ETV Bharat / bharat

ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್​ಡೌನ್​: '21 ದಿನ ಮನೆಯಲ್ಲೇ ಇರಿ' ಎಂದು ಕೈಮುಗಿದು ಬೇಡಿಕೊಂಡ ನಮೋ!

ಬಹುತೇಕ ರಾಷ್ಟ್ರಗಳು ಮಹಾಮಾರಿ ಕೊರೊನಾದಿಂದ ಸಂಕಷ್ಟಕ್ಕೊಳಗಾಗಿದ್ದು, ಅದರಿಂದ ಹೊರಬರಲು ನಿಮ್ಮಷ್ಟಕ್ಕೆ ನೀವೇ ಲಕ್ಷ್ಮಣ್ ರೇಖೆ ಹಾಕಿಕೊಳ್ಳಬೇಕಾಗಿದೆ ಎಂದಿದ್ದಾರೆ.

PM Narendra Modi coronavirus
PM Narendra Modi coronavirus
author img

By

Published : Mar 24, 2020, 8:24 PM IST

Updated : Mar 24, 2020, 8:52 PM IST

ನವದೆಹಲಿ: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ರಕ್ಕಸ ರೂಪ ಹೊರಹಾಕುತ್ತಿದ್ದು, ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಇದರಿಂದ ಹರಬರಲು ಭಾರತವೂ ಹರಸಾಹಸ ಪಡುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ನಮೋ ಮಾತನಾಡಿದರು.

ಇತ್ತೀಚೆಗಿನ ಜನತಾ ಕರ್ಫ್ಯೂ ಯಶಸ್ಸಿನಲ್ಲಿ ಪ್ರತಿಯೊಬ್ಬ ಭಾರತೀಯ ಕೊಡುಗೆ ಅಪಾರವಾಗಿದ್ದು, ಮಕ್ಕಳಿಂದ ಹಿಡಿದು ವೃದ್ಧರು ಇದರಲ್ಲಿ ಭಾಗಿಯಾಗಿದ್ದಾರೆ. ಸದ್ಯದಲ್ಲೇ ಭಾರತವೂ ಮಹತ್ವದ ನಿರ್ಧಾರವೊಂದು ತೆಗೆದುಕೊಳ್ಳಲಿದೆ. ಇಂದಿನ ಮಧ್ಯರಾತ್ರಿಯಿಂದ ಇಡೀ ದೇಶವೇ ಲಾಕ್​​ಡೌನ್​​ ಆಗಲಿದೆ. ದೇಶವನ್ನು ಕೊರೋನಾದಿಂದ ಬಚಾವ್​​ ಮಾಡಲು ನಾವು ಮನೆಯಲ್ಲೇ ಉಳಿಯಬೇಕಿದೆ ಎಂದರು.

ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್​ಡೌನ್: ಮೋದಿ

ಮಹಾಮಾರಿ ಕೊರೊನಾ ತಡೆಗಟ್ಟಲು ‘ಸಾಮಾಜಿಕ ಅಂತರವೊಂದೇ ಮಹತ್ವದ ನಿರ್ಧಾರವಾಗಿದ್ದು, ಎಷ್ಟೇ ಮುನ್ನಚ್ಚರಿಕೆ ಕ್ರಮ ಕೈಗೊಂಡರೂ ನಿತ್ಯ ವ್ಯಾಪಕವಾಗಿ ಹರಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಶ್ವದ ಸಮರ್ಥ ದೇಶಗಳನ್ನ ಕೊರೊನಾ ಮಹಾಮಾರಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿಸಿದ್ದು, ಎಲ್ಲರೂ ಒಗ್ಗಟ್ಟಿನಿಂದ ಮಹಾಮಾರಿ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು. ನೀವು ಈಗ ಎಲ್ಲಿದ್ದೀರಿ ಅಲ್ಲೇ ಇರಿ, ಮುಂದಿನ 21 ದಿನ ಯಾವುದೇ ಕಾರಣಕ್ಕೂ ಹೊರಬರಬೇಡಿ. ಜನತಾ ಕರ್ಫ್ಯೂಗಿಂತಲೂ ಇದು ಒಂದು ಹೆಜ್ಜೆ ಮುಂದೆ. ಮುಂದಿನ 21 ದಿನಗಳ ಕಾಲ ಮನೆಯಲ್ಲಿ ಇರಿ. ನಾನು ಈ ಮಾತು ಪ್ರಧಾನಿ ಅಲ್ಲ ನಿಮ್ಮ ಮನೆ ಸದಸ್ಯನಾಗಿ ಹೇಳುತ್ತಿದ್ದೇನೆ ಎಂದರು.

Last Updated : Mar 24, 2020, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.