ETV Bharat / bharat

ವಿಶ್ವ ಮಹಿಳಾ ದಿನಕ್ಕೆ ಉಡುಗೊರೆ: ಈ ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್​​ಗಳು ಲಭ್ಯ - ಮಾರ್ಚ್ 8 ರಿಂದ ಎಲ್ಲಾ ನೋಯ್ಡಾ ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ಸ್​ ಲಭ್ಯ

ಇಲ್ಲಿನ ನೋಯ್ಡಾ ಮೆಟ್ರೋ ನಿಲ್ದಾಣದ ಮೆಟ್ರೋ ನಿಲ್ದಾಣಗಳಲ್ಲಿ ಇನ್ನುಮುಂದೆ ಮಹಿಳೆಯರಿಗೆ ಅವಶ್ಯಕವಾದ ಸ್ಯಾನಿಟರಿ ಪ್ಯಾಡ್​​ಗಳು ಉಚಿತವಾಗಿ ಲಭ್ಯವಾಗಲಿವೆ. ಮಾರ್ಚ್ 8 ರಿಂದ ಗ್ರೇಟರ್ ನೋಯ್ಡಾ ಮೆಟ್ರೋದ ಎಲ್ಲಾ 21 ನಿಲ್ದಾಣಗಳಲ್ಲಿ ಈ ಸೌಲಭ್ಯ ಸಿಗಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

Metro station
ಮೆಟ್ರೋ ನಿಲ್ದಾಣ
author img

By

Published : Mar 6, 2020, 11:58 AM IST

ನೋಯ್ಡಾ (ಉತ್ತರ ಪ್ರದೇಶ): ವಿಶ್ವ ಮಹಿಳಾ ದಿನಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದೆ. ಇಲ್ಲಿನ ನೋಯ್ಡಾ ಮೆಟ್ರೋ ನಿಲ್ದಾಣಗಳಲ್ಲಿ ಇನ್ನುಮುಂದೆ ಮಹಿಳೆಯರಿಗೆ ಅವಶ್ಯಕವಾದ ಸ್ಯಾನಿಟರಿ ಪ್ಯಾಡ್​​ಗಳು ಉಚಿತವಾಗಿ ಲಭ್ಯವಾಗಲಿವೆ. ಮಾರ್ಚ್ 8 ರಿಂದ ಗ್ರೇಟರ್ ನೋಯ್ಡಾ ಮೆಟ್ರೋದ ಎಲ್ಲಾ 21 ನಿಲ್ದಾಣಗಳಲ್ಲಿ ಈ ಸೌಲಭ್ಯ ಸಿಗಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಮೇಕಪ್​ ರೂಂ ಸೇರಿದಂತೆ, ಗುಲಾಬಿ ಕೇಂದ್ರಗಳಲ್ಲಿ ಫೀಡಿಂಗ್​ ರೂಂ, ಡೈಪರ್​ ಬದಲಿಸುವ ಸೌಲಭ್ಯ, ವ್ಯಾನಿಟಿ ಮತ್ತು ಚೇಂಜಿಂಗ್​ ರೂಂ ಸಹ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಪಿಂಕ್​ ಸ್ಟೇಷನ್​​ಗಳನ್ನೂ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಮಹಿಳೆಯರನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೋಯ್ಡಾದ ಸೆಕ್ಟರ್​ 76ನ ಎರಡು ಸ್ಟೇಷನ್​​ಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನು ಹೊಂದುವ ಗುರಿ ಹೊಂದಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ, ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡುವ ಕೆಲಸ, ಇತರ ಎಲ್ಲ ಸಿಬ್ಬಂದಿ ಈ ನಿಲ್ದಾಣಗಳಲ್ಲಿ ಸ್ತ್ರೀಯರಾಗಿರುತ್ತಾರೆ ಎಂದು ಅಧಿಕಾರಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.