ಮುಂಬೈ: ಹುಟ್ಟುಹಬ್ಬ ಆಚರಣೆಯೇ ಯುವಕನ ಪ್ರಾಣ ತೆಗೆದ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಸ್ನೇಹತದ ಹೆಸರಲ್ಲಿ ಮುಹೂರ್ತ ಇಟ್ಟಿದ್ದ ಆತನ ಫ್ರೆಂಡ್ಸ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ.
ಭಾನುವಾರದ ತಡರಾತ್ರಿ 27 ವರ್ಷದ ಯುವಕ ನಿತೀಶ್ ಸಾವಂತ್ನನ್ನು ಅವನ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲೇ ಆತನ ಸ್ನೇಹಿತರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ.

ಈ ಘಟನೆ ಘಾಟ್ಕೋಪರ್ ಪ್ರದೇಶದಿಂದ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಇವರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದರ ಪರಿಣಾಮವಾಗಿಯೇ ಆತನ ಮೇಲೆ ಸುಮಾರು 8 ಜನರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಕೆಲವು ಸ್ನೇಹಿತರೊಂದಿಗೆ ವಾಗ್ವಾದ ನಡೆಸಿದ್ದಾನೆ, ತದನಂದರ ಪರಿಸ್ಥಿತಿ ವಿಕೋಪಕ್ಕೆ ತಲುಪಿದ್ದು, 7-8 ಜನರು ಸೇರಿ ಈತನನ್ನು ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿ ಸುಮಾರು 4-5 ದಿನಗಳ ಹಿಂದೆ ಕೆಲವು ವ್ಯಕ್ತಿಗಳ ಜೊತೆ ಗಲಾಟೆ ಮಾಡಿದ್ದಾನೆ ಎಂದು ಘಟನೆಯ ಕುರಿತು ಪೊಲೀಸ್ ಅಧಿಕಾರಿ ಪ್ರತಾಪ್ ಬೋಸ್ಲೇ ಪ್ರತಿಕ್ರಿಯಿಸಿದ್ದಾರೆ.
ಮೃತ ವ್ಯಕ್ತಿ ಸುಮಾರು 4-5 ದಿನಗಳ ಹಿಂದೆಯೇ ತನ್ನ ಸ್ನೇಹಿತರೊಂದಿಗೆ ವಾಗ್ವಾದ ನಡೆಸಿದ್ದರ ಪರಿಣಾಮವಾಗಿ ಆತನನ್ನು ಕೊಲ್ಲಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.ಈ ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆ.