 2019 " class="align-text-top noRightClick twitterSection" data="
">Union Min of Environment & Forest, P Javadekar: Forest cover has increased 8000sq km in 2015-2017, it can be seen from satellites. From 2014-2019, it increased by around 16000 sq km. Sometimes permission is given to cut trees for development but if 1 tree is cut, 5-10 are planted pic.twitter.com/v0vhf3cn6x
— ANI (@ANI) July 28, 2019Union Min of Environment & Forest, P Javadekar: Forest cover has increased 8000sq km in 2015-2017, it can be seen from satellites. From 2014-2019, it increased by around 16000 sq km. Sometimes permission is given to cut trees for development but if 1 tree is cut, 5-10 are planted pic.twitter.com/v0vhf3cn6x
— ANI (@ANI) July 28, 2019
ಕಳೆದ 5 ವರ್ಷಗಳಿಂದ ಭಾರತದಲ್ಲಿ ಅರಣ್ಯ ಸಂಪತ್ತು ಹೆಚ್ಚಾಗುತ್ತಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಹರ್ಷ ವ್ಯಕ್ತಪಡಿಸಿದ್ದಾರೆ. 2015 ರಿಂದ 2017ರಲ್ಲಿ 8000 ಸಾವಿರ ಚದರ ಕಿಲೋಮೀಟರ್ ಅರಣ್ಯ ಸಂಪತ್ತು ವೃದ್ದಿಸಿದೆ.
2014 ರಿಂದ 2019ರ ಅವಧಿಯಲ್ಲಿ ಒಟ್ಟಾರೆ 16 ಸಾವಿರ ಚದರ ಕಿಲೋ ಮೀಟರ್ ಅರಣ್ಯ ಪ್ರದೇಶ ಹೆಚ್ಚಾಗಿದೆ. ಈ ಬೆಳವಣಿಗೆಯನ್ನು ಸ್ಯಾಟಲೈಟ್ ದೃಶ್ಯದ ಮೂಲಕ ನೋಡಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಭಿವೃದ್ಧಿ ಕಾರಣಗಳಿಂದ ಮರ ಕಡಿಯಲು ಅನುಮತಿ ನೀಡಿದ್ದೇವೆ. ಆದರೆ ಒಂದು ಮರ ಕತ್ತರಿಸಿದರೆ, 5 ರಿಂದ 10 ಸಸಿಗಳನ್ನು ನೆಡಲಾಗುತ್ತಿದೆ ಎಂದರು.
ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಅರಣ್ಯಾಭಿವೃದ್ದಿ ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ.