ಮುಂಬೈ(ಮಹಾರಾಷ್ಟ್ರ): ಮಂಗಳವಾರ ರಾತ್ರಿ ಕುರ್ಲಾ ರೈಲ್ವೆ ಸ್ಟೇಷನ್ ಬಳಿ ಸರಕು ಸಾಗಣೆ ರೈಲಿನ ಎರಡು ಬೋಗಿಗಳು ಹಳಿತಪ್ಪಿದ ಕಾರಣ ರೈಲ್ವೆ ಸೇವೆಯಲ್ಲಿ ವ್ಯತ್ಯಯವಾಗಿದೆ.
-
#UPDATE: Train services have resumed on the Harbour line. #Maharashtra https://t.co/ZVCaUUxncy
— ANI (@ANI) January 15, 2020 " class="align-text-top noRightClick twitterSection" data="
">#UPDATE: Train services have resumed on the Harbour line. #Maharashtra https://t.co/ZVCaUUxncy
— ANI (@ANI) January 15, 2020#UPDATE: Train services have resumed on the Harbour line. #Maharashtra https://t.co/ZVCaUUxncy
— ANI (@ANI) January 15, 2020
ರಾತ್ರಿ 11:30 ರ ಸುಮಾರಿಗೆ ರೈಲ್ವೆ ಟ್ರ್ಯಾಕ್ ಬಳಿ ಜೋರಾದ ಶಬ್ದ ಕೇಳಿ ಬಂತು. ನಾವೆಲ್ಲ ಹೋಗಿ ನೋಡಿದಾಗ ರೈಲಿನ ಎರಡು ಬೋಗಿಗಳು ಹಳಿತಪ್ಪಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆಯಿಂದ ಮುಂಬೈನತ್ತ ತೆರಳುವ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬೇರೆ ಬೇರೆ ಪ್ರದೇಶಗಳಿಂದ ಆಗಮಿಸಿದ್ದ ನೂರಾರು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ರಾತ್ರಿಯಿಂದ ಸತತ ಕಾರ್ಯಾಚಣೆ ನಡೆಸಿದ ಸಿಬ್ಬಂದಿ, ಹಳಿ ತಪ್ಪಿದ್ದ ರೈಲನ್ನು ಮತ್ತೆ ಟ್ರ್ಯಾಕ್ಗೆ ನಿಲ್ಲಿಸಿದ್ದು, ಮುಂಜಾನೆಯಿಂದ ರೈಲು ಸಂಚಾರ ಯತಾಸ್ಥಿತಿಗೆ ಮರಳಿದೆ.