ಪ್ರಕಾಶಂ (ಆಂಧ್ರ ಪ್ರದೇಶ): ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಬಳ್ಳಾರಿ ಮೂಲದ ನಾಲ್ವರು ಸಾವನ್ನಪ್ಪಿರುವ ಘಟನೆ ಪ್ರಕಾಶಂ ಜಿಲ್ಲೆಯ ಕೊತ್ತಪಲ್ಲಿಯಲ್ಲಿ ನಡೆದಿದೆ.
![ರಸ್ತೆ ಅಪಘಾತದಲ್ಲಿ ಬಳ್ಳಾರಿ ಮೂಲದ ನಾಲ್ವರ ಸಾವು, Four Bellary persons died in road accident at Andhra Pradesh](https://etvbharatimages.akamaized.net/etvbharat/prod-images/ap-ong-81-12-accident-mruti-av-ap10071_12122019074620_1212f_1576116980_1044_1212newsroom_1576124868_79.jpg)
ಶ್ರೀಶೈಲಂಗೆ ಭೇಟಿ ನೀಡಿ ತಿರುಮಲಕ್ಕೆ ತೆರಳುವ ಹಾದಿಯಲ್ಲಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದಂತೆ ಇನ್ನೂ 8 ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಪೊಡಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರೆಲ್ಲಾ ಬಳ್ಳಾರಿ ಮೂಲದವರೆಂದು ತಿಳಿದುಬಂದಿದೆ. ಲಾರಿ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದೆ.