ಪಂಜಾಬ್: ಸೋಮವಾರ ಗಾಲ್ವನ್ ಕಣಿವೆಯಲ್ಲಿ ನಡೆದ ಇಂಡೋ-ಚೀನಾ ಸಂಘರ್ಷದಲ್ಲಿ ಪಂಜಾಬ್ನ 4 ಯೋಧರು ಹುತಾತ್ಮರಾಗಿದ್ದಾರೆ.
ಮಾನ್ಸಾ ಜಿಲ್ಲೆಯ ಬುಧ್ಲಾ ತಾಲೂಕಿನ ಬೀರೆವಾಲಾ ದೋಗ್ರಾ ಗ್ರಾಮದ ಗುರುತೇಜ್ ಸಿಂಗ್ (23) ಮನೆಯಲ್ಲಿ ಕತ್ತಲು ಆವರಿಸಿದೆ. ಗುರುತೇಜ್ ಅವರು ತಂದೆ ವಿರ್ಸಾ ಸಿಂಗ್, ತಾಯಿ ಮತ್ತು ಇಬ್ಬರು ಹಿರಿಯ ಸಹೋದರನ್ನು ಅಗಲಿದ್ದಾರೆ. ಕುಟುಂಬದ ರೋಧನ ಮುಗಿಲು ಮುಟ್ಟಿದೆ.
20 ದಿನಗಳ ಹಿಂದೆ ಗುರುತೇಜ್ ಅವರ ಹಿರಿಯ ಸಹೋದರನ ಮದುವೆಯಾಗಿತ್ತು. ಕುಟುಂಬ ಸದಸ್ಯರೊಂದಿಗೆ ಕೊನೆಯ ಬಾರಿ ದೂರವಾಣಿಯಲ್ಲಿ ಮಾತನಾಡಿದಾಗ, ಅವರು ತಮ್ಮ ಅತ್ತಿಗೆಯನ್ನು ಭೇಟಿಯಾಗಲು ಶೀಘ್ರದಲ್ಲೇ ಬರುತ್ತೇನೆ ಅಂದಿದ್ದರಂತೆ. ಆದರೆ ಈಗ ಅವರ ವೀರ ಮರಣ ಕುಟುಂಬವನ್ನು ದುಖಃದ ಮಡುವಿಗೆ ನೂಕಿದೆ.
ಲಡಾಖ್‌ನಲ್ಲಿ ಎಲ್‌ಎಸಿಯಲ್ಲಿ ಪಟಿಯಾಲ ಗ್ರಾಮದ ನಾಯಬ್ ಸುಬೇದಾರ್ ಮಂದೀಪ್ ಸಿಂಗ್, ಗುರುದಾಸ್‌ಪುರ ಗ್ರಾಮದ ಸತ್ನಂ ಸಿಂಗ್ ಸಹ ಹುತಾತ್ಮರಾಗಿದ್ದಾರೆ.