ETV Bharat / bharat

8 ದಶಲಕ್ಷ ವರ್ಷಗಳಷ್ಟು ಹಳೆಯ ಆನೆಯ ಪಳೆಯುಳಿಕೆ ಪತ್ತೆ!

ಅಂದಾಜು 5ರಿಂದ 8 ದಶಲಕ್ಷ ವರ್ಷಗಳಷ್ಟು ಹಳೆಯದಾದ ಆನೆಯ ಪಳೆಯುಳಿಕೆ ಉತ್ತರ ಪ್ರದೇಶದ ಸಹರಾನ್‌ಪುರದ ಬಾದ್‌ಶಾಹಿ ಬಾಗ್ ಪ್ರದೇಶದಲ್ಲಿ ಪತ್ತೆಯಾಗಿದೆ.

fosssil
fosssil
author img

By

Published : Jun 20, 2020, 7:25 AM IST

ಸಹರಾನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹರಾನ್‌ಪುರದ ಬಾದ್‌ಶಾಹಿ ಬಾಗ್ ಪ್ರದೇಶದ ಪಕ್ಕದಲ್ಲಿ ಆನೆಯ ಪಳೆಯುಳಿಕೆ ಪತ್ತೆಯಾಗಿದೆ. ಈ ಪಳೆಯುಳಿಕೆ 5ರಿಂದ 8 ದಶಲಕ್ಷ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತಿದೆ.

"ಬಹಳ ಹಿಂದಿನ ಕಾಲದಲ್ಲಿ ಕಂಡುಬರುತ್ತಿದ್ದ ವೈವಿಧ್ಯಮಯ ಆನೆಯ ಪಳೆಯುಳಿಕೆ ಇದಾಗಿದೆ. ಇದು ಅಂದಾಜು 5ರಿಂದ 8 ದಶಲಕ್ಷ ವರ್ಷಗಳಷ್ಟು ಹಳೆಯದಾಗಿರಬಹುದು" ಎಂದು ಸಹರಾನ್‌ಪುರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿ.ಕೆ.ಜೈನ್ ತಿಳಿಸಿದ್ದಾರೆ.

ಒಂದು ವಾರದ ಹಿಂದೆ ಪಳೆಯುಳಿಕೆ ಪತ್ತೆಯಾಗಿದೆ. ಆದರೆ ವಾಡಿಯಾ ಇನ್‌ಸ್ಟಿಟ್ಯೂಟ್‌ನ ಪರಿಶೀಲನೆಯ ನಂತರವೇ ಇದನ್ನು ಅವಶೇಷವೆಂದು ಘೋಷಿಸಲಾಗಿದೆ ಎಂದು ಜೈನ್ ಹೇಳಿದ್ದಾರೆ.

ಈ ಮಾದರಿಯ ಮೊದಲ ಪಳೆಯುಳಿಕೆ ಪತ್ತೆಯಾಗಿದ್ದು, ನಾವು ಇದನ್ನು ಸಂರಕ್ಷಿಸಿ, ಸಂಶೋಧನೆಯನ್ನು ಹೆಚ್ಚಿಸಲು ಬಯಸುತ್ತೇವೆ. ಹೆಚ್ಚಿನ ಪಳೆಯುಳಿಕೆಗಳನ್ನು ಕಂಡುಹಿಡಿಯಲು ಅಧ್ಯಯನದಲ್ಲಿ ವಿಜ್ಞಾನಿಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ ಎಂದು ವಿ.ಕೆ.ಜೈನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.